Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ನವದೆಹಲಿ ರಾಯಚೂರಿಗೆ ಐಐಐಟಿ

pvec15dec16vdel2ನವದೆಹಲಿ: ಶೈಕ್ಷಣಿಕವಾಗಿ ಹಿಂದುಳಿದಿರುವ ಕರ್ನಾಟಕದ ರಾಯಚೂರಿನಲ್ಲಿ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ)ಯನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಕರ್ನಾಟಕದ ಬಿಜೆಪಿ ನಿಯೋಗದಿಂದ ಬುಧವಾರ ಸಂಸತ್‌ ಭವನದಲ್ಲಿ ಮನವಿ ಸ್ವೀಕರಿಸಿದ ಕೇಂದ್ರದ ಮಾನವ ಸಂಪನ್ಮೂಲ ಸಚಿವ ಪ್ರಕಾಶ ಜಾವಡೇಕರ್‌ ಬಳಿಕ ಸುದ್ದಿಗಾರರಿಗೆ ಈ ಕುರಿತು ವಿವರಿಸಿದರು.

ಖಾಸಗಿ ಸಹಭಾಗಿತ್ವದಲ್ಲಿ ಆರಂಭಿಸಲಾಗುವ ಸಂಸ್ಥೆಗೆ ಆರಂಭಿಕ ಹಂತದಲ್ಲಿ ₹ 200 ಕೋಟಿ ಅನುದಾನ ಮಂಜೂರು ಮಾಡಲಾಗುವುದು. ಸರ್ಕಾರ ಈ ಕುರಿತ ಅಧಿಸೂಚನೆ ಹೊರಡಿಸುವ ಮೂಲಕ ಆದಷ್ಟು ಶೀಘ್ರವೇ ಸಂಸ್ಥೆಯನ್ನು ಆರಂಭಿಸಲಿದೆ ಎಂದು ಅವರು ಹೇಳಿದರು.

ಕರ್ನಾಟಕದ ಧಾರವಾಡದಲ್ಲಿ ಕಳೆದ ವರ್ಷವಷ್ಟೇ ಹೊಸದಾಗಿ ಐಐಟಿ ಸ್ಥಾಪಿಸಲಾಗಿದೆ. ರಾಯಚೂರಿನಲ್ಲಿ ಐಐಐಟಿ ಸ್ಥಾಪನೆಗೆ ಅನೇಕ ದಿಗಳಿಂದ ಬೇಡಿಕೆ ಇತ್ತು. ಸರ್ಕಾರ ಆ ಬೇಡಿಕೆ ಈಡೇರಿಕೆಗೆ ಮುಂದಾಗಿದೆ ಎಂದು ತಿಳಿಸಿದರು.

ಪ್ರಾದೇಶಿಕ ಮೀಸಲಾತಿ ಅಸಾಧ್ಯ: ಐಐಟಿ ಅಥವಾ ಐಐಐಟಿಗೆ ಪ್ರವೇಶ ನೀಡಲು ರಾಷ್ಟ್ರಮಟ್ಟದಲ್ಲಿ ಸಿಇಟಿ ಆಯೋಜಿಸಲಾಗುತ್ತದೆ. ರಾಷ್ಟ್ರೀಯ ಮಟ್ಟದ ಈ ಸಂಸ್ಥೆಗಳಲ್ಲಿ ಪ್ರವೇಶ ನೀಡಲು ಪ್ರಾದೇಶಿಕ ಮೀಸಲಾತಿ ನೀಡುವುದು ಅಸಾಧ್ಯ ಎಂದು ಸಚಿವರು ಸ್ಪಷ್ಟಪಡಿಸಿದರು.

ಧಾರವಾಡದಲ್ಲಿ ಐಐಟಿ ಸ್ಥಾಪನೆಗೆ ರಾಜ್ಯ ಸರ್ಕಾರ 500 ಎಕರೆ ಜಮೀನನ್ನು ಮಂಜೂರು ಮಾಡಿದೆ. ಆದರೆ, ಪ್ರವೇಶ ಪಡೆದವರಲ್ಲಿ ಆ ಭಾಗದ ವಿದ್ಯಾರ್ಥಿಗಳ ಸಂಖ್ಯೆಯೇ ಕಡಿಮೆ ಇದೆ. ಕಾರಣ ಪ್ರವೇಶಾತಿಯಲ್ಲಿ ಶೇ 25ರಷ್ಟು ಪ್ರಾದೇಶಿಕ ಮೀಸಲಾತಿ ನೀಡಬೇಕು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ಇತ್ತೀಚೆಗೆ ಮನವಿ ಸಲ್ಲಿಸಿದ್ದರು. ಆ ಬೇಡಿಕೆಯನ್ನು ಈಡೇರಿಸುವುದು ಅಸಾಧ್ಯ ಎಂದು ಜಾವಡೇಕರ್‌ ತಿಳಿಸಿದರು.

ತಮ್ಮಲ್ಲೇ ಐಐಟಿ ಸ್ಥಾಪಿಸಬೇಕು ಎಂದು ಹೈದರಾಬಾದ್‌– ಕರ್ನಾಟಕ ಭಾಗದ ಸಚಿವರು, ಶಾಸಕರು, ಸಂಸದರು ಅನೇಕ ವರ್ಷಗಳಿಂದ ಬೇಡಿಕೆ ಇರಿಸಿದ್ದರಾದರೂ, ಕೇಂದ್ರ ಸರ್ಕಾರವು ಧಾರವಾಡದಲ್ಲಿ ಐಐಟಿ ಮಂಜೂರು ಮಾಡಿ ಕಳೆದ ವರ್ಷ ಆದೇಶ ಹೊರಡಿಸಿತ್ತು.

ಈ ಬೆಳವಣಿಗೆಯಿಂದ ರಾಯಚೂರಿನಲ್ಲಿ ಸಾರ್ವಜನಿಕರು ತೀವ್ರ ಸ್ವರೂಪದ  ಪ್ರತಿಭಟನೆ ನಡೆಸಿದ್ದರಿಂದ ಐಐಐಟಿ ಸ್ಥಾಪಿಸಲು ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಭರವಸೆ ನೀಡಿತ್ತು.

No Comments

Leave A Comment