Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಉಡುಪಿ ಜಿಲ್ಲೆಯ ಗೃಹರಕ್ಷಕದಳದ ಜಿಲ್ಲಾ ಮಟ್ಟದ ಕ್ರಿಡಾಕೂಟದ ಸಮಾರೋಪ ಸಮಾರಂಭ

img_0233ಉಡುಪಿ : ಕ್ರೀಡೆಯಲ್ಲಿ ಫಲಿತಾಂಶಕ್ಕಿಂತ ಭಾಗವಹಿಸುವಿಕೆ ಮುಖ್ಯವಾಗಿದೆ. ಕ್ರೀಡೆಯಿಂದ ದೈಹಿಕ ಕ್ಷಮತೆ ಹೆಚ್ಚುವುದರೊಂದಿಗೆ ಮದುಮೇಹ ರಕ್ತದೊತ್ತಡದಂತಹ ಕಾಯಿಲೆಗಳನ್ನು ನಿಯಂತ್ರಿಸಬಹುದಾಗಿದೆ. ಅಲ್ಲದೆ ಕ್ರೀಡೆಯಲ್ಲಿ ನಿಯಮಗಳನ್ನು ಪಾಲಿಸುವುದರಿಂದ ಶಿಸ್ತು ಬದ್ದ ಜೀವನ ನಡೆಸಲು ಸಹಕಾರಿಯಾಗುವುದು ಎಂದು ಜಿಲ್ಲಾ ಗೃಹ ರಕ್ಷಕದಳ ಕಮಾಂಡೆಂಟ್ ಡಾ.ಪ್ರಶಾಂತ್ ಶೆಟ್ಟಿ ಉಡುಪಿ ಜಿಲ್ಲಾ ಮಟ್ಟದ ಗೃಹ ರಕ್ಷಕ ದಳದ ಜಿಲ್ಲಾ ಕಚೇರಿಯಲ್ಲಿ ಗುರುವಾರ ನಡೆದ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗೃಹ ರಕ್ಷಕ ದಳ ಜಿಲ್ಲಾ ಸೆಕೆಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ, ಡೆಪ್ಯೂಟಿ ಕಮಾಂಡೆಂಟ್ ರಮೇಶ್, ಅಧೀಕ್ಷಕಿ ಕವಿತಾ ಕೆ.ಸಿ, ಪ್ರಥಮ ದರ್ಜೆ ಸಹಾಯಕಿ ಶ್ಯಾಮಲಾ ಶೆಟ್ಟಿ, ಘಟಕಾಧಿಕಾರಿಗಳಾದ ಸರಸ್ವತಿ ಮಣಿಪಾಲ, ಪ್ರಭಾಕರ ಸುವರ್ಣ ಕಾರ್ಕಳ, ನವೀನ್ ಕುಮಾರ್ ಪಡುಬಿದ್ರಿ, ಕುಮಾರ್ ಉಡುಪಿ, ಭಾಸ್ಕರ ಕುಂದಾಪುರ, ರಾಘವೇಂದ್ರ ಬೈಂದೂರು, ಲಕ್ಷ್ಮಿನಾರಾಯಣ ರಾವ್ ಕಾಪು ಇದ್ದರು.

ಇದೆ ಸಂದರ್ಭದಲ್ಲಿ ಕ್ರೀಡಾಕೂಟ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಕುಂದಾಪುರದ ಗಣೇಶ್ ಆಚಾರ್ಯ ಅವರು ಚಾಂಪಿಯನ್‌ಶಿಪ್ ಹಾಗೂ ಪಡುಬಿದ್ರಿ ಘಟಕಕ್ಕೆ ಸಮಗ್ರ ಪ್ರಶಸ್ತಿ ನೀಡಲಾಯಿತು.

ಡೆಪ್ಯೂಟಿ ಕಮಾಂಡೆಂಟ್ ರಮೇಶ್ ಸ್ವಾಗತಿಸಿದರು, ಜಿಲ್ಲಾ ಸೆಕೆಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ ವಂದಿಸಿದರು, ಹೈಟೆಕ್ ಆಸ್ಪತ್ರೆಯ ವ್ಯವಸ್ಥಾಪಕ ಸಾಯಿನಾಥ್ ಉದ್ಯಾವರ ನಿರೂಪಿಸಿದರು.

No Comments

Leave A Comment