Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಪಾಕಿಸ್ತಾನ ವಿಮಾನ ಪತನ; ಸಿಬ್ಬಂದಿ ಸೇರಿ 47 ಮಂದಿ ಸಜೀವ ದಹನ

planeಇಸ್ಲಾಮಾಬಾದ್: ಐವರು ಸಿಬ್ಬಂದಿ ಹಾಗೂ ಪ್ರಯಾಣಿಕರು ಸೇರಿದಂತೆ 47 ಮಂದಿಯನ್ನು ಹೊತ್ತೊಯ್ಯುತ್ತಿದ್ದ ಪಾಕಿಸ್ತಾನದ ಇಂಟರ್ ನ್ಯಾಶನಲ್ ವಿಮಾನ ಅಬೋಟಾಬಾದ್ ಸಮೀಪ ಬುಧವಾರ ಸಂಜೆ ಪತನಗೊಂಡಿರುವುದಾಗಿ ಪಾಕ್ ಮಾಧ್ಯಮದ ವರದಿಗಳು ತಿಳಿಸಿವೆ.

ಅಬೋಟಾಬಾದ್ ಸಮೀಪದ ಪಿಪ್ಪಾಲಿಯನ್ ಸಮೀಪ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡು ಪತನಕ್ಕೀಡಾಗಿರುವುದಾಗಿ ವರದಿ ವಿವರಿಸಿದೆ.

ಈ ವಿಮಾನ ಚಿತ್ರಾಲ್ ನಿಂದ ಮಧ್ಯಾಹ್ನ 3.30ಕ್ಕೆ ಹೊರಟಿದ್ದು, ಇಸ್ಲಾಮಾಬಾದ್ ವಿಮಾನ ನಿಲ್ದಾಣದಲ್ಲಿ 4.40ಕ್ಕೆ ಆಗಮಿಸಬೇಕಿತ್ತು. ಈ ಸಂದರ್ಭದಲ್ಲಿ ಮಾರ್ಗ ಮಧ್ಯೆದಲ್ಲಿಯೇ ವಿಮಾನ ರೆಡಾರ್ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿರುವುದಾಗಿ ಮೊದಲು ವರದಿಯಾಗಿತ್ತು.

No Comments

Leave A Comment