Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಪೋರ್ಟೊ ರಿಕೊದ ಚೆಲುವೆಗೆ 2016ನೇ ಸಾಲಿನ ವಿಶ್ವ ಸುಂದರಿ ಕಿರೀಟ

miss_world1

miss-world-2016ಮೇರಿಲ್ಯಾಂಡ್(ಅಮೆರಿಕಾ): ಪೋರ್ಟೊ ರಿಕೊ ಕೆರಿಬಿಯನ್ ದ್ವೀಪದ ಸ್ಟಿಫೇನಿ ಡೆಲ್ ವಲ್ಲೆ 2016ನೇ ಸಾಲಿನ ವಿಶ್ವ ಸುಂದರಿ ಕಿರೀಟ ಧರಿಸಿದ್ದಾರೆ.

ಡೊಮಿನಿಕನ್ ರಿಪಬ್ಲಿಕ್ ದೇಶದ ಮಿಗ್ಯುಲಿನಾ ರೆಯೆಝ್ ರೆಮಿರೆಜ್ ಮೊದಲ ರನ್ನರ್ ಅಪ್ ಮತ್ತು ಇಂಡೋನೇಷಿಯಾದ ನತಾಶಾ ಮನ್ಯುಲಾ ಎರಡನೇ ರನ್ನರ್ ಅಪ್ ಆಗಿ ಆಯ್ಕೆಯಾಗಿದ್ದಾರೆ. ಭಾರತವನ್ನು ಪ್ರತಿನಿಧಿಸಿದ್ದ ಪ್ರಿಯದರ್ಶಿನಿ ಚಟರ್ಜಿ ಅಂತಿಮ 20 ಸುಂದರಿಯರ ಸ್ಥಾನವನ್ನು ಗಳಿಸಿದ್ದರು. ಈ ಬಾರಿ ಒಟ್ಟು 117 ಸುಂದರಿಯರು ಸ್ಪರ್ಧಾ ಕಣದಲ್ಲಿದ್ದರು.

miss_world

miss_world1

2015ನೇ ಸಾಲಿನ ಮಿಲ್ ವಲ್ಡ್ರ್ ಮಿರೆಯ ಲಲಗುನಾ ರೊಯೊ ಅವರು 19 ವರ್ಷದ ಸ್ಟೆಫೇನಿ ಅವರಿಗೆ ವಿಶ್ವ ಸುಂದರಿ ಕಿರೀಟ ಧರಿಸಿದರು.1975ರಲ್ಲಿ ಪೋರ್ಟೊ ರಿಕೊ ದೇಶದ ವಿಲ್ನೆಲಿಯಾ ಮರ್ಸಿಡ್ ಅವರ ನಂತರ ವಿಶ್ವ ಸುಂದರಿ ಪಟ್ಟ ತೊಟ್ಟ ಎರಡನೇ ಸುಂದರಿ ಸ್ಟೇಫೆನಿ ಆಗಿದ್ದಾರೆ.

ಅಮೆರಿಕಾದ ಎಂಜಿಎಂ ನ್ಯಾಷನಲ್ ಹಾರ್ಬರ್ ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ನಿನ್ನೆ ಅಂತಿಮ ಸುತ್ತಿನ ಸ್ಪರ್ಧೆ ನಡೆಯಿತು. ಕಾರ್ಯಕ್ರಮವನ್ನು ಝೀ ಕೆಫೆಯಲ್ಲಿ ನೇರ ಪ್ರಸಾರ ಮಾಡಲಾಗಿತ್ತು.

stephanie-del-valleಅಂತಿಮ ಸುತ್ತಿನ ಸ್ಪರ್ಧೆಗೆ ಕೆನ್ಯಾ, ಇಂಡೋನೇಷಿಯಾ, ಡೊಮೆನಿಕನ್ ರಿಪಬ್ಲಿಕ್ , ಪೋರ್ಟೊ ರಿಕೊ ಮತ್ತು ಫಿಲಿಫೈನ್ಸ್ ದೇಶದ ಸುಂದರಿಯರು ಪ್ರವೇಶ ಪಡೆದಿದ್ದರು.ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಭಾರತದ ಪ್ರಿಯದರ್ಶಿನಿ ಅಂತಿಮ 20 ಸುಂದರಿಯರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿಗೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಆದರೂ ಬ್ಯೂಟಿ ವಿತ್ ಎ ಪರ್ಪಸ್ ಟೈಟಲ್ ನಲ್ಲಿ  ಟಾಪ್ 5 ಸ್ಪರ್ಧಿಗಳ ಪೈಕಿ ಪ್ರಿಯದರ್ಶಿನಿ ಸ್ಥಾನ ಪಡೆದಿದ್ದರು. ಅದು ಮಿಸ್ ಇಂಡೋನೇಷಿಯಾ ಪಾಲಾಯಿತು.

