Log In
BREAKING NEWS >
ಉಡುಪಿ:ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಮಹೋತ್ಸವದ ಶುಭಾರoಭಕ್ಕೆ ಕ್ಷಣಗಣನೆ....ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ;೧೧೮ನೇ ಭಜನಾ ಸಪ್ತಾಹ ಮಹೋತ್ಸವದ 1`ದಿನ ಶ್ರೀದೇವರಿಗೆ ಮತ್ಸ್ಯಲoಕಾರ

ತಪ್ಪಿದ ಭಾರಿ ಅನಾಹುತ; ರಾಮನಗರದಲ್ಲಿ ಬಸ್‌ಗೆ ಬೆಂಕಿ ;52 ಮಕ್ಕಳು ಪಾರು

5ಚೆನ್ನಪಟ್ಟಣ :  ಇಲ್ಲಿನ ಮುದುಗೆರೆ ಎಂಬಲ್ಲಿ ಶನಿವಾರ ಬೆಳಗ್ಗೆ ಬೆಂಗಳೂರು -ಮೈಸೂರು ಹೆದ್ದಾರಿಯಲ್ಲಿ  ಬಿಎಂಟಿಸಿ ಬಸ್ಸೊಂದು ಇದ್ದಕ್ಕಿದ್ದಂತೆ ಹೊತ್ತಿ ಉರಿದಿದ್ದು,ಅದೃಷ್ಟವಷಾತ್‌ ಬಸ್‌ನಲ್ಲಿ ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ಮಕ್ಕಳು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.

ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಜಾಗೃತನಾದ ಚಾಲಕ ಬಸ್‌ ನಿಲ್ಲಿಸಿ ಮಕ್ಕಳನ್ನು ಕೆಳಗಿಳಿಸಿದ್ದುದರಿಂದ ಭಾರಿ ಅನಾಹುತ ತಪ್ಪಿ ಹೋಗಿದೆ. ಅಗ್ನಿ ಶಾಮಕ ಸಿಬಂದಿ ಸ್ಥಳಕ್ಕಾಗಮಿಸುವಷ್ಟರಲ್ಲಿ ಬೆಂಕಿಯ ಕೆನ್ನಾಲಿಗೆಗೆ ಬಸ್‌ ಸಂಪೂರ್ಣ ಭಸ್ಮವಾಗಿತ್ತು. ಅವಘಡ ಸಂಭವಿಸಿದ ಬಸ್‌ನಲ್ಲಿ ಸುಮಾರು 52 ಹೈಸ್ಕೂಲ್‌ ವಿದ್ಯಾರ್ಥಿಗಳಿದ್ದರು ಎಂದು ಹೇಳಲಾಗಿದೆ.

ಅವಘಡದಿಂದಾಗಿ ಹೆದ್ದಾರಿಯಲ್ಲಿ 5 ಕೀ.ಮೀಗೂ ಹೆಚ್ಚು ದೂರು ಟ್ರಾಫಿಕ್‌ಜಾಮ್‌ ಆಗಿರುವ ಬಗ್ಗೆ ವರದಿಯಾಗಿದೆ. ಇಂಜಿನ್‌ನಲ್ಲಿ ತಾಂತ್ರಿಕ ದೋಷದಿಂದಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿದೆ.

ಪೊಲೀಸ್‌ ಅಧಿಕಾರಿಗಳು, ಟ್ರಾಫಿಕ್‌ ಪೊಲೀಸರು ಸ್ಥಳಕ್ಕಾಗಮಿಸಿ ಸ್ಥಳ ಪರಿಶೀಲನೆ ನಡೆಸಿ ಮಕ್ಕಳು ಮತ್ತು ಬಸ್‌ ಚಾಲಕನಿಂದ ಘಟನೆ ಬಗ್ಗೆ ಕೇಳಿದ್ದಾರೆ. ಸಂಚಾರ ಸುಗಮಗೊಳಿಸಲು ನೆರವಾಗಿದ್ದಾರೆ.

No Comments

Leave A Comment