Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

ಕಲಾವಿದರಿಗೆ ಚಪ್ಪಾಳೆ ಉಡುಗೊರೆ- ಬೇಬಿ ಚಿತ್ರಾಲಿ

hiriyadka_clgಉಡುಪಿ: ಕಲಾವಿದರಿಗೆ ಚಪ್ಪಾಳೆಯೇ ಎಲ್ಲಾ ಎಂದು ಡ್ರಾಮಾ ಜ್ಯೂನಿಯರ್ ಪ್ರಶಸ್ತಿ ವಿಜೇತೆ ಬೇಬಿ ಚಿತ್ರಾಲಿ ಹೇಳಿದರು.ಅವರು ಹಿರಿಯಡಕದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ಸ್ಪರ್ಧೆಗಳು ‘ಸೃಜನಸಿರಿ 2016ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಬೇಬಿ ಚಿತ್ರಾಲಿ ವೇದಿಕೆಯಲ್ಲಿ ಝೀನಿಯಾ ನೆಡುವುದರ ಮೂಲಕ ವಿನೂತನವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳ ಹಾಗೂ ಕಲಾಭಿಮಾನಿಗಳ ಕೋರಿಕೆಯ ಮೇರೆಗೆ ಬೇಬಿ ಚಿತ್ರಾಲಿ ಡ್ರಾಮಾಜ್ಯೂನಿಯರ್‍ಸ್ ಸ್ಪರ್ಧೆಯ ಕೆಲವು ಮುಖ್ಯ ಪಾತ್ರಗಳಾದ ಕಲ್ಪನಾ, ನಾಗವಲ್ಲಿ, ರಾಮಾಚಾರಿ, ಮಂಥರೆ ಮುಂತಾದವುಗಳನ್ನು ಅಭಿನಯಿಸಿ ಎಲ್ಲರ ಮನಗೆದ್ದರು.

ಕಾಲೇಜಿನ ವಿದ್ಯಾರ್ಥಿಯಾದ ರಾಘವೇಂದ್ರ ರಚಿಸಿ, ಸುಶ್ಮಿತಾ ರಾಗ ಸಂಯೋಜಿಸಿದ ಆಶಯ ಗೀತೆಯನ್ನು ಈ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಮಾನವತ ಹಾಗೂ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಬೇಬಿ ಚಿತ್ರಾಲಿ ಹಾಗೂ ಅವರ ಪೋಷಕರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಸನ್ಮಾನಕ್ಕೆ ಉತ್ತರಿಸಿದ ಬೇಬಿ ಚಿತ್ರಾಲಿಯ ತಂದೆ ತೇಜ್‌ಪಾಲ್ ಡ್ರಾಮಾ ಜ್ಯೂನಿಯರ್ ಪಯಣವನ್ನು ಮೆಲುಕು ಹಾಕುವುದರ ಜೊತೆಗೆ ಸಂಸ್ಥೆಗೆ ಕೃತಜ್ಞತೆಯನ್ನು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಸೋಜನ್‌ಕೆ.ಜಿ ಅಧ್ಯಕ್ಷತೆ ವಹಿಸಿದರು. ವಿದ್ಯಾರ್ಥಿ ಕ್ಷೇಮಾಪಾಲಕಿ ಕು| ಆಶಾ ಬಾರಕೂರು ಸ್ವಾಗತಿಸಿ, ವಿದ್ಯಾರ್ಥಿನಿ ಸರಿತಾ ವಂದಿಸಿರು. ಕಾರ್ಯಕ್ರಮವನ್ನು ಇತಿಹಾಸ ಉಪನ್ಯಾಸಕಿ ಸುಲೋಚನಾ ನಿರೂಪಿಸಿದರು.

No Comments

Leave A Comment