Log In
BREAKING NEWS >
ವಿಶ್ವಾಸಮತದ ಅಗ್ನಿಪರೀಕ್ಷೆ ಗೆದ್ದ ಗೋವಾ ಸಿಎಂ ಪ್ರಮೋದ್ ಸಾವಂತ್...ಡಯಾನ ಸಮೂಹ ಸ೦ಸ್ಥೆಯ ಪಾಲುದಾರರಾದ ಎ೦.ಯಶವ೦ತ ಪೈ ನಿಧನ...

ಇಸ್ಲಾಂ ಉತ್ತಮ ಸಂಸ್ಕೃತಿ ಹೊಂದಿದ ಧರ್ಮ:ಉಸ್ತಾದ್‌

sunni-2-12ಕಾಪು: ಮೂಳೂರು ಅಲ್‌ ಇಹ್ಸಾನ್‌ ಕ್ಯಾಂಪಸ್‌ನಲ್ಲಿ ಮೂರು ದಿವಸಗಳ ಕಾಲ ನಡೆಯಲಿರುವ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್‌ (ಡಿ.ಕೆ.ಎಸ್‌.ಸಿ.) ನ 20ನೇ ವಾರ್ಷಿಕ ಮಹಾಸಮ್ಮೇಳನವನ್ನು ಉಸ್ತಾದುಲ್‌ ಅಸಾತೀದ್‌ ಶೈಖುನಾ ಅಲಿ ಕುಂಞಿ ಉಸ್ತಾದ್‌ ಶಿರಿಯಾ ಡಿ. 2ರಂದು ದುಆ ಪ್ರಾರ್ಥನೆ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಇಸ್ಲಾಂ ಉತ್ತಮ ಸಂಸ್ಕೃತಿ ಹೊಂದಿದ್ದು, ಇಸ್ಲಾಂ ಧರ್ಮದ ಸಂಸ್ಕೃತಿ ಮತ್ತು ಸಂಸ್ಕಾರ ಅನುಸರಣೆ ಮತ್ತು ಅನುಕರಣೆ ಮಾಡುವುದು ಇಂದು ಅನಿವಾರ್ಯ ಮತ್ತು ಅಗತ್ಯವೂ ಆಗಿದೆ. ಅದನ್ನು ಸಮಾಜದ ಕಟ್ಟಕಡೆ ವ್ಯಕ್ತಿಗೂ ತಿಳಿಯಪಡಿಸುವುದು ಪ್ರತಿಯೊಬ್ಬ ಧರ್ಮ ಗುರುವಿನ ಜವಾಬ್ದಾರಿ ಎಂದರು. ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್‌ನ ಕೇಂದ್ರ ಸಮಿತಿ ಅಧ್ಯಕ್ಷ/ಧಾರ್ಮಿಕ ಮುಂದಾಳು ಸೈಯದ್‌ ಕೆ.ಎಸ್‌. ಆಟಕೋಯ ತಂಙಳ್‌ ಕುಂಬೋಳ್‌ ಅಧ್ಯಕ್ಷತೆ ವಹಿಸಿದ್ದರು. ಸಮಸ್ತ ಕೇರಳ ಮುಶಾವರದ ಸದಸ್ಯ ಅಲ್‌ಹಾಜ್‌ ಅಬ್ದುಲ್‌ ಜಬ್ಟಾರ್‌ ಮುಸ್ಲಿಯಾರ್‌ ಮಿತ್ತಬೈಲ್‌, ಯೇನಪೊಯ ಗ್ರೂಪ್‌ ಅಧ್ಯಕ್ಷ ಯೇನಪೊಯ ಮುಹಮ್ಮದ್‌ ಕುಂಞಿ, ಮುಸ್ಲಿಮ್‌ ಸೆಂಟ್ರಲ್‌ ಕಮಿಟಿ ಅಧ್ಯಕ್ಷ ಕೆ.ಎಸ್‌. ಮುಹಮ್ಮದ್‌ ಮಸೂದ್‌, ಕೆ.ಸಿ.ಎಫ್‌. ಇಂಟರ್‌ ನ್ಯಾಶನಲ್‌ ಕೌನ್ಸಿಲ್‌ನ ಅಧ್ಯಕ್ಷ ಎಮ್ಮಸ್ಸೆಂ ಅಬ್ದುರ್ರಶೀದ್‌ ಝೈನಿ ಅಲ್‌ ಖಾಮಿಲ್‌ ಶುಭಾಶಂಸನೆಗೈದರು.

