Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಟರ್ಕಿಯಲ್ಲಿ ಭಾಷಣದ ವೇಳೆ ರಷ್ಯಾ ರಾಯಭಾರಿ ಗುಂಡಿಕ್ಕಿ ಹತ್ಯೆ

10ಅಂಕಾರಾ: ಇಲ್ಲಿನ ಚಿತ್ರ ಪ್ರದರ್ಶನವೊಂದಕ್ಕೆ ತೆರಳಿದ್ದ ರಷ್ಯಾ ರಾಯಭಾರಿ ಆ್ಯಂಡ್ರೆ ಕರ್ಲೋವ್‌ ಅವರನ್ನು ದುಷ್ಕರ್ಮಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.

ಚಿತ್ರ ಪ್ರದರ್ಶನ ವೇಳೆ ಆ್ಯಂಡ್ರೆ ಅವರು ಮಾತನಾಡುತ್ತಿದ್ದು, ಈ ಸಂದರ್ಭ ಸೂಟು-ಬೂಟು ಧರಿಸಿದ್ದ ವ್ಯಕ್ತಿಯೊಬ್ಬ ಅಲ್ಲಾಹು ಅಕºರ್‌ ಎಂದು ಕಿರುಚುತ್ತ, ಅಲೆಪ್ಪೋದಲ್ಲಿ ನಾವು ಸಾಯುತ್ತಿದ್ದೇವೆ. ಇಲ್ಲಿ ನೀನು ಸಾಯಿ ಎಂದು ಗುಂಡಿಕ್ಕಿದ್ದಾನೆ.

ಮರುಕ್ಷಣವೇ ಪೊಲೀಸರು ದಾಳಿಕೋರನನ್ನು ಹತ್ಯೆಗೈದಿದ್ದಾರೆ. ಆ್ಯಂಡ್ರೋ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಆದರೆ ಅದಾಗಲೇ ಅವರು ಮೃತಪಟ್ಟಿರುವುದಾಗಿ ಘೋಷಿಸಲಾಗಿದೆ. ಘಟನೆ ಹಿನ್ನೆಲಯಲ್ಲಿ ಟರ್ಕಿಯ ಪ್ರಮುಖ ಸ್ಥಳಗಳಲ್ಲಿ ಬಿಗಿಪೊಲೀಸ್‌ ಬಂದೋಬಸ್ತ್ ಮಾಡಲಾಗಿದೆ. ಘಟನೆಯನ್ನು ರಷ್ಯಾ ಸೇರಿದಂತೆ ವಿವಿಧ ದೇಶಗಳು ತೀವ್ರವಾಗಿ ಖಂಡಿಸಿವೆ.

 

No Comments

Leave A Comment