Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ಕರಾಚಿ ಹೊಟೇಲ್‌ನಲ್ಲಿ ಅಗ್ನಿ ದುರಂತ : 11 ಸಾವು, 30 ಮಂದಿಗೆ ಗಾಯ

karachi-hoelಕರಾಚಿ : ಇಲ್ಲಿನ ಐಷಾರಾಮಿ ಹೊಟೇಲೊಂದರಲ್ಲಿ ಸಂಭವಿಸಿದ ಭಾರೀ ಅಗ್ನಿ ಅನಾಹುತದಲ್ಲಿ ಕನಿಷ್ಠ 11 ಮಂದಿ ಮೃತಪಟ್ಟು ಇತರ 30 ಮಂದಿ ಗಾಯಗೊಂಡಿರುವುದಾಗಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವ ಅಧಿಕಾರಿಗಳು ತಿಳಿಸಿದ್ದಾರೆ.

ಕರಾಚಿಯ ಷಹರಾಹ್‌ ಎ ಫೈಸಲ್‌ ನಲ್ಲಿರುವ ಚತುರ್‌-ತಾರಾ ರೀಜೆಂಟ್‌ ಪ್ಲಾಜಾ ಹೋಟೆಲ್‌ನ ನೆಲ ಅಂತಸ್ತಿನಲ್ಲಿರುವ ಅಡುಗೆ ಕೋಣೆಯಲ್ಲಿ ಕಾಣಿಸಿಕೊಂಡ ಬೆಂಕಿ ಬಹುಬೇಗನೆ ಹೊಟೇಲಿನ ಇತರ ಆರು ಮಹಡಿಗಳಿಗೂ ಹಬ್ಬಿ ಭಾರೀ ದುರಂತಕ್ಕೆ ಕಾರಣವಾಯಿತು. ಪರಿಣಾಮವಾಗಿ ಹೊಟೇಲಿನಲ್ಲಿ ಉಳಿದುಕೊಂಡಿದ್ದ 100ಕ್ಕೂ ಅಧಿಕ ಮಂದಿ ಸಿಕ್ಕಿ ಹಾಕಿಕೊಂಡರು.

ನಿರಂತರ ಮೂರು ತಾಸುಗಳ ಕಾಲ ಹೋರಾಡಿದ ಅಗ್ನಿ ಶಾಮಕ ದಳದವರು ಕೊನೆಗೂ ಬೆಂಕಿಯನ್ನು ನಿಯಂತ್ರಿಸುವಲ್ಲಿ ಸಫ‌ಲರಾದರು. ಆದರೆ ಅಷ್ಟರೊಳಗಾಗಿ 11 ಮಂದಿ ಅಸು ನೀಗಿದ್ದರು.

ಸುಟ್ಟ ಗಾಯಗಳಿಗೆ ಗುರಿಯಾಗಿರುವ ಸುಮಾರು 65 ಮಂದಿಯನ್ನು ತುರ್ತು ಚಿಕಿತ್ಸಾ ವಿಭಾಗಕ್ಕೆ ತರಲಾಗಿದೆ ಎಂದು ಜಿನ್ನಾ ಪೋಸ್ಟ್‌ ಗ್ರಾಜ್ಯುವೇಟ್‌ ಮೆಡಿಕಲ್‌ ಸೆಂಟರ್‌ ಆಸ್ಪತ್ರೆಯ ಡಾ. ಸೀಮಿನ್‌ ಜಮಾಲಿ ತಿಳಿಸಿದ್ದಾರೆ.

ಈ ಅಗ್ನಿ ಅವಘಡ ನಡೆದಿದ್ದಾಗ ಹೊಟೇಲಿನಲ್ಲಿ ಪಾಕ್‌ ಕ್ರಿಕೆಟಿಗರಾದ ಸೋಹೇಬ್‌ ಮಕ್ಸೂದ್‌ ಹಾಗೂ ಯಾಸಿನ್‌ ಮುರ್ತಜಾ ಇದ್ದರು. ಯಾಸಿನ್‌ ಅವರು ಹೊಟೇಲಿನ ಎರಡನೇ ಮಹಡಿಯಿಂದ ಕೆಳಗೆ ಹಾರಿ ಕಾಲು ಮುರಿದು ಕೊಂಡರು. ಕರಾಮತ್‌ ಅಲಿ ಎಂಬ ಇನ್ನೋರ್ವರಿಗೆ ಸಿಡಿದು ಬಂದ ಗಾಜಿನ ಚೂರುಗಳು ತಗುಲಿ ಗಂಭೀರ ಗಾಯಗಳಾಗಿವೆ.

No Comments

Leave A Comment