Log In
BREAKING NEWS >
ಉಡುಪಿಯ ಕಿನ್ನಿಮುಲ್ಕಿಯಲ್ಲಿ ಜನವರಿ 17ರ೦ದು ಸಾಯ೦ಕಾಲ 7ಗ೦ಟೆಗೆ ಉಡುಪಿಯ ಖ್ಯಾತ ಉದ್ಯಮಿ ಹಾಗೂ ಕಾ೦ಗ್ರೆಸ್ ಮುಖ೦ಡರಾದ ಕೆ.ಕೃಷ್ಣಮೂರ್ತಿ ಆಚಾರ್ಯ ಹಾಗೂ ನಗರ ಸಭಾ ಸದಸ್ಯರಾದ ಶ್ರೀಅಮೃತ ಕೃಷ್ಣಮೂರ್ತಿ ಆಚಾರ್ಯರವರ ಸಾರಥ್ಯದಲ್ಲಿ ನೂತನ ಯಶೋಧ ಆಟೋ ರಿಕ್ಷಾ ಅಸೋಸಿಯೇಷನ್ ಶುಭಾರ೦ಭಗೊಳ್ಳಲಿದೆ.

ಬಿಎಸ್‌ವೈಗೆ ಬ್ರೇಕ್‌ ಹಾಕಲು ಸಿಸಿಬಿ ತನಿಖೆ ಚುರುಕು

bsyಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಪದೇ ಪದೇ ರಾಜ್ಯದ ಮೂವರು ಸಚಿವರ ಅಕ್ರಮ ಬಯಲಿಗೆ ಬರಲಿದೆ ಎಂದು ಹೇಳುತ್ತಿದ್ದರೆ, ರಾಜ್ಯ ಸರ್ಕಾರ ಸದ್ದಿಲ್ಲದೆ ವಿಧಾನಸೌಧದ ಬಳಿ ದೊರಕಿದ 1.8 ಕೋಟಿ ರೂ. ಹಣದ ಮೂಲ ಹುಡುಕಲು ಮುಂದಾಗುವ ಮೂಲಕ ಅವರಿಗೆ ಟಾಂಗ್‌ ನೀಡಲು ಸಜ್ಜಾಗಿದೆ.

ಕಳೆದ ಅ.21ರಂದು ವಿಧಾನಸೌಧದ ಬಳಿ ಹಾವೇರಿ ಮೂಲದ ವಕೀಲ ಸಿದ್ದಾರ್ಥ ಎಂಬುವರಿಂದ ವಶಪಡಿಸಿಕೊಳ್ಳಲಾಗಿದ್ದ ಸುಮಾರು ಎರಡು ಕೋಟಿ ರೂ.ಗಳ ಮೂಲ ಹುಡುಕಲು ಪ್ರಕರಣವನ್ನು ಈ ಹಿಂದೆಯೇ ಸಿಸಿಬಿಗೆ ವಹಿಸಲಾಗಿದ್ದು, ಇದೀಗ ತನಿಖೆಯನ್ನು ತೀವ್ರಗೊಳಿಸಿದೆ. ಮೇಲುನೋಟಕ್ಕೆ ಈ ಪ್ರಕರಣಕ್ಕೂ ಮತ್ತು ಯಡಿಯೂರಪ್ಪ ಅವರಿಗೂ ನೇರ ಸಂಬಂಧವಿಲ್ಲ. ಆದರೆ, ಘಟನೆ ಬಹಿರಂಗಗೊಂಡಾಗ ಹಣದ ಮೂಲ ಯಾವುದು ಎಂದು ಯಡಿಯೂರಪ್ಪ ಅವರಿಗೆ ಗೊತ್ತು ಎಂದು ಜೆಡಿಎಸ್‌ ನಾಯಕ ಎಚ್‌. ಡಿ. ಕುಮಾರಸ್ವಾಮಿ “ಬಾಂಬ್‌ ಸಿಡಿ
ಸುವ’ ಮೂಲಕ ಹಣಕ್ಕೂ ಯಡಿಯೂರಪ್ಪ ಅವರಿಗೂ ಪರೋಕ್ಷ ಸಂಪರ್ಕ ಕಲ್ಪಿಸಿದ್ದರು. ಅನಂತರ ವಿಧಾನಸೌಧ
ಪೊಲೀಸ್‌ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿ, ವಶಪಡಿಸಿಕೊಳ್ಳಲಾದ ಹಣವನ್ನು ನ್ಯಾಯಾಲಯಕ್ಕೂ ಕಟ್ಟಲಾಗಿತ್ತು.

ಇದಾದ ನಂತರ ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಸಿಬಿಗೆ ವಹಿಸಿದ್ದು, ಹಣದ ಮೂಲ ಪತ್ತೆಗೆ ತನಿಖೆ ತೀವ್ರವಾಗಿ ಸಾಗಿದೆ ಎಂದು ಮೂಲಗಳು ತಿಳಿಸಿವೆ.

ಏಟಿಗೆ ಎದಿರೇಟು: ಕಪ್ಪು ಹಣದ ನೆಪದಲ್ಲಿ ಸಿಬಿಐ ಹಾಗೂ ಇ.ಡಿ.ಯನ್ನು ಬಳಸಿಕೊಂಡು ರಾಜ್ಯದ ಕೆಲವು ಸಚಿವರನ್ನು ಬಲಿ ಹಾಕಲು ಕೇಂದ್ರ ಸರ್ಕಾರ ಮುಂದಾಗಿದ್ದು, ತನ್ಮೂಲಕ ರಾಜ್ಯ ಕಾಂಗ್ರೆಸ್‌ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಷಡ್ಯಂತ್ರ ನಡೆದಿದೆ ಎಂಬ ಗುಮಾನಿ ಸರ್ಕಾರಕ್ಕೆ ಇದೆ. ಇದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರವು ಸಹ ತನ್ನ ತನಿಖಾ ಸಂಸ್ಥೆಗಳ ಮೂಲಕ ಬಿಜೆಪಿ ನಾಯಕರ ಅವ್ಯವಹಾರ ಪತ್ತೆ ಮಾಡಲು ಮುಂದಾಗಿದೆ. ಇದರ ಒಂದು ಅಂಗವಾಗಿ ಈ ಪ್ರಕರಣದ ತನಿಖೆ ತೀವ್ರಗೊಂಡಿದೆ ಎಂದು ಮೂಲಗಳು ತಿಳಿಸಿವೆ.

No Comments

Leave A Comment