Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಚೆನ್ನೈನಲ್ಲಿ ಐಟಿ ದಾಳಿ, 100 ಕೆ.ಜಿ. ಚಿನ್ನ, 90 ಕೋಟಿ ರು. ನಗದು ಜಪ್ತಿ

it-raidಚೆನ್ನೈ: ಕೇಂದ್ರ ಸರ್ಕಾರ 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿದ ನಂತರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ ಚೆನ್ನೈನಲ್ಲಿ ಅತಿ ದೊಡ್ಡ ದಾಳಿ ನಡೆಸಿದ್ದು, ದಾಳಿಯ ವೇಳೆ ಸುಮಾರು 100 ಕೆ.ಜಿ. ಚಿನ್ನ ಹಾಗೂ 90 ಕೋಟಿ ನಗದನ್ನು ಜಪ್ತಿ ಮಾಡಿದ್ದಾರೆ.

ಆದಾಯ ತೆರಿಗೆ ಅಧಿಕಾರಿಗಳು ಏಕಕಾಲಕ್ಕೆ ಚೆನ್ನೈನ ಎಂಟು ಕಡೆ ದಾಳಿ ನಡೆಸಿದ್ದು, ಕಾನೂನು ಬಾಹಿರವಾಗಿ ಸಂಗ್ರಹಿಸಿದ್ದ 2000 ರು. ಮುಖಬೆಲೆಯ 70 ಕೋಟಿ ರುಪಾಯಿ ಸೇರಿದಂತೆ ಒಟ್ಟು 90 ಕೋಟಿ ರುಪಾಯಿ ನಗದು ಹಾಗೂ ಅಪಾರ ಪ್ರಮಾಣದ ಸಂಪತ್ತನ್ನು ಜಪ್ತಿ ಮಾಡಿದ್ದಾರೆ. ಅಲ್ಲದೆ ಸುಮಾರು 30 ಕೋಟಿ ಮೌಲ್ಯದ 100 ಕೆ.ಜಿ.ಬಂಗಾರವನ್ನು ವಶಕ್ಕೆ ಪಡೆದಿದ್ದಾರೆ.

ಇಂದು ಬೆಳಗ್ಗೆ ಚೆನ್ನೈನ ಟಿ ನಗರ್ ಹಾಗೂ ಅಣ್ಣಾ ನಗರ್ ದಲ್ಲಿರುವ ಮೂರು ಚಿನ್ನದ ಅಂಗಡಿಗಳ ಮೇಲೆ ಹಾಗೂ ಮಾಲೀಕರ ಮನೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಶೇಖರ್ ರೆಡ್ಡಿ, ಶ್ರೀನಿವಾಸ್ ರೆಡ್ಡಿ ಹಾಗೂ ಪ್ರೇಮ್ ಎಂಬ ವ್ಯಾಪಾರಿಗಳಿಗೆ ಸೇರಿದ, ಲೆಕ್ಕ ನೀಡದ ಮೊತ್ತ ಇದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೆಲವು ಆಸ್ತಿ ದಾಖಲೆಗಳು, ಲೆಕ್ಕಕ್ಕೆ ನೀಡದ ಆಸ್ತಿಗಳ ಬಗೆಗಿನ ಮಾಹಿತಿಯನ್ನು ಸಂಗ್ರಹಿಸಲು ಬಳಸುವ ಎಲೆಕ್ಟ್ರಾನಿಕ್ ವಸ್ತುಗಳನ್ನು ಸಹ ವಶಕ್ಕೆ ಪಡೆಯಲಾಗಿದೆ ಮತ್ತು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

No Comments

Leave A Comment