Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಉಡುಪಿ:ಯಕ್ಷನಿಧಿ ಡೈರಿ-2017 ಬಿಡುಗಡೆ

vmp_4982ಉಡುಪಿ : ಯಕ್ಷಗಾನ ಕಲಾವಿದರ ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನೊಳಗೊಂಡ ಯಕ್ಷನಿಧಿ ಡೈರಿ-2017ನ್ನು ಡಿಸೋಬರ್ ೨೩ ರಂದು ಯಕ್ಷಗಾನ ಕಲಾರಂಗದ ಕಛೇರಿಯಲ್ಲಿ ಉದ್ಯಾವರದ ಉದ್ಯಮಿ ಸಾಧು ಸಾಲ್ಯಾನ್ ಬಿಡುಗಡೆಗೊಳಿಸಿದರು.

ಕಿದಿಯೂರು ಹೋಟೇಲಿನ ಮ್ಯಾನೇಜಿಂಗ್ ಡೈರೆಕ್ಟರ್‌ರಾದ ಭುವನೇಂದ್ರ ಕಿದಿಯೂರು ಅವರು ಅತಿಥಿಗಳಾಗಿ ಭಾಗವಹಿಸಿದ ಈ ಸಮಾರಂಭದಲ್ಲಿ ಇತ್ತೀಚಿಗೆ ನಿಧನರಾದ ಸೌಕೂರು ಮೇಳದ ಹಿಮ್ಮೇಳ ಕಲಾವಿದರಾದ ಶಿರ್ಸಿಯ ಕೆಸರುಕೊಪ್ಪದ ಶಿವರಾಮ ದೇವೆಗೌಡರ ಪರವಾಗಿ ಅವರ ಪತ್ನಿ ಮಂಜುಳಾರವರಿಗೆ ಗುಂಪುವಿಮೆ ಮೊತ್ತ ರೂ. 50,000/- ನೀಡಲಾಯಿತು.
ಜತೆಗೆ ಶಿಕ್ಷಾಸಹಯೋಗ ಯೋಜನೆಯಡಿ ೫೮ ಯಕ್ಷಗಾನ ಕಲಾವಿದರ ಮಕ್ಕಳಿಗೆ ತಲಾ ರೂ. 1200/-ರಂತೆ ವಿದ್ಯಾರ್ಥಿವೇತನ ವಿತರಿಸಲಾಯಿತು.

ಆರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಕೆ. ಗಣೇಶ್ ರಾವ್ ಸ್ವಾಗತಿಸಿದರು. ಉಪಾಧ್ಯಕ್ಷರುಗಳಾದ ಎಸ್. ವಿ. ಭಟ್, ಎಂ. ಗಂಗಾಧರ್ ರಾವ್ ಮತ್ತು ಕೋಶಾಧಿಕಾರಿ ಕೆ. ಮನೋಹರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಾರ್ಯದರ್ಶಿ ಮುರಲಿ ಕಡೆಕಾರ್ ನಿರ್ವಹಿಸದರು.

No Comments

Leave A Comment