Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವರಾತ್ರೆಯ "ಚ೦ಡಿಕಾ ಹೋಮ " ಕಾರ್ಯಕ್ರಮವು 19-10-2018ರ೦ದು ಜರಗಲಿದೆ....

ನೋಟ್ ನಿಷೇಧ ನಮ್ಮ ಆಶಯ ಅಲ್ಲ: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಯೂಟರ್ನ್

naiyduಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ನೋಟ್ ನಿಷೇಧ ನಿರ್ಧಾರವನ್ನು ಬೆಂಬಲಿಸಿದ್ದ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಈಗ ಯೂಟರ್ನ್ ಹೊಡೆದಿದ್ದು, ಗರಿಷ್ಠ ಮೌಲ್ಯದ ನೋಟ್ ಗಳ ನಿಷೇಧ ನಮ್ಮ ಆಶಯ ಅಲ್ಲ ಎಂದು ಬುಧವಾರ ಹೇಳಿದ್ದಾರೆ.

500 ಹಾಗೂ 1000 ರುಪಾಯಿ ಮುಖಬೆಲೆಯ ನೋಟ್ ಗಳ ನಿಷೇಧ ಮಾಡುವ ಇಚ್ಛೆ ಮತ್ತು ಯಾವುದೇ ಆಶಯ ಇರಲಿಲ್ಲ. ಇದರಿಂದ ನಮ್ಮ ರಾಜ್ಯದ ಜನರು ಸಹ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಆಂಧ್ರ ಸಿಎಂ ಹೇಳಿದ್ದಾರೆ.

ಇಂದು ವಿಜಯವಾಡದಲ್ಲಿ ತೆಲುಗು ದೇಶಂ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಚಂದ್ರಬಾಬು ನಾಯ್ಡು ಅವರು, ನೋಟ್ ನಿಷೇಧದಿಂದಾಗಿ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದರು. ಕೇಂದ್ರ ಈ ನಿರ್ಧಾರದಿಂದಾಗಿ ಜನರ ಆದಾಯ ಕಡಿಮೆಯಾಗಿದೆ ಮತ್ತು ಸರ್ಕಾರ ಸಹ ಸೂಕ್ತ ರೀತಿಯಲ್ಲಿ ಹಣ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಅವರು ನವೆಂಬರ್ 8ರಂದು 500 ಹಾಗೂ 1000 ರುಪಾಯಿ ನೋಟ್ ಗಳನ್ನು ನಿಷೇಧಿಸುವ ನಿರ್ಧಾರ ಪ್ರಕಟಿಸಿದ ನಂತರ ತಮ್ಮ ಬೆಂಬಲ ವ್ಯಕ್ತಪಡಿಸಿದ್ದ ಚಂದ್ರ ಬಾಬು ನಾಯ್ಡು ಅವರು, ಇದು ಟಿಡಿಪಿಗೆ ದೊರೆತ ನೈತಿಕ ವಿಜಯ ಎಂದು ಹೇಳಿಕೊಂಡಿದ್ದರು.

No Comments

Leave A Comment