Log In
BREAKING NEWS >
ವಿಶ್ವಾಸಮತದ ಅಗ್ನಿಪರೀಕ್ಷೆ ಗೆದ್ದ ಗೋವಾ ಸಿಎಂ ಪ್ರಮೋದ್ ಸಾವಂತ್...ಡಯಾನ ಸಮೂಹ ಸ೦ಸ್ಥೆಯ ಪಾಲುದಾರರಾದ ಎ೦.ಯಶವ೦ತ ಪೈ ನಿಧನ...

ದೆಹಲಿ ಮಾಜಿ ಸಿಎಂ ಶೀಲಾ ದೀಕ್ಷಿತ್ ಮಗಳ ಮೇಲೆ ಹಲ್ಲೆಗೆ ಯತ್ನ: ಮೂವರ ಬಂಧನ

sheela-newನವದೆಹಲಿ: ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಪುತ್ರಿ ಲತಿಕಾ ದೀಕ್ಷಿತ್ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ದೆಹಲಿಯ ಹೈಲೇ ರಸ್ತೆಯಲ್ಲಿರುವ ಉಪಸನಾ ಅಪಾರ್ಟ್ ಮೆಂಟ್ ನ ಹೊರಗೆ  ಲತಿಕಾ ಕಾಯುತ್ತಿದ್ದ ವೇಳೆ ಆರೋಪಿಗಳು ಆಕೆಯ ಮೇಲೆ ದಾಳಿ ನಡೆಸಲು ಸಂಚು ನಡೆಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ಈ ಸಂಬಂಧ ದೆಹಲಿ ಯುವ ಕಾಂಗ್ರೆಸ್ ಸದಸ್ಯ ಹಾಗೂ ಸಾಕೇತ್ ಮಾಜಿ ಶಾಸಕ ಟೆಕ್ ಚಂದ್ ಶರ್ಮಾ ಅವರ ಮೊಮ್ಮಗ ಶಶಿಕಾಂತ್ ಶರ್ಮಾ ಬಾರಕಂಬಾ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನವೆಂಬರ್ 17 ರಂದು ರಾತ್ರಿ 11.30 ರವೇಳೆ ಶಶಿಕಾಂತ್ ಶರ್ಮಾ ತಮ್ಮ ಸ್ನೇಹಿತರಾದ ಮನೀಶ್ ಚೌದರಿ ಜೊತೆ ಲತಿಕಾ ಮನೆಯಿಂದ ಹೊರಬರುವಾಗ ಸುಮಾರು 7 ಮಂದಿ ಗುಂಪು ಅನುಮಾನಾಸ್ಪದವಾಗಿ ಅಪಾರ್ಟ್ ಮೆಂಟ್ ನ ಮುಖ್ಯದ್ವಾರದಲ್ಲಿ ನಿಂತಿದ್ದರು ಎಂದು ಶರ್ಮಾ ದೂರಿನಲ್ಲಿ ತಿಳಿಸಿದ್ದಾರೆ.

ಪೊಲೀಸರು ಬರುವ ಮುನ್ನ ನಾಲ್ವರು ಆರೋಪಿಗಳು ಇಟಿಯೋಸ್ ಕಾರಿನಲ್ಲಿ ಪರಾರಿಯಾಗಿದ್ದಾರೆ. ಉಳಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

No Comments

Leave A Comment