Log In
BREAKING NEWS >
ಅಮರನಾಥ ಯಾತ್ರೆ ವೇಳೆ ಕದನ ವಿರಾಮ ಮುಂದುವರೆಸಲು ಸರ್ಕಾರ ನಿರ್ಧಾರ: ಭದ್ರತಾ ಸಂಸ್ಥೆಗಳ ವಿರೋಧ....

ವರ್ಧಾ ಚಂಡಮಾರುತ: 18ಕ್ಕೇರಿದ ಸಾವಿನ ಸಂಖ್ಯೆ; ಸಾಮಾನ್ಯ ಸ್ಥಿತಿಯತ್ತ ಚೆನ್ನೈ

ambattur212ಚೆನ್ನೈ: ಸೋಮವಾರ ಅಪ್ಪಳಿಸಿದ್ದ ವರ್ಧಾ ಚಂಡಮಾರುತ ಪರಿಣಾಮ ತಮಿಳುನಾಡಿನಲ್ಲಿ ಮೃತಪಟ್ಟವರ ಸಂಖ್ಯೆ 18ಕ್ಕೇರಿದ್ದು. 48 ಗಂಟೆಗಳ ಬಳಿಕ ಚೆನ್ನೈ ಸಹಜ ಸ್ಥಿತಿಗೆ ಮರಳುತ್ತಿದೆ.

ಚಂಡಮಾರುತ ಪರಿಣಾಮ ಚೆನ್ನೈ ನಗರಾದ್ಯಂತ ವಿದ್ಯುತ್ ಕಡಿತಗೊಂಡಿತ್ತು. ಈ ಪೈಕಿ ಸತತ ಕಾರ್ಯಾಚರಣೆ ನಡೆಸಿದ ಸಿಬ್ಬಂದಿಗಳು ಚೆನ್ನೈ ನಲ್ಲಿ ಶೇ.80ರಷ್ಟು ದುರಸ್ತಿ ಕಾರ್ಯ ಪೂರ್ಣಗೊಳಿಸಿದ್ದಾರೆ. ವಿದ್ಯುತ್ ದುರಸ್ತಿಗೆಂದೇ  ಸುಮಾರು 4 ಸಾವಿರ ಸಿಬ್ಬಂದಿಗಳು ಸತತವಾಗಿ ಕಾರ್ಯಾಚರಣೆ ತೊಡಗಿದ್ದು, ಮರಗಳ ತೆರವಿಗೆ ಚೆನ್ನೈ ಮಹಾನಗರ ಪಾಲಿಕೆಯ ಸುಮಾರು ಒಂದು ಸಾವಿರಕ್ಕೂ ಅಧಿಕ ಸಿಬ್ಬಂದಿ ಶ್ರಮಿಸುತ್ತಿದ್ದಾರೆ.

ಅಂತೆಯೇ ಚೆನ್ನೈನಾದ್ಯಂತ ಧರೆಗುರುಳಿದ್ದ ಸುಮಾರು 1500 ಕ್ಕೂ ಅಧಿಕ ಮರಗಳನ್ನು ತೆರವುಗೊಳಿಸುವ ಕಾರ್ಯ ಕೂಡ ಭರದಿಂದ ಸಾಗಿದೆ. ಇನ್ನು ವರ್ಧಾ ಚಂಡಮಾರುತದ ಬಳಿಕ ಚೆನ್ನೈನಲ್ಲಿ ಪರಿಹಾರ ಕಾರ್ಯಾಚರಣೆಯನ್ನು  ಸ್ವತಃ ಸಿಎಂ ಪನ್ನೀರ್ ಸೆಲ್ವಂ ಅವರು ವೀಕ್ಷಣೆ ಮಾಡುತ್ತಿದ್ದು, ಅವರಿಗೆ ಸಂಪುಟದ ಇತರೆ ಸಚಿವರು ಸಾಥ್ ನೀಡುತ್ತಿದ್ದಾರೆ.

ಇಂದೂ ಕೂಡ ಸಿಎಂ ಪನ್ನೀರ್ ಸೆಲ್ವಂ ಅವರು ಅಧಿಕಾರಿಗಳೊಂದಿಗೆ ಸಭೆ ನಿಗದಿ ಪಡಿಸಿದ್ದು, ವಿದ್ಯುತ್ ದುರಸ್ತಿ, ಮರಗಳ ತೆರವು ಸೇರಿದಂತೆ ವರ್ಧಾಚಂಡಮಾರುತ ವಿಕೋಪದಲ್ಲಿ ಉಂಟಾದ ಸಮಸ್ಯೆಗಳ ನಿವಾರಣೆಗೆ ಚರ್ಚೆ  ನಡೆಸಲಿದ್ದಾರೆ.

ಇನ್ನು ತಮಿಳುನಾಡು ಸರ್ಕಾರವೇ ಅಧಿಕೃತವಾಗಿ ಘೋಷಣೆ ಮಾಡಿರುವಂತೆ ವರ್ಧಾ ಚಂಡಮಾರುತದಿಂದಾಗಿ ಈ ವರೆಗೂ 18 ಮಂದಿ ಸಾವನ್ನಪ್ಪಿದ್ದು, ಚೆನ್ನೈ ಮತ್ತು ತಿರುವಳ್ಳೂರ್ ನಲ್ಲಿ 5 ಮಂದಿ,  ಕಾಂಚಿಪುರಂನಲ್ಲಿ 4 ಮಂದಿ, ವಿಳ್ಳುಪುರಂ, ನಾಗಪಟ್ಟಣಂ ನಲ್ಲಿ ತಲಾ 1 ಹಾಗೂ ತಿರುವಣ್ಣಾ ಮಲೈನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

ಒಟ್ಟಾರೆ ವರ್ಧಾ ಚಂಡಮಾರುತದಿಂದಾಗಿ ನಲುಗಿ ಹೋಗಿದ್ದ ತಮಿಳುನಾಡು ಕ್ರಮೇಣ ಸಹಜ ಸ್ಥಿತಿಗೆ ಮರಳುತ್ತಿದೆ.

No Comments

Leave A Comment