Log In
BREAKING NEWS >
ಅಮರನಾಥ ಯಾತ್ರೆ ವೇಳೆ ಕದನ ವಿರಾಮ ಮುಂದುವರೆಸಲು ಸರ್ಕಾರ ನಿರ್ಧಾರ: ಭದ್ರತಾ ಸಂಸ್ಥೆಗಳ ವಿರೋಧ....

ಕಾರ್ಕಳ : ದಾಖಲೆ ಇಲ್ಲದ 2000 ಮುಖಬೆಲೆಯ 71 ಲಕ್ಷ ರೂಪಾಯಿ ವಶಕ್ಕೆ

new-notesಉಡುಪಿ : ಜಿಲ್ಲೆಯ ಬೈಲೂರು ಗ್ರಾಮದಲ್ಲಿ  ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಖಲೆ ಇಲ್ಲದ  2000 ರೂಪಾಯಿ ಮುಖಬೆಲೆಯ 71 ಲಕ್ಷ ರೂಪಾಯಿ ಹಣವನ್ನು ಶುಕ್ರವಾರ ವಶಕ್ಕೆ ಪಡೆದಿರುವ ಬಗ್ಗೆ ವರದಿ ಯಾಗಿದೆ.

ಮಂಗಳೂರು ಮೂಲದ ಮೂವರು ಹಣವನ್ನು ಸಾಗಿಸುತ್ತಿದ್ದರು ಎಂದು ಹೇಳಲಾಗಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.ಪ್ರಕರಣವನ್ನು ಮಂಗಳೂರು ಐಟಿ ವಿಭಾಗಕ್ಕೆ ವರ್ಗಾಯಿಸಲಾಗಿದೆ. ಬಂಧಿತರು ಇಮ್ರಾನ್‌, ಆಸೀಫ್ ಮತ್ತು ದೀಪಕ್‌ ಎಂದು ತಿಳಿದು ಬಂದಿದೆ.

ಗುರುವಾರ ಬೆಂಗಳೂರಿನಲ್ಲಿ ದಾಳಿ ನಡೆಸಿದ ಐಟಿ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಮಹದೇವಪ್ಪ ಅವರ ಆಪ್ತ ಅಧಿಕಾರಿಗಳಾಗಿದ್ದ  ಚಿಕ್ಕರಾಯಪ್ಪ  ಜಯಚಂದ್ರ ಅವರ ನಿವಾಸದ ಮೇಲೆ ದಾಳಿ ಮಾಡಿ 4.7 ಕೋಟಿ ಮೌಲ್ಯದ 2000 ರೂ. ನೋಟು, ಅಪಾರ 500, 100ರ ನೋಟು ಜಪ್ತಿ ಮಾಡಿದ್ದರು.

No Comments

Leave A Comment