Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ವಡೋದರಾದಲ್ಲಿ ಗುಂಡು ಪಾರ್ಟಿ : 200 ಕ್ಕೂ ಹೆಚ್ಚು ವಿವಿಐಪಿಗಳ ಬಂಧನ !

555ವಡೋದರಾ : ಇಲ್ಲಿ ಮದ್ಯದ ಪಾರ್ಟಿ ನಡೆಸುತ್ತಿದ್ದ ಫಾರ್ಮ್ ಹೌಸ್‌ ಒಂದರ ಮೇಲೆ ದಾಳಿ ನಡೆಸಿದ ಪೊಲೀಸರು ಗಣ್ಯರು ಸೇರಿದಂತೆ 200ಕ್ಕೂ ಹೆಚ್ಚು ಜನರನ್ನು ಬಂಧಿಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ವರದಿಯಾದಂತೆ ಜಂಟಿ ಕಾರ್ಯಾಚರಣೆಗಿಳಿದ ಅಹಮದಾಬಾದ್‌ ಮತ್ತು ವಡೋದರಾ ಪೊಲೀಸರು ಖ್ಯಾತ ಉದ್ಯಮಿ ಜೀತೇಂದ್ರ ಶಾ ಅವರ ಮಗಳ ರಿಸೆಪ್ಷನ್‌ ನಡೆಯುತ್ತಿದ್ದ ಫಾರ್ಮ್ ಹೌಸ್‌ ಮೇಲೆ ದಾಳಿ ನಡೆಸಿ 20 ಬಾಕ್ಸ್‌ಗಳಿಗೂ ಹೆಚ್ಚು ವಿದೇಶಿ ಮದ್ಯವನ್ನು ಜಪ್ತಿ ಮಾಡಿದ್ದಾರೆ.

ರಾಜ್ಯದಲ್ಲಿ ಮದ್ಯ ನಿಷೇಧದ ಹೊರತಾಗಿಯೂ ಪಾನಗೋಷ್ಠಿ ನಡೆಸಿದ ಕಾರಣಕ್ಕೆ ದಾಳಿ ನಡೆಸಿದ್ದು, ಬಂಧನಕ್ಕೊಳಗಾದವರು ಅತೀಗಣ್ಯರಾಗಿದ್ದು, 50 ಮಂದಿ ಮಹಿಳೆಯರು ಇದ್ದರು. ಗಣ್ಯರ ಪೈಕಿ ಐಪಿಎಲ್‌ ಚೇರ್‌ವೆುನ್‌‌ ಚಿಯಾಯು ಅಮೀನ್‌ ಅವರು ಇದ್ದಾರೆ ಎಂದು ವರದಿಯಾಗಿದೆ.

ಗುಜರಾತ್ ಸರಕಾರ ರಾಜ್ಯದಲ್ಲಿ ಮದ್ಯ ಮಾರಾಟ ಮತ್ತು ಮದ್ಯಪಾನದ ವಿರುದ್ಧ ನಿಯಮಗಳನ್ನು ಬಿಗಿಗೊಳಿಸಿದ್ದು,  ಮಾರಾಟ ಮತ್ತು ಮದ್ಯ ಖರೀದಿ ತೊಡಗಿಕೊಂಡಿರುವರಿಗೆ  10 ವರ್ಷಗಳ ಜೈಲು,  5 ಲಕ್ಷ ರೂ ದಂಡ ವಿಧಿಸಲು ಸುಗ್ರೀವಾಜ್ಞೆ ಹೊರಡಿಸಿದೆ.

 

No Comments

Leave A Comment