Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಸಂಸ್ಕೃತ ಭಾರತಿಯಿಂದ ಆಯೋಜಿಸಿರುವ ಅಖಿಲ ಭಾರತ ಅಧಿವೇಶನಕ್ಕೆ ಚಪ್ಪರ ಮುಹೂರ್ತ…

sgr_5168ಉಡುಪಿ:ಶ್ರೀ ಕೃಷ್ಣ ಮಠದಲ್ಲಿ ಜನವರಿ 6,7,8 ರಂದು ಸಂಸ್ಕೃತ ಭಾರತಿಯಿಂದ ಆಯೋಜಿಸಿರುವ ಅಖಿಲ ಭಾರತ ಅಧಿವೇಶನದ ಪ್ರದರ್ಶಿನಿ,ಪಾಕ ಶಾಲೆ,ಭೋಜನ ಶಾಲೆಯ ಚಪ್ಪರ ಮುಹೂರ್ತವನ್ನು ಪರ್ಯಾಯ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಶನಿವಾರದ೦ದು ನೆರವೇರಿಸಿದರು.sgr_5171

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ರಘುಪತಿ ಭಟ್,ಸಂಸ್ಕೃತ ಭಾರತಿಯ ಅಖಿಲ ಭಾರತ ಸಂಘಟನಾ ಮಂತ್ರಿ ದಿನೇಶ್ ಕಾಮತ್ ಹಾಗೂ ಸಂಸ್ಕೃತ ಭಾರತಿಯ ಉಡುಪಿ ಜಿಲ್ಲಾ ಅಧ್ಯಕ್ಷರಾದ ಪಿ.ಶ್ರೀಧರ ಆಚಾರ್, ರಾ ಸ್ವ ಸಂ ಜಿಲ್ಲಾ ಸಂಚಾಲಕರಾದ ಟಿ. ಶಂಭು ಶೆಟ್ಟಿ, ಬಿಜೆಪಿ ಮುಖಂಡರಾದ ಸೋಮಶೇಖರ ಭಟ್,ಗುರ್ಮೆ ಸುರೇಶ್ ಶೆಟ್ಟಿ, ಸ್ವಾಗತ ಸಮಿತಿಯ ಕಾರ್ಯದರ್ಶಿ ಸುಪ್ರಸಾದ ಶೆಟ್ಟಿ, ಯಶ್ಪಾಲ್ ಸುವರ್ಣ,ವಿಶ್ವನಾಥ ಭಟ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು,ದಿವಾನರಾದ ರಘುರಾಮ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

No Comments

Leave A Comment