Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

4ನೇ ಟೆಸ್ಟ್: ಮೊದಲ ದಿನದಾಟ ಅಂತ್ಯ, ಇಂಗ್ಲೆಂಡ್ 5 ವಿಕೆಟ್’ಗೆ 288

4th-test-india-englandಮುಂಬೈ: ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಕ್ರಿಕೆಟ್ ಪಂದ್ಯದ ಮೊದಲ ದಿನದಾಟ ಅಂತ್ಯಗೊಂಡಿದ್ದು, ಮೊದಲ ದಿನದಾಟದಲ್ಲಿ ಇಂಗ್ಲೆಂಡ್ 5 ವಿಕೆಟ್ ಕಳೆದುಕೊಂಡು 288 ರನ್ ಗಳನ್ನು ಗಳಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ತಂಡ ಉತ್ತಮ ಆರಂಭ ಪಡೆದುಕೊಂಡಿತು. ಮೊದಲ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ ಪಂದ್ಯ ಆಡಿದ ಇಂಗ್ಲೆಂಡಿನ ಆರಂಭಿಕ ಆಟಗಾರ ಕೀಟನ್‌ ಜೆನ್ನಿಂಗ್‌ ಶತಕ ಸಿಡಿಸುವ ಮೂಲಕ ಇಂಗ್ಲೆಂಡ್‌ ತಂಡ ಮೊದಲ ದಿನ ಗೌರವ ಸಂಪಾದಿಸಲು ಪ್ರಮುಖ ಕಾರಣರಾದರು.

ಒಟ್ಟು 112 ರನ್‌ ಗಳಿಸಿದ ಜೆನ್ನಿಂಗ್‌ ಇನ್ನಿಂಗ್ಸ್‌ನಲ್ಲಿ ಆಕರ್ಷಕ 13 ಬೌಂಡರಿಗಳಿದ್ದವು. ಕೀಟನ್‌ ಜೆನ್ನಿಂಗ್‌ ಆಕರ್ಷಕ ಶತಕ ಸಿಡಿಸಿ ಭರವಸೆ ಮೂಡಿಸಿದ್ದರೆ, ತಂಡದ ನಾಯಕ ಕುಕ್ ಅರ್ಧ ಶತಕದ ಹೊಸ್ತಿಲಲ್ಲಿ ಎಡವಿದ್ದಾರೆ.

 ಮಧ್ಯಮ ಕ್ರಮಾಂಕದ ಆಟಗಾರ ಮೋಯಿನ್‌ ಅಲಿ ಸಹ ಜೆನ್ನಿಂಗ್‌‌ಗೆ ತಕ್ಕ ಸಾಥ್‌ ನೀಡಿದರು. 50 ರನ್‌ ಗಳಿಸಿದ್ದ ಮೋಯಿನ್‌ ಅಲಿ ಅಶ್ವಿನ್‌ಗೆ ವಿಕೆಟ್‌ ಒಪ್ಪಿಸಿದರು. ಅಲಿ ವಿಕೆಟ್‌ ಒಪ್ಪಿಸುತ್ತಿದ್ದಂತೆ ಜೆನ್ನಿಂಗ್‌‌ ಸಹ ಪೆವಿಲಿಯನ್‌ ಸೇರಿಕೊಂಡರು.

ಇಂಗ್ಲೆಂಡ್ ಒಂದು ಹಂತದಲ್ಲಿ 2 ವಿಕೆಟ್ ಕಳೆದುಕೊಂಡು 229 ರನ್ ಗಳಿಸಿ ಸುಭದ್ರ ಸ್ಥಿತಿಯಲ್ಲಿತ್ತು. ಬಳಿಕ ಭಾರತದ ಬೌಲರ್ ಗಳು ಪಂದ್ಯದ ತಮ್ಮ ಹಿಡಿತ ಬಿಗಿಗೊಳಿಸಿದರು.25 ರನ್ ಗಳಿಸಿ ಅಜೇಯರಾಗಿ ಉಳಿದಿರುವ ಬೆನ್ ಸ್ಟ್ರೋಕ್, ಜೋಸ್ ಬಟ್ಲರ್ (18 ರನ್) ರೊಂದಿಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಭಾರತ ತಂಡದ ಪರ ಅಶ್ವಿನ್ 4 ವಿಕೆಟ್ ಪಡೆದು ಮಿಂಚಿದರೆ, ರವೀಂದ್ರ ಜಡೇಜಾ 1 ವಿಕೆಟ್ ಪಡೆದಿದ್ದಾರೆ.

No Comments

Leave A Comment