Log In
BREAKING NEWS >
ಶಿರೂರು ಶ್ರೀಗಳು ಮಠಾಧೀಶರೇ ಅಲ್ಲ, ಸನ್ಯಾಸತ್ವ ತ್ಯಜಿಸಿದ್ದರು: ಪೇಜಾವರ ಶ್ರೀ.....ಮಧ್ವ ಸಂಪ್ರದಾಯದಂತೆ ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಜೀ ಅಂತ್ಯಕ್ರಿಯೆ!

ಉಡುಪಿ ನಗರಸಭೆ ಗೋಪಾಲಪುರ ವಾರ್ಡ್‌ ‘ಪೊಟ್ಟು ಕೆರೆ’ ಬೃಂದಾವನ ಕೆರೆಯಾಗಲಿ

pottukere-2-12

ಉಡುಪಿ: ಉಡುಪಿ ನಗರಸಭೆ ವ್ಯಾಪ್ತಿಯ 10ನೇ ಗೋಪಾಲಪುರ ವಾರ್ಡ್‌ನ ಸದಸ್ಯರಿಗೆ ತಮ್ಮ ಕೇರಿಗೆ ‘ಪೊಟ್ಟು ಕೆರೆ’ ಎಂಬ ನಾಮಕರಣಗೊಂಡಿದ್ದು ಅತ್ಯಂತ ಬೇಸರವನ್ನು ತಂದಿದೆ. ಸ್ಥಳೀಯ ವಿಳಾಸ ನೀಡುವ ಸಂದರ್ಭದಲ್ಲಿ ಅಂದರೆ ರೇಷನ್‌ ಕಾರ್ಡ್‌, ಆಧಾರ್‌ ಕಾರ್ಡ್‌, ಅಂಚೆ ವಿಳಾಸವನ್ನು ನೀಡುವಾಗ ಗೋಪಾಲಪುರ 5ನೇ ರಸ್ತೆ ಎಂದು ಉಲ್ಲೇಖೀಸಲಾಗಿದ್ದರೂ ಇದೀಗ ‘ಪೊಟ್ಟು ಕೆರೆ’ ಎಂಬ ನಾಮಫ‌ಲಕ ಕಾಣಿಸಿಕೊಂಡಿರುವುದು ಮನಸ್ತಾಪಕ್ಕೆ ಕಾರಣವಾಗಿದೆ. ಪರ ಊರಿನವರಿಗೆ ಸ್ಥಳೀಯ ವಿಳಾಸ ನೀಡುವಾಗ, ಅಥವಾ ತಾವಿರುವ ಸ್ಥಳದ ವಿಳಾಸ ನೀಡುವಾಗ ‘ಪೊಟ್ಟು ಕೆರೆ’ ಎಂದು ಉಚ್ಛಾರಣೆ ಮಾಡುವುದು ಅತ್ಯಂತ ಮುಜುಗರವನ್ನು ತರುತ್ತಿದೆ. ಸದಾ ಕ್ರಿಯಾಶೀಲ ಹಾಗೂ ಕಲಾತ್ಮಕತೆಗೆ ಹೆಸರುವಾಸಿಯಾದ ಉಡುಪಿ ಈ ರೀತಿ ಅಪಾರ್ಥಗಳನ್ನು ಸೂಚಿಸುವ ಪದಬಳಕೆಯನ್ನು ಮಾಡುವುದು ಸರಿಯಲ್ಲವೆಂದು ಸ್ಥಳೀಯರು ದೂರುತ್ತಿದ್ದಾರೆ.

ಮುಂಚಿನಿಂದಲೂ ಇದೇ ಹೆಸರು…
ಗೋಪಾಲಪುರ 5ನೇ ರಸ್ತೆಯನ್ನು ಆರಂಭದಿಂದಲೂ ಪೊಟ್ಟುಕೆರೆ ಎಂಬ ಹೆಸರು ಇರುವುದರಿಂದ ನಗರಸಭೆಯ ಮಾರ್ಗಸೂಚಿ ಫ‌ಲಕವನ್ನು ಹಾಕಿದೆ. ಈ ಬಗ್ಗೆ ಕೆಲವರಿಂದ ಆಕ್ಷೇಪಗಳು ಕೇಳಿ ಬರುತ್ತಿವೆ. ಪೊಟ್ಟು ಕೆರೆಯ ಪರಿಸರದಲ್ಲಿರುವ ಸುಮಾರು 35 ಮನೆಯವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಮ್ಮತದ ಅಭಿಪ್ರಾಯದಂತೆ ಹೆಸರು ಬದಲಾವಣೆ ಮಾಡಲು ಪ್ರಯತ್ನಿಸುವುದಾಗಿ ಸ್ಥಳೀಯ ನಗರಸಭಾ ಸದಸ್ಯ ಚಂದ್ರಕಾಂತ್‌ ತಿಳಿಸಿದ್ದಾರೆ.

ದೇಶದ ವಿವಿಧ ಭಾಗಗಳಲ್ಲಿ ಅಪಾರ್ಥವನ್ನು ಸೂಚಿಸುವ ಅನೇಕ ಹೆಸರುಗಳು ಊರುಗಳನ್ನು ಪ್ರತಿನಿಧಿಸುತ್ತಿವೆ. ಸಾಮಾನ್ಯವಾಗಿ ಪ್ರಚಲಿತದಲ್ಲಿರುವ ಹೆಸರನ್ನೇ ನಗರಸಭೆ ಬಳಸುತ್ತದೆ. ಗೋಪಾಲಪುರ ನಿವಾಸಿಗಳು ಇದೀಗ ‘ಪೊಟ್ಟು ಕೆರೆ’ ಬದಲು ಬೃಂದಾವನ ಕೆರೆಯಾಗಬೇಕೆಂದು ಮನವಿಯನ್ನು ನೀಡಿದ್ದಾರೆ. ಸ್ಥಳೀಯ ಹೆಸರನ್ನು ಬದಲಾವಣೆ ಮಾಡುವಂತೆ ಉಡುಪಿ ಜಿಲ್ಲಾಧಿಕಾರಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಅದರಂತೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉಡುಪಿ ನಗರ ಸಭೆಯ ಪೌರಾಯುಕ್ತ ಮಂಜುನಾಥಯ್ಯ ಅವರು  ತಿಳಿಸಿದ್ದಾರೆ.

 

No Comments

Leave A Comment