Log In
BREAKING NEWS >
ಚು೦...ಚು೦ ಚಳಿಯಲ್ಲಿ ಬೃಹತ್ ಜನಸ್ತೋಮದ ನಡುವೆ ಪಲಿಮಾರು ಮಠಾಧೀಶರ ದ್ವಿತೀಯ ಪರ್ಯಾಯದ ಭವ್ಯ ಮೆರಣಿಗೆ...

ದುರ್ಬಲಗೊಂಡ ನಾಡಾ,ಚೆನ್ನೈನಲ್ಲಿ ಭಾರೀ ಮಳೆ, ನೌಕಾಪಡೆ ಸರ್ವ ಸನ್ನದ್ದ

nada-700ಚೆನ್ನೈ: ಬಂಗಾಲ ಕೊಲ್ಲಿಯಲ್ಲಿ  ತಮಿಳು ನಾಡು ಮತ್ತು ಪುದುಚೇರಿಯತ್ತ ಧಾವಿಸುತ್ತಿರುವ ನಾಡಾ ಚಂಡಮಾರುತ ಈಗ ದುರ್ಬಲವಾಗುತ್ತಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಹಾಗಿದ್ದರೂ ಇಂದು ಚೆನ್ನೈನಲ್ಲಿ ಸತತ ಒಂದು ಗಂಟೆ ಭಾರೀ ಮಳೆಯಾಗಿದೆ; ಹಲವೆಡೆ ವಿದ್ಯುತ್‌ ಪೂರೈಕೆ ನಿಂತು ಹೋಗಿದೆ; ರಸ್ತೆಗಳ ತುಂಬೆಲ್ಲ ನೀರು ಹರಿಯುತ್ತಿದ್ದು ತಗ್ಗು ಪ್ರದೇಶಗಳು ಜಲಾವೃತವಾಗಿವೆ; ಪರಿಣಾಮವಾಗಿ ಹಲವೆಡೆ ಟ್ರಾಫಿಕ್‌ ಜಾಮ್‌ ಆಗಿದೆ; ಭೀತರಾಗಿರುವ ಜನರು ಸಾಧ್ಯವಾದಷ್ಟು ಬೇಗನೆ ತಮ್ಮ ಮನೆಗಳಿಗೆ ತಲುಪುವ ಧಾವಂತ ತೋರುತ್ತಿದ್ದಾರೆ.

ದುರ್ಬಲವಾಗುತ್ತಿರುವ ನಾಡಾ ಚಂಡಮಾರುತವನ್ನು ತೀವ್ರ ವಾಯುಭಾರ ನಿಮ್ನತೆಯನ್ನಾಗಿ ಕೆಳಮಟ್ಟಕ್ಕೆ ತಂದಿರುವ ಹವಾಮಾನ ಇಲಾಖೆಯು, ಶುಕ್ರವಾರ ಬೆಳಗ್ಗೆ ಕಡಲೂರು ಸಮೀಪ ಇದು ನೆಲಕ್ಕೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ದುರ್ಬಲಗೊಂಡಿರುವ ನಾಡಾ ಚಂಡಮಾರುತ ಪ್ರಕೃತ ತಮಿಳುನಾಡು ರಾಜಧಾನಿ ಚೆನ್ನೈನಿಂದ ಸುಮಾರು 350 ಕಿ.ಇಮà. ದೂರದಲ್ಲಿದೆ. ಚೆನ್ನೈನಲ್ಲಿಂದು ಮೋಡ ಕವಿದ ವಾತಾವರಣವಿದ್ದು ಕೆಲವು ಭಾಗಗಳಲ್ಲಿ ಲಘುವಾಗಿ ಮಳೆಯಾಗುತ್ತಿದೆ.

ನಾಡಾ ಚಂಡಮಾರುತದಿಂದ ಉಂಟಾಗಬಹುದಾದ ಯಾವುದೇ ವಿಷಮ ಸ್ಥಿತಿಯನ್ನು ಎದುರಿಸಲು ತಾನು ಪೂರ್ಣವಾಗಿ ಸನ್ನದ್ಧವಾಗಿರುವುದಾಗಿ ನೌಕಾಪಡೆ ಹೇಳಿದೆ. ಶಕ್ತಿ ಮತ್ತು ಸಾತ್‌ಪುರ ಎಂಬೆರಡು ನೌಕೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದ್ದು ಪರಿಣತ ಮುಳುಗುಗಾರರು, ವೈದ್ಯರು, ರಬ್ಬರ್‌ ಬೋಟುಗಳು, ಹೆಲಿಕಾಪ್ಟರ್‌ಗಳು ಮತ್ತು ಪರಿಹಾರ ಸಾಮಗ್ರಿಗಳನ್ನು ಸಿದ್ಧವಿರಿಸಿರುವುದಾಗಿ ನೌಕಾ ಪಡೆ ಹೇಳಿದೆ.

