Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶ್ರೀಶಾರದಾ ಮಹೋತ್ಸವ ಸಮಿತಿಯ ಆಶ್ರಯದಲ್ಲಿ ಪೂಜಿಸಲ್ಪಟ್ಟ ಶ್ರೀಶಾರದಾ ವಿಗ್ರಹ ಇ೦ದು ವಿಸರ್ಜನಾ ಮೆರವಣಿಗೆಗೆ ಸಕಲ ಸಿದ್ದತೆ........ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಖೇಹರ್‌ ಜೆ.ಎಸ್. ಖೇಹರ್‌ ‘ಸುಪ್ರೀಂ’ ಸಿ.ಜೆ

Chief Justice of Karnataka High Court J S Khehar singh at High court in Bangalore. Photo/ B H S

ನವದೆಹಲಿ(ಪಿಟಿಐ): ಸುಪ್ರೀಂಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ (ಸಿ.ಜೆ) ಜಗದೀಶ್‌ ಸಿಂಗ್ ಖೇಹರ್‌ ಅವರು ನೇಮಕವಾಗಲಿದ್ದಾರೆ.  ಖೇಹರ್‌ ಅವರ ಹೆಸರನ್ನು ಹಾಲಿ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್‌ ಶಿಫಾರಸು ಮಾಡಿದ್ದಾರೆ. ಖೇಹರ್‌ ಅವರು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದರು.

ಠಾಕೂರ್‌ ಅವರಿಗೆ ಕಳೆದ ತಿಂಗಳು ಪತ್ರ ಬರೆದಿದ್ದ ಕಾನೂನು ಸಚಿವ ರವಿಶಂಕ ರ್‌ ಪ್ರಸಾದ್‌ ಅವರು, ಮುಂದಿನ ಸಿ.ಜೆ ಹೆಸರನ್ನು ತಿಳಿಸಬೇಕು ಎಂದು ಕೋರಿದ್ದರು. ಠಾಕೂರ್‌ ಅವರು ಜನವರಿ 3ರಂದು ನಿವೃತ್ತರಾಗಲಿದ್ದಾರೆ. ಖೇಹರ್‌ ಅವರು 44ನೇ ಮುಖ್ಯ ನ್ಯಾಯಮೂರ್ತಿಯಾಗಿ ಎಂಟು ತಿಂಗಳು ಅಂದರೆ ಮುಂದಿನ ಆ. 27ರವರೆಗೆ ಮಾತ್ರ ಕಾರ್ಯ ನಿರ್ವಹಿಸಲಿದ್ದಾರೆ. ಸುಪ್ರೀಂಕೋರ್ಟ್‌ನಲ್ಲಿರುವ  ನ್ಯಾಯಮೂರ್ತಿಗಳ ಪೈಕಿ ಹಿರಿಯವರಾಗಿರುವ ಖೇಹರ್‌  ಸಿಖ್‌ ಸಮುದಾಯದಿಂದ ಸಿ.ಜೆ ಹುದ್ದೆಗೇರುತ್ತಿರುವ ಮೊದಲಿಗರು.

No Comments

Leave A Comment