Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

ತಮಿಳುನಾಡು ಮುಖ್ಯಕಾರ್ಯದರ್ಶಿಗೆ IT Shock: 40 ಕೆ.ಜಿ ಚಿನ್ನ ಪತ್ತೆ!

tn-cs-house-700ಹೊಸದಿಲ್ಲಿ  : ಆದಾಯ ತೆರಿಗೆ ಅಧಿಕಾರಿಗಳು ಇಂದು ಬುಧವಾರ ಬೆಳಗ್ಗೆ ತಮಿಳು ನಾಡು ಸರಕಾರದ ಮುಖ್ಯ ಕಾರ್ಯದರ್ಶಿ ರಾಮ ಮೋಹನ ರಾವ್‌ ಅವರ ನಿವಾಸದ ಮೇಲೆ ದಾಳಿ ನಡೆಸಿಸಿದ್ದು, ದಾಳಿ ವೇಳೆ 40 ಕೆ.ಜಿ ಚಿನ್ನ, 2000ರೂಪಾಯಿ ಮುಖಬೆಲೆಯ ಹೊಸ ನೋಟಿನ 25 ಲಕ್ಷ ರೂಪಾಯಿ ಮತ್ತು ಆಸ್ತಿ ಸಂಬಂಧಿತ ದಾಖಲೆ ಪತ್ರಗಳು ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

ನಸುಕಿನ 5.30ರ ಹೊತ್ತಿಗೆ ಇಲ್ಲಿನ ಅಣ್ಣಾ ನಗರದಲ್ಲಿರುವ ರಾಮ ಮೋಹನ ರಾವ್‌ ಅವರ ನಿವಾಸಕ್ಕೆ ತೆರಳಿದ ಐಟಿ ಅಧಿಕಾರಿಗಳು ತನಿಖೆಯನ್ನು ಆರಂಭಿಸಿದರು. ರಾವ್‌ ಅವರು ತಮಿಳುನಾಡು ಸರಕಾರದ ಅತ್ಯಂತ ಹಿರಿಯ ಅಧಿಕಾರಿಗಳಾಗಿದ್ದಾರೆ.

ರಾಮ ಮೋಹನ ರಾವ್‌ ಅವರು 2016ರ ಜೂನ್‌ನಲ್ಲಿ ತಮಿಳು ನಾಡು ಸರಕಾರದ ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ಇದರ ಜತೆಗೆ ಅವರು ಜಾಗೃತ ಆಯುಕ್ತರಾಗಿಯೂ ಆಡಳಿತ ಸುಧಾರಣೆಗಳ ಆಯುಕ್ತರಾಗಿಯೂ ಹೆಚ್ಚುವರಿ ಕಾರ್ಯಭಾರ ಹೊಂದಿದ್ದಾರೆ.

ಈ ಹಿಂದೆ ರಾವ್‌ ಅವರು ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಪ್ರಧಾನ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ರಾವ್‌ ಅವರು 2017ರ ಸೆಪ್ಟಂಬರ್‌ನಲ್ಲಿ ನಿವೃತ್ತರಾಗಲಿದ್ದಾರೆ.

ಆದಾಯ ತೆರಿಗೆ ಇಲಾಖಾಧಿಕಾರಿಗಳು ಈಚೆಗೆ ಜೆ ಶೇಖರ ರೆಡ್ಡಿ, ಶ್ರೀನಿವಾಸುಲು ಮತ್ತು ಪ್ರೇಮ್‌ ಎಂಬ ಮೂವರು ಉದ್ಯಮಿಗಳಿಂದ ಒಟ್ಟು 177 ಕಿಲೋ ಚಿನ್ನ, 96 ಕೋಟಿ ರೂ. ಮೌಲ್ಯದ 500 ರೂ. ಮತ್ತು 1,000 ರೂ.ಗಳ ರದ್ದಾದ ಕರೆನ್ಸಿ ನೋಟುಗಳಳನ್ನು ಮತ್ತು 34 ಕೋಟಿ ರೂ.ಮೌಲ್ಯದ ಹೊಸ ನೋಟುಗಳನ್ನು ವಶಪಡಿಸಿಕೊಂಡಿದ್ದರು.

ಅಮಾನತು?

ರಾವ್‌ ಅವರನ್ನು ಅಮಾನತು ಮಾಡುವ ಸಾಧ್ಯತೆಗಳಿದ್ದು ಈ ಸಂಬಂಧ ಮುಖ್ಯಮಂತ್ರಿ ಪನ್ನೀರ್‌ ಸೆಲ್ವಂ ಅವರು  ತುರ್ತು ಸಭೆ ಕರೆದು ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ಸರಕಾರದ ಸಲಹೆಗಾರ್ತಿ ಉಶೀಲಾ ಬಾಲಕೃಷ್ಣನ್‌ ಅವರು ಉಪಸ್ಥಿತರಿದ್ದರು.

No Comments

Leave A Comment