Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

11.08 ಲಕ್ಷ ರೂ.ಹಳೆ-ಹೊಸ ನೋಟು ವಶ: ವಾಯುಪಡೆ ಅಧಿಕಾರಿ ಅರೆಸ್ಟ್‌

air-force-officail-700ಹೊಸದಿಲ್ಲಿ : 11.08 ಲಕ್ಷ ರೂ.ಮೌಲ್ಯದ ಹೊಸ ಹಾಗೂ ಹಳೇ ಕರೆನ್ಸಿ ನೋಟುಗಳನ್ನು ಹೊಂದಿದ್ದ ಭಾರತೀಯ ವಾಯುಪಡೆಯ ಅಧಿಕಾರಿ ಪರಮ್‌ಜೀತ್‌ ಎಂಬಾತನನ್ನು ಪೊಲೀಸರು ರೋಹಟಕ್‌ ನಲ್ಲಿ ನಿನ್ನೆ ಭಾನುವಾರ ಬಂಧಿಸಿದ್ದಾರೆ.

ಪರಮ್‌ಜೀತ್‌  ಮೂಲತಃ ರೋಹಟಕ್‌ ಜಿಲ್ಲೆಯ ಬಹುವಾಕ್‌ಬರ್‌ಪುರ್‌ ಗ್ರಾಮದವರು ಎಂದು ತಿಳಿದು ಬಂದಿದೆ.

ದಿಲ್ಲಿಯಿಂದ ರೋಹಟಕ್‌ಗೆ ಬಂದಿದ್ದ ಪರಮ್‌ಜೀತ್‌ ಅವರನ್ನು ಪೊಲೀಸರು ತಪಾಸಣೆಗಾಗಿ ತಡೆದಿದ್ದರು. ಆದರೆ ಅವರು ಆರ್ಯ ನಗರದಲ್ಲಿನ ಪೊಲೀಸ್‌ ನಾಕಾವನ್ನು ತಪ್ಪಿಸಿಕೊಂಡಾಗ ನಗರ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡರು.

ಕೂಲಂಕಷ ತಪಾಸಣೆ ನಡೆಸಿದಾಗ ಅವರ ಕಾರಿನಲ್ಲಿ  11.08 ಲಕ್ಷ ರೂ. ಮೌಲ್ಯದ ಹಳೇ ಹಾಗೂ ಹೊಸ ಕರೆನ್ಸಿ ನೋಟುಗಳು ಪತ್ತೆಯಾದವು. ಇಷ್ಟೊಂದು ದೊಡ್ಡ ಮೊತ್ತದ ಹಣ ತನ್ನ ಬಳಿ ಇರುವುದಕ್ಕೆ ಯಾವುದೇ ಸರಿಯಾದ ಕಾರಣ ನೀಡಲು ಅವರು ವಿಫ‌ಲರಾದರು ಎಂದು ಪೊಲೀಸರು ಹೇಳಿದ್ದಾರೆ.

“ಪರಮ್‌ಜೀತ್‌ ಅವರ ಬಳಿ 3 ಲಕ್ಷ ರೂ. ಮೌಲ್ಯದ ಹೊಸ ಕರೆನ್ಸಿಗಳಿದ್ದವು. ಅಲ್ಲದೇ 1.6 ಲಕ್ಷ ರೂ. ಮೌಲ್ಯದ ನಿಷೇಧಿತ ಕರೆನ್ಸಿ ನೋಟುಗಳು ಇದ್ದವು. ಜತೆಗೆ 100 ರೂ, 50 ರೂ, 20 ರೂ, ಮತ್ತು 10 ರೂ.ಗಳ ನೋಟುಗಳ ಕಂತೆಯೂ ಇದ್ದವು; ಇವುಗಳನ್ನು ನಾವು ವಶಕ್ಕೆ ತೆಗೆದುಕೊಂಡಿದ್ದೇವೆ’ ಎಂದು ರೋಹಟಕ್‌ ಸಿಟಿ ಸ್ಟೇಶನ್‌ ಹೌಸ್‌ ಆಫೀಸರ್‌ ಆಗಿರುವ ಸುನೀತಾ ತಿಳಿಸಿದ್ದಾರೆ. –

ಪರಮ್‌ಜೀತ್‌ ವಿರುದ್ಧ ವಂಚನೆ, ಜೀವ ಹಾನಿಗೆ ಕಾರಣವಾಗುವ ನಿರ್ಲಕ್ಷ್ಯದ ವಾಹನ ಚಾಲನೆಗಾಗಿ ಕೇಸ್‌ ಬುಕ್‌ ಮಾಡಲಾಗಿದೆ ಎಂದವರು ಹೇಳಿದರು.

ಪರಮ್‌ಜೀತ್‌ ಈ ನಗದನ್ನು ದಿಲ್ಲಿಯಲ್ಲಿನ ತನ್ನ ಗೆಳೆಯನಿಂದ ಸಾಲ ತೆಗೆದುಕೊಂಡಿದ್ದ; ಡಿ.31ರ ತನ್ನ ಪತ್ನಿ ಹುಟ್ಟುಹಬ್ಬಕ್ಕೆ ಕಾರನ್ನು ಗಿಫ್ಟ್ ಕೊಡಲು ಈ ಹಣ ತಂದಿದ್ದ ಎಂದು ಆತನ ಸಹೋದರ ಸಂದೀಪ್‌ ಹೇಳಿದ್ದಾರೆ.

ಪೊಲೀಸರು ವಿಷಯವನ್ನು ಆದಾಯ ತೆರಿಗೆ ಇಲಾಖಾಧಿಕಾರಿಗಳಿಗೆ ತಿಳಿಸಿದ್ದಾರೆ.

Read more at http://www.udayavani.com/kannada/news/national-news/183186/air-force-official-held-with-rs-11-lakh-in-old-new-banknotes#egOei4yfDBRGkZTI.99

No Comments

Leave A Comment