Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

ಗೃಹ ಬಳಕೆ ವಸ್ತುಗಳಿಂದಲೇ ಉಗ್ರರ ತಡೆದ ಯೋಧರ ಪತ್ನಿಯರು; ಕೂದಲೆಳೆ ಅಂತರದಲ್ಲಿ ಭಾರಿ ದುರಂತದಿಂದ ಪಾರು!

nagrota-terror-attack01ಶ್ರೀನಗರ: ನಗ್ರೋಟಾ ಸೇನಾ ಕ್ಯಾಂಪ್ ಮೇಲೆ ನಡೆದ ಉಗ್ರ ದಾಳಿ ವೇಳೆ ಭಾರತೀಯ ಯೋಧರ ಪತ್ನಿಯರು ಪ್ರದರ್ಶಸಿದ ಸಾಹಸದಿಂದಾಗಿ ಆಗಬಹುದಾಗಿದ್ದ ಮಹಾನ್ ದುರಂತವೊಂದು ತಪ್ಪಿದಂತಾಗಿದೆ.

ಜಮ್ಮು ಮತ್ತು ಕಾಶ್ಮೀರದ ನಗ್ರೋಟಾ ಸೇನಾ ಕ್ಯಾಂಪ್ ಮೇಲೆ ನಿನ್ನೆ ಮುಂಜಾನೆ ಸುಮಾರು 5 ಗಂಟೆ ವೇಳೆ ಪಾಕಿಸ್ತಾನದ ಶಸ್ತ್ರಸ್ತ್ರ ಸಜ್ಜಿತ ಉಗ್ರರು ಭಾರತೀಯ ಸೇನಾ ಸಮವಸ್ತ್ರ ಧರಿಸಿ ದಾಳಿ ನಡೆಸಿದ್ದರು. ಈ ವೇಳೆ ಕೆಲ ಉಗ್ರರು  ಸೇನಾ ಕ್ವಾಟ್ರರ್ಸ್ ಪ್ರವೇಶಿಸಿ ಅಲ್ಲಿದ್ದ ಹತ್ತಾರು ಯೋಧರ ಕುಟುಂಬಗಳನ್ನು ಒತ್ತೆಯಾಳುಗಳಾಗಿ ಇಟ್ಟುಕೊಳ್ಳಲು ಹವಣಿಸಿದ್ದರು. ಇದೇ ಕಾರಣಕ್ಕಾಗಿ ಮೂವರು ಉಗ್ರರು ಕ್ವಾಟ್ರಸ್ ನತ್ತ ನುಗ್ಗಿಬಂದಿದ್ದರು. ಆದರೆ ಸೇನಾ ಕ್ವಾಟ್ರರ್ಸ್  ಪ್ರವೇಶ ಸಾಧ್ಯವಾಗದೇ ಬೇರೆಡೆ ನುಗ್ಗಿದ್ದರು.

ಆದರೆ ಇದೀಗ ತಿಳಿದ ವಿಚಾರವೇನು ಎಂದರೆ ಉಗ್ರರು ಸೇನಾ ಕ್ವಾಟ್ರರ್ಸ್ ಪ್ರವೇಶಿಸುವುದನ್ನು ತಡೆದಿದ್ದು ಭಾರತೀಯ ಸೇನಾ ಯೋಧರ ಇಬ್ಬರು ಶೌರ್ಯವಂತ ಪತ್ನಿಯರು. ಹೌದು.. ಅಂದು ರಾತ್ರಿ ಕ್ವಾಟ್ರಸ್ ಬಳಿ  ಅನುಮಾನಾಸ್ಪದ ವ್ಯಕ್ತಿಗಳು ಓಡಾಡುತ್ತಿರುವುದನ್ನು ಗಮನಸಿದ ಯೋಧರ ಪತ್ನಿಯರಿಬ್ಬರು ಕೂಡಲೇ ಕ್ವಾಟ್ರರ್ಸ್ ನ ಬಾಗಿಲುಗಳನ್ನು ಮುಚ್ಚಿದರು. ಅಲ್ಲದೆ ಆ ಬಾಗಿಲುಗಳು ಯಾವುದೇ ಕಾರಣಕ್ಕೂ ತೆರೆಯಲಾಗದಂತೆ ತಮ್ಮ  ಮನೆಯಲ್ಲಿದ್ದ ಗೃಹ ಬಳಕೆ ವಸ್ತುಗಳನ್ನೇ ಬಾಗಿಲಿಗೆ ಅಡ್ಡಲಾಗಿ ಇಟ್ಟಿದ್ದರು.

