Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ   <>   ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ನಗದು ರಹಿತ ವೇತನ ಪಾವತಿಗಾಗಿ ಕೇಂದ್ರದ “ಸುಗ್ರೀವಾಜ್ಞೆ”ಗೆ ಕ್ಯಾಬಿನೆಟ್ ಅನುಮೋದನೆ!

cashless-paymentsನವದೆಹಲಿ: ನಗದು ರಹಿತ ವ್ಯವಸ್ಥೆ ಉತ್ತೇಜನಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಮಹತ್ವದ ನಿರ್ಣಯ ಕೈಗೊಂಡಿದ್ದು, ದೇಶದ ಎಲ್ಲ ನೌಕರರ ವೇತವನ್ನು ನಗದು ರಹಿತವಾಗಿ ಮಾಡಲು ನಿರ್ಧರಿಸಿದೆ.

ಅದರಂತೆ ನಗದು ರಹಿತ ವೇತನ ಪಾವತಿ ಕುರಿತಂತೆ ಸುಗ್ರೀವಾಜ್ಞೆ ಹೊರಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಈ ಬಗ್ಗೆ ಕೇಂದ್ರ ಸಚಿವ ಸಂಪುಟದ ಅನುಮೋದನೆ ಕೂಡ ಪಡೆದಿದೆ. ದೆಹಲಿಯಲ್ಲಿ ಇಂದು ನಡೆದ ಕೇಂದ್ರ ಸಚಿವಸಂಪುಟಸಭೆಯಲ್ಲಿ ಕೇಂದ್ರ ಸರ್ಕಾರದ ಈ ಮಹತ್ವದ ನಿರ್ಣಯಕ್ಕೆ ಅನುಮೋದನೆ ದೊರೆತಿದ್ದು, ರಾಷ್ಟ್ರಪತಿಗಳ ಅಂಗೀಕಾರಕ್ಕೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

ಒಂದು ವೇಳೆ ಈ ಸುಗ್ರೀವಾಜ್ಞೆಗೆ ರಾಷ್ಟ್ರಪತಿಗಳ  ಅನುಮೋದನೆ ದೊರೆತರೆ ದೇಶದ ಸಂಘಟಿತ ನೌಕರರ ವಲಯಕ್ಕೆ ಮಾತ್ರ ಸೀಮಿತವಾಗಿದ್ದ ನಗದು ರಹಿತ ವೇತನ ವ್ಯವಸ್ಥೆ ಇನ್ನು ಮುಂದೆ ಕೋಟ್ಯಂತರ ಸಂಖ್ಯೆಯಲ್ಲಿ ಅಸಂಘಟಿತ ನೌಕರರಿಗೂ ಅನ್ವಯವಾಗಲಿದೆ.

ಕೇಂದ್ರ ಸರ್ಕಾರ ತನ್ನ ಈ ಸುಗ್ರೀವಾಜ್ಞೆಯನ್ನು 6 ತಿಂಗಳ ಒಳಗಾಗಿ ಸಂಸತ್ತಿನ ಉಭಯ ಕಲಾಪದಲ್ಲಿ ಮಂಡಿಸಿ ಅನುಮೋದನೆ ಪಡೆಯಬೇಕಿದೆ. ಅದರಂತೆ ಕೇಂದ್ರ ಸರ್ಕಾರ ವೇತನ ಪಾವತಿ ಕಾಯ್ದೆಗೆತಿದ್ದುಪಡಿ ತಂದು ಸಂಸತ್ತಿನ  ಉಭಯ ಕಲಾಪಗಳಲ್ಲಿ ಮಂಡಿಸುವ ಸಾಧ್ಯತೆ ಇದೆ.

ಚೆಕ್, ಇ-ಪೇಮೆಂಟ್ ಮೂಲಕ ನೌಕರರಿಗೆ ವೇತನ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಸರ್ಕಾರದ ಈ ನಿರ್ಣಯದಿಂದಾಗಿ ನಗದು ರೂಪದಲ್ಲಿ ವೇತನ ಪಡೆಯುತ್ತಿದ್ದ ಅಸಂಖ್ಯಾತ ಆಸಂಘಟಿತ ಕಾರ್ಮಿಕ ವಲಯದ ಮೇಲೆ  ಪರಿಣಾಮ ಬೀರಲಿದೆ. ಅಸಂಘಟಿತ ವಲಯದ ಕಾರ್ಮಿಕರಲ್ಲಿ ಬಹುತೇಕ ಮಂದಿಗೆ ಬ್ಯಾಂಕ್ ಖಾತೆಗಳಿಲ್ಲ. ಹೀಗಾಗಿ ಇನ್ನು ಮುಂದೆ ಅವರ ವೇತನಕ್ಕಾಗಿಯಾದರೂ ಅನಿವಾರ್ಯವಾಗಿ ಬ್ಯಾಂಕ್ ಖಾತೆಗಳನ್ನು ತೆರೆಯಬೇಕಿದೆ.  ಈಗಾಗಲೇ ದೇಶಾದ್ಯಂತ ಸುಮಾರು 27 ಕೋಟಿ ಸಾಮಾನ್ಯ ಖಾತೆಗಳಿದ್ದು, 23 ಕೋಟಿ ಜನಧನ್ ಖಾತೆಗಳಿವೆ.

No Comments

Leave A Comment