Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ರಾತ್ರೋ ರಾತ್ರಿ ನಾಲ್ವರ ವಿರುದ್ಧ ದೂರು ದಾಖಲಿಸಿದ ಮೇಟಿ ಸಂತ್ರಸ್ತೆ

100ಬಾಗಲಕೋಟೆ : ಮಾಜಿ ಸಚಿವ ಎಚ್‌.ವೈ .ಮೇಟಿ ಅವರ ರಾಸಲೀಲೆ ಸೀಡಿ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತ ಮಹಿಳೆ ಮಾಧ್ಯಮದವರ ಕಣ್ಣು ತಪ್ಪಿಸಿ ರಾತ್ರೋ ರಾತ್ರಿ ನಾಲ್ವರ ವಿರುದ್ಧ  ದೂರು ದಾಖಲಿಸಿದ್ದಾಳೆ.

ಶನಿವಾರ ರಾತ್ರಿ ಬಾಗಲಕೋಟೆಯ ನವನಗರ ಠಾಣೆಯಲ್ಲಿ ಜೀವ ಬೆದರಿಕೆ ಆರೋಪದಲ್ಲಿ ಡಿಎಆರ್‌ ಪೇದೆ ಸುಭಾಷ್‌ ಮುಗಳಖೋಡ, ಮಾರುತಿ ಮೀರಜ್‌ಕರ್‌,ಸಿದ್ದಲಿಂಗ ಅಬಲಕಟ್ಟಿ ಮತ್ತು ಅಶೋಕ್‌ ಲಾಗಲೋàಟಿ ಎನ್ನುವವರ ವಿರುದ್ಧ ದೂರು ನೀಡಿದ್ದಾಳೆ. ಈ ವೇಳೆ ಮಾಧ್ಯಮದವರನ್ನು ಕಂಡು ಪರಾರಿಯಾಗಿರುವುದಾಗಿ ವರದಿಯಾಗಿದೆ.

ಐಪಿಸಿ ಸೆಕ್ಷನ್‌ 307, 356,354 ಬಿ,109,143 504, 120ಬಿ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಸೀಡಿ ಬಿಡುಗಡೆಗು ಮುನ್ನ ಮಹಿಳೆ ದಿನಕ್ಕೊಂದು ಹೇಳಿಕೆ ನೀಡಿ ಭಾರೀ ಗೊಂದಲ ಸೃಷ್ಟಿಸಿದ್ದಳು.

No Comments

Leave A Comment