ಈ ಹಿಂದೆ ಭಾರತಕ್ಕೆ ವಿಶ್ವ ಸುಂದರಿ ಪಟ್ಟ ಸಿಕ್ಕಿದ್ದು 2000ನೇ ಇಸವಿಯಲ್ಲಿ ಪ್ರಿಯಾಂಕಾ ಛೋಪ್ರಾ ಗೆಲ್ಲುವ ಮೂಲಕ. ಅದಕ್ಕೂ ಮುನ್ನ ರೀಟಾ ಫರಿಯಾ 1966ರಲ್ಲಿ, ಐಶ್ವರ್ಯಾ ರೈ 1994ರಲ್ಲಿ, ಡಯಾನಾ ಹೈಡನ್ 1997ರಲ್ಲಿ ಮತ್ತು ಯುಕ್ತಾ ಮುಖ್ಹೆ 1999ರಲ್ಲಿ ಗಳಿಸಿದ್ದರು.

ಗುವಾಹಟಿ ಮೂಲದ ದೆಹಲಿಯಲ್ಲಿ ನೆಲೆಸಿರುವ ಹುಡುಗಿ ಪ್ರಿಯದರ್ಶಿನಿ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಿದ ಭಾರತದ ಈಶಾನ್ಯ ಭಾಗದ ಮೊದಲ ಯುವತಿ. ಈಕೆ ಸಮಾಜಶಾಸ್ತ್ರ ವಿದ್ಯಾರ್ಥಿನಿ.

ಅಸಂಖ್ಯಾತ ಸಂಸ್ಕೃತಿಗಳು, ಸಂಪ್ರದಾಯಗಳು ಮತ್ತು ಧರ್ಮಗಳನ್ನು ಪ್ರತಿನಿಧಿಸುವ ಪ್ರದೇಶದಲ್ಲಿ ಒಂದು ದೇಶದ ನಾಗರಿಕತೆಯ ಪ್ರತಿನಿಧಿಯಾಗಿ ಇಷ್ಟೊಂದು ದೊಡ್ಡ ಸಮಾರಂಭದಲ್ಲಿ ಭಾಗವಹಿಸುವುದಕ್ಕೆ ಸಂತೋಷವಾಗುತ್ತದೆ ಎಂದು ಪ್ರಿಯದರ್ಶಿನಿ ತಮ್ಮ ಪರಿಚಯದ ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.

ಇತಿಹಾಸ: ಈ ವರ್ಷ ನಡೆದಿರುವುದು ವಿಶ್ವ ಸುಂದರಿ ಸ್ಪರ್ಧೆಯ 66ನೇ ಆವೃತ್ತಿ. ಒಂದು ಉದ್ದೇಶದೊಂದಿಗೆ ಸೌಂದರ್ಯ ಎಂಬ ಶೀರ್ಷಿಕೆಯಡಿ ನಡೆದ ಈ ವರ್ಷದ ಸ್ಪರ್ಧೆಯಲ್ಲಿ ಸ್ಪರ್ಧಾಳುಗಳಿಗೆ ಅನೇಕ ಸವಾಲುಗಳನ್ನು ನೀಡಿ ಸಂದರ್ಶನಗಳನ್ನು ಮಾಡಿ ಆಯ್ಕೆ ಮಾಡಲಾಗಿತ್ತು.

ವಿಶ್ವ ಸುಂದರಿ ಸ್ಪರ್ಧೆಯನ್ನು ಹುಟ್ಟು ಹಾಕಿದವರು ಬ್ರಿಟನ್ ನ ಎರಿಕ್ ಮೊರ್ಲೆ 1951ರಲ್ಲಿ. ಇದು ಈಗಿರುವ ಅತ್ಯಂತ ಹಳೆಯ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಾಗಿದೆಯಲ್ಲದೆ ವಿಶ್ವದ ಅತ್ಯಂತ ಮೂರು ಜನಪ್ರಿಯ ಸೌಂದರ್ಯ ಸ್ಪರ್ಧೆಗಳಲ್ಲಿ ಒಂದು. ಮಿಸ್ ಯೂನಿವರ್ಸ್ ಮತ್ತು ಮಿಸ್ ಅರ್ತ್ ಸ್ಪರ್ಧೆಗಳು ಕೂಡ ಜನಪ್ರಿಯ.

No Comments

Leave A Comment