Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಕೊಲಂಬಿಯಾ ವಿಮಾನ ಪತನ: 71ಕ್ಕೇರಿದ ಸಾವಿನ ಸಂಖ್ಯೆ, ಬ್ಲ್ಯಾಕ್ ಬಾಕ್ಸ್ ಗಾಗಿ ತೀವ್ರ ಶೋಧ

plane_cಮಿಡೆಲ್ಲಿನ್: ಬ್ರೆಜಿಲ್ ಫುಟ್ ಬಾಲ್ ಆಟಗಾರರನ್ನು ಹೊತ್ತು ಕೊಲಂಬಿಯಾಗಿ ಸಾಗುತ್ತಿದ್ದ ಚಾರ್ಟೆಡ್ ವಿಮಾನ ಮಿಡೆಲ್ಲಿನ್ ಸಮೀಪದ ಆಂಡೆಸ್ ಪರ್ವತಗಳಲ್ಲಿ ಪತನವಾಗಿದ್ದು, ವಿಮಾನದಲ್ಲಿ 71 ಮಂದಿ ದುರಂತ ಸಾವಿಗೀಡಾಗಿದ್ದಾರೆ  ಎಂದು ತಿಳಿದುಬಂದಿದೆ.ಸೋಮವಾರ ರಾತ್ರಿ ಸ್ಥಳೀಯ ಕಾಲಮಾನ ರಾತ್ರಿ 10 ಗಂಟೆ ಸುಮಾರಿನಲ್ಲಿ ಕೊಲಂಬಿಯಾದ ಮಿಡೆಲ್ಲಿನ್ ಸಮೀಪ ವಿಮಾನದ ರಾಡಾರ್ ಸಂಪರ್ಕ ಕಡಿತಗೊಂಡಿತ್ತು. ಅಂತಿಮ ಸಂದರ್ಭದಲ್ಲಿ ಪೈಲಟ್ ತುರ್ತು ಪರಿಸ್ಥಿತಿ ಘೋಷಣೆ  ಮಾಡಿದ್ದ. ಆದರೆ ಇದಾದ ಕೆಲವೇ ಕ್ಷಣಗಳಲ್ಲಿ ವಿಮಾನ ಆಂಡೆಸ್ ಪರ್ವತಗಳಲ್ಲಿ ಪತನವಾಗಿದೆ.

ವಿಮಾನ ಪತನವಾದ ಸುದ್ದಿ ತಿಳಿಯುತ್ತಿದ್ದಂತೆಯೇ ತುರ್ತು ರಕ್ಷಣಾ ಕಾರ್ಯಾಚರಣೆ ನಡೆಸಿದ ಸ್ಥಳೀಯ ಆಡಳಿತ6 ಮಂದಿ  ಪ್ರಯಾಣಿಕರನ್ನು ರಕ್ಷಣೆ ಮಾಡಿತ್ತು. ಈ ಪೈಕಿ ಬ್ರೆಜಿಲ್ ತಂಡದ ಗೋಲ್ ಕೀಪರ್ ಕೂಡ ಇದ್ದರು. ಆದರೆ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.ಉಳಿದಂತೆ ರಕ್ಷಣಾ ಕಾರ್ಯಾಚರಣೆಯಲ್ಲಿ ಈ ವರೆಗೂ 70 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬ್ರೆಜಿಲ್ ನಿಂದ ಕೊಲಂಬಿಯಾಗೆ ತೆರಳುತ್ತಿದ್ದ ಲಮಿಯಾ ಏರ್ ಲೈನ್ಸ್  ವಿಮಾನ  ಕೊಲಂಬಿಯಾಗೆ ತೆರಳುತ್ತಿದ್ದು. ಮಾರ್ಗ ಮಧ್ಯೆ ಎರಡು ಬಾರಿ ವಿಮಾನ ಲ್ಯಾಂಡ್ ಆಗಿದ್ದು, ಸ್ಯಾಂಟಾಕ್ರೂಜ್ ಹಾಗೂ ಬೊಲಿವಿಯಾದಲ್ಲಿ ಲ್ಯಾಂಡ್ ಆಗಿ ಬಳಿಕ ಕೊಲಂಬಿಯಾಕ್ಕೆ ಮತ್ತೆ ಪ್ರಯಾಣ ಆರಂಭಿಸಿತ್ತು. ಈ ನಡುವೆ ವಿಮಾನ  ವಿದ್ಯುತ್ ಮತ್ತು ತಾಂತ್ರಿಕ ದೋಷದಿಂದಾಗಿ ಮೆಡೆಲ್ಲಿನ್ ಪರ್ವತ ಶ್ರೇಣಿ ಬಳಿ ದುರಂತಕ್ಕೀಡಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ವಿದ್ಯುತ್ ಸಮಸ್ಯೆಯಿಂದಾಗಿ ವಿಮಾನ ಅಪಘಾತ: ತಜ್ಞರುಇನ್ನು ವಿಮಾನ ಅಪಘಾತ ಸಂಬಂಧ ದುರಂತ ಸ್ಥಳದಲ್ಲಿ ಪರೀಕ್ಷೆ ನಡೆಸಿದ ತಜ್ಞರ ತಂಡ ವಿಮಾನ ಅಪಘಾತಕ್ಕೆ ವಿದ್ಯುತ್ ಸಮಸ್ಯೆಯೇ ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ. ಸ್ಥಳೀಯ ಕಾಲಮಾನ ರಾತ್ರಿ 10 ಗಂಟೆ ಸುಮಾರಿನಲ್ಲಿ  ತುರ್ತು ಸಂದೇಶ ರವಾನಿಸಿದ ವಿಮಾನ ಬಳಿಕ ದುರಂತಕ್ಕೀಡಾಗಿದೆ.

ಫೈನಲ್ ಮ್ಯಾಚ್ ಆಡಲು ತೆರಳುತ್ತಿದ್ದ ಫುಟ್ ಬಾಲ್ ಆಟಗಾರರುಅಪಘಾತಕ್ಕೀಡಾದ ವಿಮಾನದಲ್ಲಿ ಫುಟ್ ಬಾಲ್ ಆಟಗಾರರು ಸ್ಥಳೀಯ ಕೋಪಾಸುಡಾಮೆರಿಕ ಪಂದ್ಯಾವಳಿಯ ಫೈನಲ್ ಪಂದ್ಯವನ್ನಾಡಲು ಕೊಲಂಬಿಯಾಗೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ. ಪ್ರಸ್ತುತ ದುರಂತದಲ್ಲಿ ಫುಟ್  ಬಾಲ್ ತಂಡದ ಬಹುತೇಕ ಆಟಗಾರರು ಸಾವನ್ನಪ್ಪಿದ್ದು, ನಿನ್ನೆ ಗಾಯಗೊಂಡಿದ್ದ ತಂಡದ ಗೋಲ್ ಕೀಪರ್ ಅನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಕೂಡ ಸಾವನ್ನಪ್ಪಿದ್ದಾನೆ ಎಂದು  ಅಧಿಕಾರಿಗಳು ತಿಳಿಸಿದ್ದಾರೆ.

No Comments

Leave A Comment