Log In
BREAKING NEWS >
ಕುಮಟಾದ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಸೂರಜ್‌ ದೆಹಲಿಯಲ್ಲಿ ಅರೆಸ್ಟ್‌....ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ....ಮಾರ್ಚ್ 18ರ೦ದು ಚಾ೦ದ್ರಮಾನ ಯುಗಾದಿ ಹಬ್ಬ....

ಹೊಸ ಬಾಳು ದಾಂಪತ್ಯಕ್ಕೆ ಕಾಲಿಟ್ಟ ಯಶ್– ರಾಧಿಕಾ

6nkyeshಬೆಂಗಳೂರು: ಚಿತ್ರತಾರೆಯರಾದ ಯಶ್ ಮತ್ತು ರಾಧಿಕಾ ಪಂಡಿತ್ ಶುಕ್ರವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಗರದ ತಾಜ್ ವೆಸ್ಟ್‌ಎಂಡ್‌ ಹೋಟೆಲ್‌ ಉದ್ಯಾನದಲ್ಲಿ ನಿರ್ಮಿಸಲಾಗಿದ್ದ ಸೋಮನಾಥೇಶ್ವರ ದೇವಾಲಯ ಹೋಲುವ ಮದುವೆ ಮಂಟಪದಲ್ಲಿ ಮಧ್ಯಾಹ್ನ 12.30ಕ್ಕೆ ಒಕ್ಕಲಿಗ ಮತ್ತು ಕೊಂಕಣಿ ಸಂಪ್ರದಾಯದಂತೆ ವಿವಾಹ ನೆರವೇರಿತು.

ನಟ ಮತ್ತು ವಿನ್ಯಾಸಗಾರ ಅರುಣ್ ಸಾಗರ್ ಮತ್ತು ತಂಡ ಪುಷ್ಪಾಲಂಕೃತ ಮದುವೆ ಮಂಟಪವನ್ನು ನಿರ್ಮಿಸಿತ್ತು. ಮಂಟಪದ ಎದುರಿಗೆ ಶಿವಲಿಂಗವನ್ನು ಸ್ಥಾಪಿಸಲಾಗಿತ್ತು. ಮುಹೂರ್ತದ ವೇಳೆ ಯಶ್ ಬಿಳಿ  ಪಂಚೆ, ಶರ್ಟ್ ಹಾಗೂ ಮೈಸೂರು ಪೇಟ ಧರಿಸಿದ್ದರೆ, ರಾಧಿಕಾ ಚಿನ್ನದ ಬಣ್ಣದ ಸೀರೆಯಲ್ಲಿ ಮಿಂಚುತ್ತಿದ್ದರು. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿಯವರ ಕಾಲಿಗೆ ನಮಸ್ಕರಿಸಿ ಯಶ್ ಮದುವೆ ಮಂಟಪಕ್ಕೆ ಬಂದರು.

ಎರಡೂ ಕುಟುಂಬಗಳ ಸಂಬಂಧಿಕರು, ಆಪ್ತರು, ಚಿತ್ರರಂಗದ ಪ್ರಮುಖರು, ರಾಜಕಾರಣಿಗಳು ಸೇರಿದಂತೆ ಸೀಮಿತ ಜನರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ನಟರಾದ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್, ರವಿಚಂದ್ರನ್, ದೊಡ್ಡಣ್ಣ, ಪುನೀತ್ ರಾಜಕುಮಾರ್, ಶ್ರೀಮುರುಳಿ, ಸುದೀಪ್, ರಾಜಕಾರಣಿಗಳಾದ ಎಸ್‌.ಎಂ. ಕೃಷ್ಣ, ಜಮೀರ್ ಅಹಮ್ಮದ್, ವಿ. ಸೋಮಣ್ಣ, ಗಾಲಿ ಜನಾರ್ದನ ರೆಡ್ಡಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಈ ವಿವಾಹಕ್ಕೆ ಸಾಕ್ಷಿಯಾದರು.

No Comments

Leave A Comment