Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಜಯಲಲಿತಾ ನಿಧನ: ಅಭಿಮಾನಿಗಳು, ಗಣ್ಯರಿಂದ ಅಂತಿಮ ದರ್ಶನ

atu44ಚೆನ್ನೈ: ಅನಾರೋಗ್ಯದಿಂದ ಬಳಲುತ್ತಿದ್ದ ಜಯಲಲಿತಾ ಅವರ ಬದುಕಿನೊಂದಿಗಿನ 75 ದಿನಗಳ ಹೋರಾಟ ನಿನ್ನೆಗೆ ಅಂತ್ಯವಾಗಿದ್ದು ಕೋಟ್ಯಾಂತರ ಅಭಿಮಾನಿಗಳನ್ನು ಅಗಲಿದ್ದಾರೆ.

ತಮಿಳುನಾಡಿನ ಚೆನ್ನೈನಲ್ಲಿರುವ ರಾಜಾಜಿಹಾಲ್ ನಲ್ಲಿ ಅಂತಿಮ ದರ್ಶನಕ್ಕಾಗಿ ಜಯಲಲಿತಾ ಅವರ ಪಾರ್ಥಿವ ಶರೀರವನ್ನು ಇಡಲಾಗಿದ್ದು ಸಾವಿರಾರು ಅಭಿಮಾನಿಗಳು ಅಮ್ಮನವರ ಅಂತಿಮ ದರ್ಶನವನ್ನು ಪಡೆದರು. ಇದೇ ವೇಳೆ ಚಿತ್ರರಂಗದ ಗಣ್ಯರು ಅಂತಿಮ ನಮನ ಸಲ್ಲಿಸಿದರು.

ಚಿತ್ರನಟಿ, ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರ ನಿಧನ ಹಿನ್ನಲೆ ತಮಿಳು ಚಿತ್ರರಂಗ ಕಂಬನಿ ಮಿಡಿದಿದೆ. ಇನ್ನು ಬಹುಭಾಷಾ ನಟ ರಜನಿಕಾಂತ್ ಕುಟುಂಬ ಸಮೇತರಾಗಿ ಆಗಮಿಸಿ ಜಯಲಲಿತಾರ ಅಂತಿಮ ದರ್ಶನ ಪಡೆದರು.

ಇದೇ ವೇಳೆ ನಟ ಕಮಲ್ ಹಾಸನ್, ನಾಸಿರ್, ಗೌತಮಿ, ಸುಹಾಸಿಸಿ ಮಣಿರತ್ನಂ, ಖುಷ್ಬೂ ಸೇರಿದಂತೆ ಹಲವರು ಜಯಲಲಿತಾರ ಅಂತಿಮ ದರ್ಶನವನ್ನು ಪಡೆದರು.

ಗಣ್ಯರ ಸಂತಾಪಜಯಲಲಿತಾ ಸಾವಿನಿಂದ ಅತೀವ ನೋವಾಗಿದೆ. ಬಹುದೊಡ್ಡ ನಾಯಕಿಯನ್ನು ಕಳೆದುಕೊಂಡಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುವೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಜಯಲಲಿತಾ ಎಲ್ಲರಿಗೂ ಮಾದರಿಯಾಗುವಂಥ ರಾಜಕಾರಣಿಯಾಗಿದ್ದರು. ಅಂತಹ ಶ್ರೇಷ್ಠ ನಾಯಕಿ, ಐರನ್ ಲೇಡಿ ಇನ್ನಿಲ್ಲ, ಅವರಿಗೆ ಶ್ರದ್ಧಾಂಜಲಿ ಅರ್ಪಿಸುವೆ: ಖ್ಯಾತ ಮಲಯಾಳಂ ನಟ ಮಮ್ಮುಟಿಜಯಲಲಿತಾರಂತ ಇನ್ನೊಬ್ಬ ರಾಜಕಾರಣಿ ಹುಟ್ಟುವುದಿಲ್ಲ.

ಜಯಲಲಿತಾರ ಸಾವು ಎಐಎಡಿಎಂಕೆಗೆ ದೊಡ್ಡ ನಷ್ಟವನ್ನುಂಟು ಮಾಡಿದೆ. ತಮಿಳುನಾಡು ಭವಿಷ್ಯಕ್ಕೆ ಕತ್ತಲು ಕವಿದಂತಿದೆ: ಕೇಂದ್ರ ಸಚಿವ ಸದಾನಂದ ಗೌಡ

No Comments

Leave A Comment