Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಬೆಂಗಳೂರಿನಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಹಿರಿಯ ವ್ಯವಸ್ಥಾಪಕ ಸೇರಿ ಮೂವರ ಬಂಧನ

arrest-9ಬೆಂಗಳೂರು: ಆರ್ ಬಿಐ ನಿಯಮ ಉಲ್ಲಂಘಿಸಿ ಕಪ್ಪು ಹಣವನ್ನು ಬಳಿ ಮಾಡಲು ಸಹಕರಿಸುತ್ತಿದ್ದ ಆರೋಪದ ಮೇಲೆ ಬೆಂಗಳೂರಿನ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಹಿರಿಯ ವ್ಯವಸ್ಥಾಪಕ ಸೇರಿದಂತೆ ಮೂವರನ್ನು ಸಿಬಿಐ ಬುಧವಾರ ಬಂಧಿಸಿದೆ.

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಬಸವನಗುಡಿ ಶಾಖೆಯ ಹಿರಿಯ ವ್ಯವಸ್ಥಾಪಕ ಎಸ್ ಲಕ್ಷ್ಮೀನಾರಾಯಣ ಹಾಗೂ ಓಂಕಾರ್ ಪರಿಮಳ ಮಂದಿರ್ ನಿರ್ದೇಶಕ ಎಸ್ ಗೋಪಾಲ್ ಮತ್ತು ಅಶ್ವಿನ್ ಜಿ ಸುಂಕುರ್ ಅವರ ವಿರುದ್ಧ ನಿನ್ನೆ ಸಿಬಿಐ ಎಫ್ಐಆರ್ ದಾಖಲಿಸಿತ್ತು. ಅಲ್ಲದೆ ಈ ಮೂವರ ಮನೆಗಳ ಮೇಲೆ ದಾಳಿ ನಡೆಸಿತ್ತು.

ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಸಿಬಿಐ ಇಂದು ವಿಚಾರಣೆಗೆ ಕರೆದಿತ್ತು. ವಿಚಾರಣೆ ವೇಳೆ ಅಧಿಕಾರಿಗಳ ಪ್ರಶ್ನೆಗೆ ಉತ್ತರ ನೀಡಲು ವಿಫಲವಾದ ಹಿನ್ನೆಲೆಯನ್ನು ಸಿಬಿಐ ಆರೋಪಿಗಳನ್ನು ವಶಕ್ಕೆ ಪಡೆದು ಕೋರ್ಟ್ ಗೆ ಹಾಜರು ಪಡಿಸಿದೆ. ವಿಚಾರಣೆ ನಡೆಸಿದ ಸಿಬಿಐ ವಿಶೇಷ ಕೋರ್ಟ್ ಆರೋಪಿಗಳನ್ನು ಐದು ದಿನಗಳ ಕಾಲ ಸಿಬಿಐ ವಶಕ್ಕೆ ನೀಡಿದೆ.

ದಾಳಿಯ ವೇಳೆ ಆರೋಪಿಗಳ ಬಳಿ ಇದ್ದ ಬ್ಯಾಂಕ್ ವೋಚರ್ ಗಳು, ಡಿಡಿಗಳು, ಆಸ್ತಿ ದಾಖಲೆಗಳು, ಹಾರ್ಡ್ ಡಿಸ್ಕ್ ಹಾಗೂ 500, 1000 ರುಪಾಯಿ ಮುಖಬೆಲೆಯ 5,91,500 ರುಪಾಯಿ ನಗದನ್ನು ವಶಕ್ಕೆ ಪಡೆಯಲಾಗಿದೆ.

ಸೆಂಟ್ರಲ್ ಬ್ಯಾಂಕ್ ಆಪ್ ಇಂಡಿಯಾ ಹಿರಿಯ ವ್ಯವಸ್ಥಾಪಕ ಲಕ್ಷ್ಮೀನಾರಾಯಣ ಅವರು ಆರ್ ಬಿಐ ನಿಯಮ ಉಲ್ಲಂಘಿಸಿ ಪೂಣೆ ಮೂಲದ ಹಣಕಾಸು ಸಂಸ್ಥೆಗೆ 147 ಡಿಡಿಗಳನ್ನು ನೀಡಿದ್ದಾರೆ ಎಂದು ಸಿಬಿಐ ಕೋರ್ಟ್ ಗೆ ಸಲ್ಲಿಸಿದ ಎಫ್ಐಆರ್ ನಲ್ಲಿ ತಿಳಿಸಿದೆ.

No Comments

Leave A Comment