Log In
BREAKING NEWS >
ಶಿರೂರು ಶ್ರೀಗಳು ಮಠಾಧೀಶರೇ ಅಲ್ಲ, ಸನ್ಯಾಸತ್ವ ತ್ಯಜಿಸಿದ್ದರು: ಪೇಜಾವರ ಶ್ರೀ.....ಮಧ್ವ ಸಂಪ್ರದಾಯದಂತೆ ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಜೀ ಅಂತ್ಯಕ್ರಿಯೆ!

ಭಾರತೀಯ ಸಿನಿಮಾಗಳ ನಿಷೇಧ ತೆರವುಗೊಳಿಸಿದ ಪಾಕ್‌: ಡಿ.19 ಪ್ರದರ್ಶನ

555ಇಸ್ಲಮಬಾದ್‌ : ಉರಿ ದಾಳಿ ನಡೆದ ಬಳಿಕ ಉಭಯ ದೇಶಗಳ ನಡುವೆ ಯುದ್ಧ ಸದೃಶ ವಾತಾವರಣ ನಿರ್ಮಾಣವಾದ ಬಳಿಕ ಭಾರತೀಯ ಚಿತ್ರಗಳಿಗೆ ಪಾಕಿಸ್ಥಾನಿ ಪ್ರದರ್ಶಕರು ಸ್ವಯಂ ವಿಧಿಸಿದ್ದ ನಿಷೇಧವನ್ನು ಸೋಮವಾರದಿಂದ ತೆರವುಗೊಳಿಸಲು ನಿರ್ಧರಿಸಿದ್ದಾರೆ.

ಡಿಸೆಂಬರ್‌ 19 ರಿಂದ ಭಾರತದ ಸಿನಿಮಾಗಳು ಪಾಕಿಸ್ಥಾನದ ಚಿತ್ರ ಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ. ಈ ಬಗ್ಗೆ ನಾವು ಸರಕಾರದ ಬಳಿ ಮಾತುಕತೆ ನಡೆಸಿದ್ದೇವೆ  ಎಂದು ಚಿತ್ರ ವಿತರಕರ ಸಂಘದ ಅಧ್ಯಕ್ಷ ಝೋರಾಯಿಷ್‌ ಲಾಷರಿ ತಿಳಿಸಿದ್ದಾರೆ.

ಸೊಹೈಲ್‌ ಖಾನ್‌ ಅವರ ನಿರ್ದೇಶನದ ‘ಫ್ರೀಕೀ ಅಲಿ’ ಚಿತ್ರ ಸೋಮವಾರದಿಂದ ಪಾಕ್‌ನ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ. ಚಿತ್ರದಲ್ಲಿ ನವಾಜುದ್ದೀನ್‌ ಸಿದ್ಧಿಕಿ,ಅರ್ಬಾಜ್‌ ಖಾನ್‌ಮತ್ತು ಅಮಿ ಜಾಕ್ಸನ್‌ ಅವರು ಮುಖ್ಯ ಭೂಮಿಕೆಯಲ್ಲಿದ್ದಾರೆ.

ಸ್ವಯಂ ನಿಷೇಧ ವಿಧಿಸಿದ್ದರಿಂದ ಪಾಕ್‌ನ ಚಿತ್ರಮಂದಿರಗಳಿಗೆ ಭಾರಿ ನಷ್ಟ ಉಂಟಾಗಿತ್ತಲ್ಲದೆ, ಸಿನಿ ಪ್ರಿಯರಿಗೆ ನಿರಾಸೆಯುಂಟಾಗಿತ್ತು. ಮುಂದಿನ ದಿನಗಳಲ್ಲಿ ಆಮೀರ್‌ ಖಾನ್‌ ಅವರ ಬಹು ನಿರೀಕ್ಷಿತ ‘ದಂಗಲ್‌’ ಚಿತ್ರವೂ ಬಿಡುಗಡೆಯಾಗಲಿದೆ ಎಂದು ತಿಳಿದು ಬಂದಿದೆ.

No Comments

Leave A Comment