Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಮಣಿಪುರ: ಉಗ್ರಗಾಮಿಗಳ ದಾಳಿಯಿಂದ ಇಬ್ಬರು ಪೊಲೀಸರು ಸಾವು, ನಾಲ್ವರಿಗೆ ಗಾಯ

manipur-police-personnelನವದೆಹಲಿ: ಮಣಿಪುರದ ಚಂದಲ್ ಜಿಲ್ಲೆಯ ಲೊಕ್ಚವೊ ಎಂಬಲ್ಲಿ ಉಗ್ರಗಾಮಿಗಳು ನಡೆಸಿದ ದಾಳಿಯಲ್ಲಿ ಇಬ್ಬರು ಪೊಲೀಸರು ಮೃತಪಟ್ಟು ನಾಲ್ವರು ಗಾಯಗೊಂಡಿದ್ದಾರೆ.

ಹೆದ್ದಾರಿಯಲ್ಲಿ ಪೊಲೀಸ್ ಟ್ರಕ್ ವೊಂದನ್ನು ಗುರಿಯಾಗಿಟ್ಟುಕೊಂಡು ಉಗ್ರರು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಈ ದಾಳಿ ನಡೆದಿದೆ.

ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಚಂದಲ್ ನಲ್ಲಿ ಭದ್ರತಾ ಪಡೆಗಳ ಮೇಲೆ ಅನೇಕ ದಾಳಿ ನಡೆದಿದೆ. ಇಲ್ಲಿ ವಾರಗಳ ಹಿಂದೆ ಭಾರತೀಯ ಸೇನೆಯ ವಿಶೇಷ ಸಿಬ್ಬಂದಿ ಪಡೆ ಮೇಲೆ ಉಗ್ರಗಾಮಿಗಳು ನಡೆಸಿದ ದಾಳಿಯ ಬೆನ್ನಿಗೇ ಇದು ನಡೆದಿದೆ.

ಕಮಾಂಡೊಗಳು ನಡೆಸಿದ ಕಾರ್ಯಾಚರಣೆ ವೇಳೆ ಸ್ಫೋಟಕ ಸಿಕ್ಕಿದೆ. ಕೂಡಲೇ ಉಗ್ರಗಾಮಿಗಳು ದಾಳಿ ನಡೆಸಲು ಆರಂಭಿಸಿದರು. ಕಮಾಂಡೊ ಪಡೆಯ ಐವರ ತಂಡ ಗಾಯಗೊಂಡರೂ ಸಹ ಅವರನ್ನು ರಕ್ಷಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಘಟನೆ ಚಂದಲ್ ಜಿಲ್ಲೆಯ ಸಾಜಿಕ್ ಟಂಪಕ್ ನಲ್ಲಿ ಸಂಭವಿಸಿದ್ದು ಅದು ಮಯನ್ಮಾರ್ ಗಡಿಯ ಹತ್ತಿರದಲ್ಲಿದೆ. ಕಳೆದ ವರ್ಷ ಜೂನ್ 5ರಂದು ಇಲ್ಲಿ ನಡೆದ ದಾಳಿಯಲ್ಲಿ 18 ಮಂದಿ ಸೈನಿಕರು ಮೃತಪಟ್ಟಿದ್ದರು. ಈ ವರ್ಷ ಮೇ 23ರಂದು ಅಸ್ಸಾಂ ರೈಫಲ್ಸ್ ನ 6 ಭದ್ರತಾ ಸಿಬ್ಬಂದಿ ಉಗ್ರರ ಗುಂಡಿನ ದಾಳಿಗೆ ಬಲಿಯಾಗಿದ್ದರು.

No Comments

Leave A Comment