ಡಿ.ಕೆ.ಎಸ್‌.ಸಿ. ಸ್ಥಾಪಕಾಧ್ಯಕ್ಷ ಹಸನುಲ್‌ ಪೈಝಿ ಅಜ್ಜಾವರ, ಸಯ್ಯಿದ್‌ ಕೆ.ಎಸ್‌. ಮುಖಾ¤ರ್‌ ತಂಙಳ್‌ ಕುಂಬೋಳ್‌, ಅಲ್‌ಹಾಜ್‌ ಅಬ್ದುರ್ರಹಮಾನ್‌ ಮದನಿ ಮೂಳೂರು, ಎಂ.ಎಚ್‌.ಬಿ. ಮಹಮ್ಮದ್‌, ಮೌಲಾನಾ ಉಮ್ಮರ್‌ ದಾರಿಮಿ ಪಟ್ಟೋರಿ, ನೌಶಾದ್‌ ಹಾಜಿ ಸೂರಲ್ಪಾಡಿ, ಮೌಲಾನಾ ಮಹಿಬುಲ್ಲಾ ಖಾದ್ರಿ, ಕೆ.ಸಿ. ಇಸ್ಮಾಯಿಲ್‌ ಕಿನ್ಯಾ, ಮೌಲಾನಾ ಇದ್ರೀಸ್‌ , ಗೇರು ಅಭಿವೃದ್ಧಿ ನಿಗಮದ ಬಿ.ಎಚ್‌. ಖಾದರ್‌ ಬಂಟ್ವಾಳ, ದ.ಕ. ಜಿಲ್ಲಾ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಇಬ್ರಾಹಿಂ ಕೋಡಿಜಾಲ್‌, ಅಲ್ಪಸಂಕ್ಯಾಕ ಘಟಕದ ಅಧ್ಯಕ್ಷ ಎಂ.ಪಿ. ಮೊಯ್ದಿನಬ್ಬ, ಕಾಪು ಪುರಸಭೆ ಉಪಾಧ್ಯಕ್ಷ ಕೆ.ಎಚ್‌. ಉಸ್ಮಾನ್‌, ತಾ.ಪಂ. ಸದಸ್ಯ ಯು.ಸಿ. ಶೇಖಬ್ಬ, ಡಿಕೆಎಸ್‌ಸಿ ಪ್ರತಿನಿಧಿ ಶರೀಫ್‌ ಮರವೂರು, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಅಲ್‌ಹಾಜ್‌ ಬಿ.ಎಂ. ಮಮ್ತಾಜ್‌ ಅಲಿ ಮೊದಲಾದವರು ಉಪಸ್ಥಿತರಿದ್ದರು.

ಅಲ್‌ ಇಹ್ಸಾನ್‌ ಎಜುಕೇಶನ್‌ ಸೆಂಟರ್‌ನ ವ್ಯವಸ್ಥಾಪಕ ಯು.ಕೆ. ಮುಸ್ತಫಾ ಸಅದಿ ಸ್ವಾಗತಿಸಿದರು. ರಫೀಕ್‌ ಮಾಸ್ಟರ್‌ ಕಾರ್ಯಕ್ರಮ ನಿರೂಪಿಸಿದರು. ಸ್ವಾಗತ ಸಮಿತಿ ಸಂಚಾಲಕ ಇಸಾಕ್‌ ಬೊಳ್ವಾಯಿ ವಂದಿಸಿದರು.

No Comments

Leave A Comment