Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

ಜರ್ಮನಿಯ ಮಾರುಕಟ್ಟೆಯಲ್ಲಿ ಟ್ರಕ್‌ ದಾಳಿ:12 ಸಾವು,ಹಲವರಿಗೆ ಗಾಯ

11ಬರ್ಲಿನ್‌: ಇಲ್ಲಿನ ಕೇಂದ್ರ ಪ್ರದೇಶದ ಮಾರುಕಟ್ಟೆಯೊಂದರಲ್ಲಿ ಕ್ರಿಸ್‌ಮಸ್‌ ಶಾಪಿಂಗ್‌ ನಿರತರನ್ನು ಗುರಿಯಾಗಿರಿಸಿಕೊಂಡು ಸೋಮವಾರ ಸಂಜೆ ಟ್ರಕ್‌ ದಾಳಿ ನಡೆಸಲಾಗಿದ್ದು, ಕನಿಷ್ಠ 12 ಮಂದಿ ಸಾವನ್ನಪ್ಪಿ 48 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೊಂದು ಉಗ್ರ ದಾಳಿ ಎಂದು ಜರ್ಮನಿಯ ಆಂತರಿಕ ಸಚಿವ ಹೇಳಿದ್ದಾರೆ.

ಟ್ರಕ್ಕನ್ನು ಶಾಪಿಂಗ್‌ ನಿರತರ ಮೇಲೆ ಹಿಗ್ಗಾಮುಗ್ಗಾ ಹರಿಸಲಾಯಿತು ಎಂದು  ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗಳಿಗೆ ದಾಖಲಿಸಲಾಯಿತು.

ದಾಳಿಯ ಬಳಿಕ ಪರಾರಿಯಾದ ಚಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ಇನ್ನೋರ್ವ ದಾಳಿ ವೇಳೆ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ನಿರಾಶ್ರಿತರ ಸೋಗಿನಲ್ಲಿ ದೇಶಕ್ಕೆ ಬಂದ ಅಫ್ಘಾನ್‌ ಪ್ರಜೆ ಎಂದು ಹೇಳಲಾಗಿದೆ.

No Comments

Leave A Comment