Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಡಿಸೆಂಬರ್ 21ರಿಂದ 28ರ ತನಕ-ಬ್ರಹ್ಮಾವರದಲ್ಲಿ ಕಿಶೋರ ಯಕ್ಷ ಸಂಭ್ರಮ

unnamed__14_ಉಡುಪಿ : ಯಕ್ಷಶಿಕ್ಷಣ ಟ್ರಸ್ಟ್ ಮತ್ತು ಪ್ರದರ್ಶನ ಸಂಘಟನಾ ಸಮಿತಿ, ಬ್ರಹ್ಮಾವರ ವತಿಯಿಂದ ವತಿಯಿಂದ ನಡೆಯುವ 14 ಪ್ರೌಢಶಾಲೆಗಳ ವಿದ್ಯಾರ್ಥಿಗಳ 15 ಯಕ್ಷಗಾನ ಪ್ರದರ್ಶನ ಡಿಸೆಂಬರ್ 21 ರಿಂದ 28ರ ತನಕ ಬ್ರಹ್ಮಾವರ ಬಸ್ಸು ನಿಲ್ದಾಣದ ಬಳಿಯ ಹಂದಾಡಿ ಸುಬ್ಬಣ್ಣ ಭಟ್ ವೇದಿಕೆಯಲ್ಲಿ ಜರಗಲಿದೆ.

ಡಿಸೆಂಬರ್ 21ರಂದು, ಸಂಜೆ 6ಗಂಟೆಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಯಕ್ಷಶಿಕ್ಷಣ ಟ್ರಸ್ಟ್ ಅಧ್ಯಕ್ಷರಾದ ಪ್ರಮೋದ್ ಮಧ್ವರಾಜ್ ಪ್ರದರ್ಶನವನ್ನು ಉದ್ಘಾಟಿಸಲಿರುವರು. ಅತಿಥಿಗಳಾಗಿ ಶ್ರೀಮತಿ ಶೀಲಾ ಕೆ. ಶೆಟ್ಟಿ, ಮುನಿಯಾಲು ಉದಯಕುಮಾರ್ ಶೆಟ್ಟಿ, ಹಾಗೂ ಬ್ರಹ್ಮಾವರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ಶ್ಯಾನುಭಾಗ್ ಭಾಗವಹಿಸಲಿರುವರು.unnamed__33_

ಡಿಸೆಂಬರ್ 28ರ ಸಂಜೆ 6ಗಂಟೆಗೆ ಸಮಾರೋಪ ಸಮಾರಂಭ ಜರಗಲಿದೆ. ಅಂದು ಕೆ. ರಘುಪತಿ ಭಟ್, ಆನಂದ ಸಿ. ಕುಂದರ್, ಕೆ. ಗಣೇಶ್ ರಾವ್, ಭುಜಂಗ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಸಲಿರುವರು. ಎರಡೂ ಕಾರ್ಯಕ್ರಮಗಳ ಸಭಾಧ್ಯಕ್ಷತೆಯನ್ನು ನಿತ್ಯಾನಂದ ಶೆಟ್ಟಿ, ಹಾರಾಡಿ ವಹಿಸಲಿರುವರು.unnamed__71_

ಇದೇ ಸಂದರ್ಭದಲ್ಲಿ ಹಿರಿಯ ಸಾಮಾಜಿಕ ಕಾರ್ಯಕರ್ತ ಟಿ. ಭಾಸ್ಕರ ರೈ ಯವರನ್ನು ಗೌರವಿಸಲಾಗುವುದು ಎಂಬುದಾಗಿ ಯಕ್ಷ ಶಿಕ್ಷಣ ಟ್ರಸ್ಟ್‌ನ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿರುತ್ತಾರೆ.unnamed__96_

No Comments

Leave A Comment