ಈ ವೇಳೆ ಉಗ್ರರು ಸೇನಾ ಕ್ವಾಟ್ರರ್ಸ್ ಬಾಗಿಲು ತೆರೆಯುವಲ್ಲಿ ವಿಫಲರಾಗಿ ಬಳಿಕ ಬೇರೆ ಮಾರ್ಗವಿಲ್ಲದೇ ಬೇರೆಡೆ ನುಗ್ಗಿದರು ಎಂದು ತಿಳಿದುಬಂದಿದೆ.ಒಂದು ವೇಳೆ ಆ ಸೇನಾ ಕ್ವಾಟ್ರರ್ಸ್ ಗೆ ಉಗ್ರರು ನುಗ್ಗಿದ್ದೇ ಆದರೆ ನಿರೀಕ್ಷೆಗೂ ಮೀರಿದ ಭಾರಿ ದುರಂತವೊಂದು ಸಂಭವಿಸುತ್ತಿತ್ತು. ಏಕೆಂದರೆ ಆದೇ ಕ್ವಾಟ್ರರ್ಸ್ ನಲ್ಲಿ ಹತ್ತಕ್ಕೂ ಹೆಚ್ಚು ಯೋಧರ ಕುಟುಂಬಸ್ಥರು ವಾಸವಾಗಿದ್ದು,  ಯೋಧರ ಹಿರಿಯ ಪೋಷಕರು, ಪುಟ್ಟ ಮಕ್ಕಳು ಇದ್ದರು.

ಅಲ್ಲದೆ ಯೋಧರ ಪತ್ನಿಯರು ಹಾಗೂ ಆವರ ನವಜಾತ ಶಿಶುಗಳು ಕೂಡ ಅಲ್ಲೇ ಇದ್ದವು. ಒಂದು ವೇಳೆ ಉಗ್ರರು ಅಲ್ಲಿಗೆ ನುಗ್ಗಿದ್ದರೆ ಏಕಕಾಲದಲ್ಲಿ ಸುಮಾರು 45ಕ್ಕೂ ಅಧಿಕ  ಮಂದಿಯನ್ನು ಒತ್ತೆಯಾಳುಗಳಾಗಿ ಇಟ್ಟುಕೊಳ್ಳುವ ಸಾಧ್ಯತೆ ಇತ್ತು. ಆದರೆ ಯೋಧರ ಪತ್ನಿಯರು ತೋರಿದ ಧೈರ್ಯ ಹಾಗೂ ಸಾಹಸದಿಂದಾಗಿ ಇದೀಗ ಈ ಎಲ್ಲ ಕುಟುಂಬಗಳು ಸುರಕ್ಷಿತವಾಗಿವೆ.

ಈ ಬಗ್ಗೆ ಸ್ವತಃ ರಕ್ಷಣಾ ವಕ್ತಾರ ಲೆ.ಕ. ಮನೀಷ್ ಮೆಹ್ತಾ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಯೋಧರ ಪತ್ನಿಯಪ ಧೈರ್ಯ ಸಾಹಸದಿಂದಾಗಿ ಆಗಬಹುದಾಗಿದ್ದ ಭಾರಿ ದುರಂತ ತಪ್ಪಿದೆ. ಕ್ವಾಟ್ರರ್ಸ್ ಪ್ರವೇಶಿಸಲಾಗದೇ  ಉಗ್ರರು ಅಧಿಕಾರಿಗಳ ಕಚೇರಿಗಳ ಮೇಲೆ ದಾಳಿ ಮಾಡಿದ್ದರು. ಆದರೆ ಉಗ್ರರನ್ನು ಮಟ್ಟಹಾಕುವ ಮೂಲಕ 12 ಮಂದಿ ಯೋಧರು, ಇಬ್ಬರು ಮಹಿಳೆಯರು ಹಾಗೂ ಎರಡು ಪುಟ್ಟ ಮಕ್ಕಳನ್ನು ರಕ್ಷಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.

No Comments

Leave A Comment