7 ಅಂತಸ್ತಿನ ಕಟ್ಟಡ ಕುಸಿತ; ಮೂವರ ಸಾವು, ಸರ್ಕಾರದಿಂದ ಪರಿಹಾರ ಘೋಷಣೆ
ಹೈದರಾಬಾದ್: ಹೈದರಾಬಾದ್ ನಲ್ಲಿ ಜನವಸತಿ ಕಟ್ಟಡವೊಂದು ಕುಸಿದಿದ್ದು, ಕಟ್ಟದಲ್ಲಿದ್ದವರ ಪೈಕಿ ಮೂವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಹೈದರಾಬಾದ್ ನ ನಾನಕರಾಂಗೂಡ ಪ್ರದೇಶದಲ್ಲಿರುವ ಜನವಸತಿ ಪ್ರದೇಶದಲ್ಲಿರುವ 7 ಅಂತಸ್ತಿನ ಅಪಾರ್ಟ್ ಮೆಂಟ್ ಕುಸಿದಿದ್ದು, ಕಟ್ಟಡ ಕುಸಿತದ ವೇಳೆ ಸುಮಾರು 10 ಹೆಚ್ಚು ಮಂದಿ ಕಟ್ಟಡದಲ್ಲಿದ್ದರು ಎಂದು ಹೇಳಲಾಗುತ್ತಿದೆ. ವಿಚಾರ ತಿಳಿದ ಕೂಡಲೇ ಅಗ್ನಿಶಾಮಕ ದಳ ಹಾಗೂ ವಿಶೇಷ ಕಾರ್ಯಾಚರಣಾ ಸಿಬ್ಬಂದಿ ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಪ್ರಸ್ತುತ ಮೂವರ ಶವದೊರೆತಿದ್ದು, ಕಟ್ಟಡದ ಅವಶೇಷಗಳಡಿಯಲ್ಲಿ ಸಿಲುಕಿರುವರಿಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ.ರಕ್ಷಣಾ ಕಾರ್ಯಾಚರಣೆ ವೇಳೆ ಪ್ರಾಣಾಪಾಯದಲ್ಲಿ ಸಿಲುಕಿದ್ದ ಓರ್ವ ಮಹಿಳೆ ಹಾಗೂ ಮಗುವನ್ನು ರಕ್ಷಿಸಲಾಗಿದ್ದು, ಗಂಭೀರ ಸ್ಥಿತಿಯಲ್ಲಿರುವ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಪೈಕಿ ಮಹಿಳೆ ಛತ್ತೀಸ್ ಘಡ ಮೂಲದವರೆಂದು ತಿಳಿದುಬಂದಿದೆ.ನಿನ್ನೆ ಸಂಜೆ ವೇಳೆಯಲ್ಲಿ ಕಟ್ಟಡ ಕುಸಿದಿದ್ದು, ಕಟ್ಡದಲ್ಲಿ ಸುಮಾರು 7ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದವು ಎಂದು ತಿಳಿದುಬಂದಿದೆ. ಇನ್ನು ದುರಂತಕ್ಕೀಡಾದ ಕಟ್ಟಡದ ಪಕ್ಕದಲ್ಲೇ ಸೆಲ್ಲಾರ್ ಗಾಗಿ ಹಳ್ಳ ತೊಡುತ್ತಿದ್ದರಿಂದ ಕಟ್ಟಡದ ಅಡಿಪಾಯ ಸಡಿಲಗೊಂಡು ಕುಸಿತವಾಗಿದೆ ಎಂದು ಹೇಳಲಾಗತ್ತಿದೆ. ಹೀಗಾಗಿ ಬಿಲ್ಡರ್ ಸತ್ಯನಾರಾಯಣ ಸಿಂಗ್ ಎಂಬಾತನ ವಿರುದ್ಧ ದೂರು ದಾಖಲಿಸಿಕೊಂಡಿದ್ದು, ಆತನಿಗಾಗಿ ಶೋಧ ನಡೆಸುತ್ತಿದ್ದಾರೆ.
ತೆಲಂಗಾಸರ್ಕಾರದಿಂದ ಪರಿಹಾರ ಘೋಷಣೆ
ಇನ್ನು ಕಟ್ಟಡ ದುರಂತ ಪ್ರಕರಣ ಸಂಬಂಧ ತೆಲಂಗಾಮ ಸರ್ಕಾರ ಪರಿಹಾರ ಘೋಷಣೆ ಮಾಡಿದ್ದು, ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಹಾಗೂ ಗಾಯಾಳುಗಳಿಗೆ 1 ಲಕ್ಷ ಪರಿಹಾರ ಧನ ನೀಡುವುದಾಗಿ ತೆಲಂಗಾಣ ಸಚಿವ ಕೆಟಿ ರಾಮರಾವ್ ಅವರು ಹೇಳಿದ್ದಾರೆ