ಹವಾಮಾನ ಇಲಾಖೆಯ ಪ್ರಕಾರ ಚೆನ್ನೈ ಮತ್ತು ತಮಿಳು ನಾಡಿನ ಕರಾವಳಿ ಭಾಗಗಳಲ್ಲಿ  ಇಂದು ಮತ್ತು ನಾಳೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ ಮೂರರಿಂದ ನಾಲ್ಕು ದಿನಗಳ ಕಾಲ ದಟ್ಟನೆಯ ಮಂಜು ಮುಸುಕಿರುವ ವಾತಾವರಣ ಇರುವ ಸಾಧ್ಯತೆ ಇದೆ ಎನ್ನಲಾಗಿದೆ.

ಚೆನ್ನೈ, ನಾಗಪಟ್ಟಿಣಂ ಮತ್ತು ಕಡಲೂರು ಮುಂತಾದ ತಮಿಳುನಾಡಿನ ಉತ್ತರ ಕರಾವಳಿ ಜಿಲ್ಲೆಗಳಲ್ಲಿ ಹಾಗೂ ಪುದುಚೇರಿಯಲ್ಲಿ ಮುಂದಿನೆರಡು ದಿನ ಶಾಲೆ ಕಾಲೇಜುಗಳಿಗೆ ರಜೆ ಸಾರಲಾಗಿದೆ.

ಕೆಲವು ವರ್ಷಗಳ ಹಿಂದೆ ಕಡಲೂರಿಗೆ ಅಪ್ಪಳಿಸಿದ್ದ ಥೇನ್‌ ಚಂಡಮಾರುತಕ್ಕಿಂತ ನಾಡಾ ಚಂಡಮಾರುತ ಕಡಿಮೆ ತೀವ್ರತೆಯಲ್ಲಿ ಇರುವುದಾಗಿ ಹವಾಮಾನ ಇಲಾಖೆ ಹೇಳಿದೆ.

ಕಳೆದ ವರ್ಷ ಚೆನ್ನೈನಲ್ಲಿ ಉಂಟಾಗಿದ್ದ ಭಾರೀ ಮಳೆ ಮತ್ತು ಪ್ರವಾಹದ ಪರಿಣಾಮವಾಗಿ ನೂರಕ್ಕೂ ಅಧಿಕ ಮಂದಿ ಮೃತಪಟ್ಟು ಹಲವು ಸಹಸ್ರ ಜನರು ಮನೆಮಾರು ಕಳೆದುಕೊಂಡಿದ್ದರು. ಆ ಕಹಿ ನೆನಪಿನ್ನೂ ಜನರಲ್ಲಿ ಹಾಗೆಯೇ ಉಳಿದಿದ್ದು ಇದೀಗ ನಾಡಾ ಚಂಡಮಾರುತದ ಬಗ್ಗೆ ಅವರು ತೀವ್ರವಾಗಿ ಭಯಭೀತರಾಗಿದ್ದಾರೆ. “ಜನರು ಯಾವುದೇ ಕಾರಣಕ್ಕೆ ಹೆದರಕೂಡದು; ಕಂಗೆಡಬಾರದು; ಸಹಕರಿಸಬೇಕು’ ಎಂದು ತಮಿಳು ನಾಡು ಸರಕಾರ ಹೇಳಿದೆ.

ಪುದುಚೇರಿ ಮುಖ್ಯಮಂತ್ರಿ ವಿ ನಾರಾಯಣ ಸ್ವಾಮಿ ಅವರು ನಾಡಾ ಚಂಡಮಾರುತದಿಂದ ಎದುರಾಗುವ ಯಾವುದೇ ಆಪತ್ತನ್ನು ಎದುರಿಸಲು ತಮ್ಮ ಸರಕಾರ ಸಂಪೂರ್ಣವಾಗಿ ಸಜ್ಜಾಗಿದೆ ಎಂದು ಹೇಳಿದ್ದಾರೆ.

No Comments

Leave A Comment