Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ

ಸಿಲಿಂಡರ್ ಗ್ರಾಹಕರಿಗೆ ಶಾಕ್ ನೀಡಿದ ಕೇಂದ್ರ: ಮತ್ತೆ ದುಬಾರಿಯಾಯ್ತು ಸಬ್ಸಿಡಿ ಸಿಲಿಂಡರ್

image_760x400
ನವದೆಹಲಿ(ನ.02):
ದೇಶಾದ್ಯಂತ ನೋಟು ರದ್ದು ಕ್ರಮದಿಂದ ತೊಂದರೆಗೊಳಗಾಗಿರುವ ಸಾರ್ವಜನಿಕರಿಗೆ ಮತ್ತೊಂದು ಶಾಕ್ ಕೊಟ್ಟಿದೆ ಕೇಂದ್ರ ಸರ್ಕಾರ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಸಬ್ಸಿಡಿ ಸಹಿತ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು  ಕೆಜಿ ಸಿಲಿಂಡರ್ ಅನಿಲಕ್ಕೆ 2 ರೂ 7 ಪೈಸೆ  ಏರಿಕೆ ಮಾಡಿವೆ.

ಕೇಂದ್ರ ಸರ್ಕಾರ ಸಬ್ಸಿಡಿ ಸಿಲಿಂಡರ್ ಗ್ರಾಹಕರಿಗೆ ಶಾಕ್ ನೀಡಿದೆ. ಕಳೆದ 6 ತಿಂಗಳಲ್ಲಿ ಸತತ ಏಳನೇ ಬಾರಿ ಅಡುಗೆ ಅನಿಲ ದರ ಹೆಚ್ಚಳ ಮಾಡಿದೆ. ಪ್ರತಿ ಸಿಲಿಂಡರ್ ಕೆಜಿಗೆ 2 ರೂಪಾಯಿ 07 ಪೈಸೆಯಷ್ಟು ಏರಿಕೆ ಮಾಡಲಾಗಿದ್ದು, ಇಂದಿನಿಂದಲೇ ನೂತನ ದರ ಜಾರಿಯಾಗಿದೆ.

ಸಬ್ಸಿಡಿ ಸಿಲಿಂಡರ್ ದರದಲ್ಲಿ ಏರಿಕೆ!

ಸಬ್ಸಿಡಿ ಸಿಲಿಂಡರ್ ಎಷ್ಟೆಷ್ಟು ಏರಿಕೆಯಾಗಿದೆ ಅಂತಾ ನೋಡುವುದಾದರೆ, 14.2 ಕೆಜಿ ಸಬ್ಸಿಡಿ ಸಿಲಿಂಡರ್ ಈ ಮೊದಲು 540 ರೂಪಾಯಿ ಇತ್ತು. ಈಗ ದರ 595 ರೂಪಾಯಿಗೆ ಏರಿಕೆ ಆಗಿದೆ.ಅಂದರೆ 55 ರೂಪಾಯಿ ಹೆಚ್ಚಳವಾಗಿದೆ. ಇನ್ನೂ ವಾಣಿಜ್ಯ ಸಿಲಿಂಡರ್ ಬೆಲೆ ಈ ಹಿಂದೆ 1092 ರೂಪಾಯಿ ಇತ್ತು. ಆದರೆ ಈಗ 1186 ರೂಪಾಯಿಗೆ ಏರಿಕೆಯಾಗಿದೆ. ಅಂದರೆ  94 ರೂಪಾಯಿ 50 ಪೈಸೆ ಹೆಚ್ಚಳವಾಗಿದೆ. ಎಲ್ಲಾ ತೆರಿಗೆ ಸೇರಿಸಿ ಈ ದರ ನಿಗದಿ ಮಾಡಲಾಗಿದೆ.

ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ ಕಂಪನಿಗಳು ಈ ಬೆಲೆ ಏರಿಕೆ ಮಾಡಿದ್ದು, ಜಾಗತಿಕ ಮಾರುಕಟ್ಟೆ ದರದ ಆಧಾರದ ಮೇಲೆ ಬೆಲೆಯಲ್ಲಿ ಏರಿಳಿತ ವಾಗುತ್ತಂತೆ.

ಇನ್ನೂ ವಿಮಾನ ಇಂಧನ ದರದಲ್ಲಿ ಶೇ. 3.7 ರಷ್ಟು ಇಳಿಕೆಯಾಗಿದ್ದು ಇಂದಿನಿಂದಲೇ ಈ ಪರಿಸ್ಕೃತ ದರ ಜಾರಿಯಾಗಲಿದೆ. ಆದರೆ , ಸಿಲಿಕಾನ್ ಸಿಟಿಯಂತ ದುಬಾರಿ ನಗರದಲ್ಲಿ ಮೊದಲೇ ಜೀವನ ನಿರ್ವಹಣೆಗೆ ಹೆಣಗಾಡುತ್ತಿದ್ದ ಮಧ್ಯಮ ವರ್ಗದವರಿಗೆ ಸಿಲಿಂಡರ್ ಬೆಲೆ ಏರಿಕೆ ಮತ್ತಷ್ಟು ಹೊರೆಯಾಗಿದೆ.

No Comments

Leave A Comment