Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶ್ರೀಶಾರದಾ ಮಹೋತ್ಸವ ಸಮಿತಿಯ ಆಶ್ರಯದಲ್ಲಿ ಪೂಜಿಸಲ್ಪಟ್ಟ ಶ್ರೀಶಾರದಾ ವಿಗ್ರಹ ಇ೦ದು ವಿಸರ್ಜನಾ ಮೆರವಣಿಗೆಗೆ ಸಕಲ ಸಿದ್ದತೆ........ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಭುವನೇಶ್ವರ ಬಂದ್: ಬಿಜೆಪಿ-ಬಿಜೆಡಿ ಕಾರ್ಯಕರ್ತರ ನಡುವೆ ಮಾರಾಮಾರಿ

bjp-bjdಭುವನೇಶ್ವರ: ಕೊಲೆ ಪ್ರಕರಣ ಮತ್ತು ಸೆಕ್ಸ್ ವಿಡಿಯೋದಲ್ಲಿ ಭುವನೇಶ್ವರ ಮೇಯರ್ ಅನಂತ ನಾರಾಯಣ ಜೇನ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ಭಾರತೀಯ ಜನತಾ ಪಕ್ಷ ಕರೆದಿದ್ದ ೧೨ ಘಂಟೆಗಳ ಬಂದ್ ದಿನವಾದ ಬುಧವಾರ ಬಿಜೆಪಿ ಮತ್ತು ಬಿಜೆಡಿ (ಬಿಜು ಜನತಾ ದಳ) ಕಾರ್ಯಕರ್ತರ ನಡುವೆ ಘರ್ಷಣೆಗೆ ಎಡೆಮಾಡಿಕೊಟ್ಟಿದೆ.

ಬಿಜೆಪಿ ಕಾರ್ಯಕರ್ತರು ಧರಣಿ ನಡೆಸಿ ರಸ್ತೆಗಳಲ್ಲಿ ವಾಹನ ಓಡಾಟಕ್ಕೆ ತಡೆ ಒಡ್ಡಿದ್ದರಿಂದ ಒರಿಸ್ಸಾದ ರಾಜಧಾನಿಯಲ್ಲಿ ಸಾಮಾನ್ಯ ಜನಜೀವನ ಸ್ಥಬ್ದವಾಗಿತ್ತು.

ಇದೆ ಸಮಯದಲ್ಲಿ ಬಿಜೆಡಿ ವಿದ್ಯಾರ್ಥಿ ಸಂಘಟನೆ ಬಂದ್ ವಿರೋಧಿಸಿ ವಾಣಿ ವಿಹಾರ್ ನಿಂದ ಮಾಸ್ಟರ್ ಕ್ಯಾಂಟೀನ್ ವರೆಗೆ ಬೈಕ್ ರ್ಯಾಲಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

“ನಾವು ಶಾಂತಿಯುತವಾಗಿ ಭುವನೇಶ್ವರದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದೆವು. ಆದರೆ, ಪೊಲೀಸರು ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕಲು ಬಿಜೆಡಿಗೆ ಪಕ್ಷಕ್ಕೆ ರ್ಯಾಲಿ ನಡೆಸಲು ಅವಕಾಶ ನೀಡಿತು. ಇದು ಮುಖ್ಯಮಂತ್ರಿ ನವೀನ್ ಪಟ್ಟನಾಯಕ್ ಅವರ ಹುನ್ನಾರ” ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪೃಥ್ವಿರಾಜ್ ಹರಿಚಂದನ್ ಹೇಳಿದ್ದಾರೆ.

ಆಗ ಎರಡು ಪಕ್ಷಗಳ ಕಾರ್ಯಕರ್ತರು ಪೊಲೀಸರ ಉಪಸ್ಥಿತಿಯಲ್ಲೇ ಘರ್ಷಣೆಗೆ ಇಳಿದಿದ್ದಾರೆ.

“ನಾವು ಬಂದ್ ವಿರೋಧಿಸಿದೆವು ಮತ್ತು ಖಾಸಗಿ ಸಂಸ್ಥೆಗಳು ಹಾಗು ಅಂಗಡಿಗಳನ್ನು ತೆರೆಯಲು ಮನವಿ ಮಾಡಿದೆವು” ಎಂದು ಬಿಜೆಡಿ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಚಿನ್ಮಯ್ ಸಾಹು ಹೇಳಿದ್ದಾರೆ.

ಈ ಘಟನೆಯ ನಂತರ ಪೊಲೀಸರು ಹಲವು ಬಿಜೆಪಿ ನಾಯಕರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು ಎಂದು ಭುವನೇಶ್ವರ್ ಡಿಸಿಪಿ ಸತ್ಯಬ್ರತ ಭೋಯಿ ಹೇಳಿದ್ದಾರೆ.

No Comments

Leave A Comment