Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ತೆರೆದ ಜಾಗದಲ್ಲಿ ಕಸ ಸುಟ್ರೆ 25000 ದಂಡ

fireತೆರೆದ ಸ್ಥಳದಲ್ಲಿ ತ್ಯಾಜ್ಯಕ್ಕೆ ಬೆಂಕಿ ಹಾಕುವುದಕ್ಕೆ ನಿಷೇಧ
– ಹಸಿರು ನ್ಯಾಯಾಧಿಕರಣದಿಂದ ಮಹತ್ವದ ಆದೇಶ
– ಬೆಂಕಿ ಹಾಕಿದರೆ 5ರಿಂದ 25,000 ರೂ.ವರೆಗೆ ದಂಡ

ಹೊಸದಿಲ್ಲಿ: ತೆರೆದ ಸ್ಥಳದಲ್ಲಿ ಕಸ ಸುಡುವುದನ್ನು ದೇಶಾದ್ಯಂತ ಸಂಪೂರ್ಣ ನಿಷೇಧಿಸಿ ರಾಷ್ಟ್ರೀಯ ಹಸಿರು ಮಂಡಳಿ ಗುರುವಾರ ಆದೇಶ ನೀಡಿದೆ. ಇದನ್ನು ಉಲ್ಲಂ ಸಿದರೆ ಗರಿಷ್ಠ 25 ಸಾವಿರ ರೂ. ದಂಡ ವಿಧಿಸುವಂತೆ ಸೂಚಿಸಿದೆ.

ಘನ ತ್ಯಾಜ್ಯ ನಿರ್ವಹಣೆ ವಿಧಾನವನ್ನು ಸುಧಾರಿಸುವ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಸ್ಪಷ್ಟ ಸೂಚನೆ ನೀಡಬೇಕೆಂದು ಕೋರಿ ಆಲಿ¾ತ್ರಾ ಪಟೇಲ್‌ ಮತ್ತಿತರರು ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿ ನ್ಯಾಯಾಲಯ ಈ ತೀರ್ಪು ನೀಡಿದೆ.

ಯಾವುದೇ ವ್ಯಕ್ತಿ, ಸಂಸ್ಥೆ ಅಥವಾ ಯೋಜನೆ ನಿರ್ವಾಹಕರು, ವ್ಯಾಪಾರಿಗಳು ಸಣ್ಣ ಪ್ರಮಾಣದ ಕಸವನ್ನು ಸುಟ್ಟರೆ 5,000 ರೂ. ಹಾಗೂ ದೊಡ್ಡ ಪ್ರಮಾಣದಲ್ಲಿ ಸುಟ್ಟರೆ 25,000 ರೂ. ಪಾರಿಸರಿಕ ಪರಿಹಾರ ನೀಡಬೇಕೆಂದು ನ್ಯಾ| ಸ್ವತಂತ್ರಕುಮಾರ್‌ ನೇತೃತ್ವದ ಪೀಠ ಆದೇಶ ನೀಡಿದೆ.

ಪ್ರತಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು 2016ರ ಘನ ತ್ಯಾಜ್ಯ ನಿರ್ವಹಣೆ ನಿಯಮಗಳನ್ನು ಪಾಲಿಸಬೇಕು. ಕಡಿಮೆ ಬಾಳಿಕೆಯ ಪಿವಿಸಿ ಹಾಗೂ ಕ್ಲೋರಿನೇಟ್‌ಗೊಳಿಸಿದ ಪ್ಲಾಸ್ಟಿಕ್‌ಗಳನ್ನು ಆರು ತಿಂಗಳುಗಳ ಒಳಗೆ ನಿಷೇಧಿಸುವಂತೆ ಪರಿಸರ ಸಚಿವಾಲಯ ಎಲ್ಲ ರಾಜ್ಯಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಈ ಆದೇಶ ಹೊರಬಿದ್ದ ನಾಲ್ಕು ವಾರಗಳ ಒಳಗೆ ನಿರ್ದೇಶನಗಳು ಜಾರಿಗೆ ಬರಬೇಕು. ನಿಗದಿತ ಕಾಲಮಿತಿಯೊಳಗೆ ಹಂತ ಹಂತವಾಗಿ ಕಾರ್ಯಯೋಜನೆಯನ್ನು ದೇಶದಲ್ಲಿ ಜಾರಿಗೆ ತರಬೇಕೆಂದು ಸೂಚಿಸಲಾಗಿದೆ.

ತ್ಯಾಜ್ಯ ಸಂಸ್ಕರಣೆ, ವಿಲೇವಾರಿ ಹಾಗೂ ಹೂಳುವ ಸ್ಥಳದ ಆಯ್ಕೆ ಮತ್ತು ನಿರ್ಮಾಣವು 2016ರ ಕಾಯ್ದೆಯಂತೆಯೇ ಆಗಬೇಕು. ಜೈವಿಕವಾಗಿ ವಿಘಟನೆಯಾಗದ ತ್ಯಾಜ್ಯ ಮತ್ತು ಮರುಬಳಕೆಯಾಗದ ಪ್ಲಾಸ್ಟಿಕ್‌ಗಳನ್ನು ಹೂಳುವ ಸ್ಥಳದಿಂದ ಪ್ರತ್ಯೇಕಿಸಿ, ದೇಶಾದ್ಯಂತ ಕೈಗೊಳ್ಳುವ ರಸ್ತೆ ಮತ್ತು ತಟಗಳ ಗೋಡೆ ನಿರ್ಮಾಣ ಯೋಜನೆಗಳಲ್ಲಿ ಬಳಸಬೇಕೆಂದು ಆದೇಶದಲ್ಲಿ ವಿವರಿಸಲಾಗಿದೆ.

ವಿವಿಧ ರಾಜ್ಯಗಳಲ್ಲಿ ಕೃಷಿ ಹಾಗೂ ನಗರ ತ್ಯಾಜ್ಯ ಗಳನ್ನು ಭಾರೀ ಪ್ರಮಾಣದಲ್ಲಿ ಸುಡಲಾಗುತ್ತಿದೆ. ಇದರಿಂದ ವಾಯು ಮಾಲಿನ್ಯ ಉಂಟಾಗುತ್ತಿದೆ ಎಂಬ ಕೂಗು ದೇಶಾದ್ಯಂತ ಎದ್ದಿರುವ ಮಧ್ಯೆಯೇ ಈ ಆದೇಶ ನೀಡಿರುವುದು ಮಹತ್ವ ಪಡೆದಿದೆ.

 

No Comments

Leave A Comment