Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

national-anthemನವದೆಹಲಿ: ದೇಶದ ಎಲ್ಲ ಚಲನಚಿತ್ರಮಂದಿರಗಳಲ್ಲಿ ಇನ್ನು ಮುಂದೆ ರಾಷ್ಟ್ರಗೀತೆ ಕಡ್ಡಾಯ ಮಾಡಿ ಸುಪ್ರೀಂಕೋರ್ಟ್ ಬುಧವಾರ ಮಹತ್ವದ ಆದೇಶ ಹೊರಡಿಸಿದೆ.

ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಪ್ರಸಾರ ಮಾಡಬೇಕೇ ಅಥವಾ ಬೇಡವೇ ಎಂಬ ವಿಚಾರ ಚರ್ಚಾ ಹಂತದಲ್ಲಿರಿವಾಗಲೇ ಸುಪ್ರೀಂ ಕೋರ್ಟ್ ತನ್ನ ಮಹತ್ವದ ಆದೇಶ ಹೊರಡಿಸಿದ್ದು, ಇನ್ನು ಮುಂದೆ ಚಿತ್ರ ಪ್ರಸಾರ ಆರಂಭಕ್ಕೂ  ಮುನ್ನ ಎಲ್ಲ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆಯನ್ನು ಕಡ್ಡಾಯ ಮಾಡಿ ಮಹತ್ವದ ತೀರ್ಪು ಹೊರಡಿಸಿದೆ.

ಶ್ಯಾಂ ನಾರಾಯಣ್ ಚೌಸ್ಕಿ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತನ್ನ ಆದೇಶ ಹೊರಡಿಸಿದ್ದು, ಇದು ದೇಶಭಕ್ತಿ ಹಾಗೂ ರಾಷ್ಟ್ರೀಯತೆಗೆ ಸಂಬಂಧಿಸಿದ ವಿಚಾರವಾಗಿದೆ. ಯಾವುದೇ ಕಾರಣಕ್ಕೂ ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆಗೆ ಅಪಮಾನ ಮಾಡಬಾರದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.ಅಂತೆಯೇ ರಾಷ್ಟ್ರಗೀತೆಯ ಗೌರವ ಮತ್ತು ಸಮಗ್ರತೆ ಸಂರಕ್ಷಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಹಲವು ಆದೇಶಗಳನ್ನು ನೀಡಿದ್ದು, ಭಾರತದ ದೇಶದ ಪ್ರತಿಯೊಬ್ಬ ನಾಗರಿಕನೂ ದೇಶದ ಧ್ವಜ ಹಾಗೂ ರಾಷ್ಟ್ರಗೀತೆಯನ್ನು  ಗೌರವಿಸಲೇಬೇಕು ಎಂದು ಹೇಳಿದೆ.

ಅಂತೆಯೇ ಅನಪೇಕ್ಷಿತ ಸ್ಥಳ ಅಥವಾ ವಸ್ತುಗಳ ಮೇಲೆ ಜನಗಣಮನ ರಾಷ್ಟ್ರ ಗೀತೆಯ ಯಾವುದೇ ಸಾಲುಗಳನ್ನು ಮುದ್ರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ವಾಣಿಜ್ಯಾತ್ಮ  ಉದ್ದೇಶಗಳಿಗೆ ರಾಷ್ಟ್ರಧ್ವಜವನ್ನಾಗಲೀ ಅಥವಾ ರಾಷ್ಟ್ರಗೀತೆಯನ್ನಾಗಲಿ ಬಳಸಿಕೊಳ್ಳುವಂತಿಲ್ಲ ಎಂದು ಎಚ್ಚರಿಕೆ ನೀಡಿದೆ.ಇಂತೆಯೇ ವಿವಿಧ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆಯನ್ನು ಮತ್ತು ರಾಷ್ಟ್ರ ಧ್ವಜವನ್ನು ನಾಟಕೀಯವಾಗಿ ಬಳಕೆ ಮಾಡಬಾರದು ಎಂದು ಹೇಳಿದೆ.

ಈಗಾಗಲೇ ಮಹಾರಾಷ್ಟ್ರ ಹಾಗೂ ಕರ್ನಾಟಕದ ಕೆಲವು ಭಾಗಗಳು ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿನ ಚಿತ್ರ ಮಂದಿರಗಳಲ್ಲಿ ಚಿತ್ರ ಪ್ರಸಾರ ಆರಂಭಕ್ಕೂ ಮುನ್ನ ರಾಷ್ಟ್ರಗೀತೆಯನ್ನು ಹಾಡಲಾಗುತ್ತಿದ್ದು, ಇದೀಗ ಸುಪ್ರೀಂ  ಕೋರ್ಟ್ ಆದೇಶದಿಂದಾಗಿ ಇದು ದೇಶಾದ್ಯಂತ ಕಡ್ಡಾಯವಾಗಲಿದೆ.ಈ ಹಿಂದೆ ನಡೆದ ಹಲವು ಘಟನೆಗಳಲ್ಲಿ ರಾಷ್ಟ್ರ ಗೀತೆ ಹಾಡುವಾಗ ಎದ್ದು ನಿಂತು ಗೌರವ ಸಲ್ಲಿಸಲಿಲ್ಲ ಎಂಬ ಕಾರಣಕ್ಕೆ ಕೆಲ ಗುಂಪುಗಳು ದಾಳಿ ಮಾಡಿದ್ದರ ಕುರಿತು ವರದಿಯಾಗಿದ್ದವು. ಈ ಬಗ್ಗೆ ಚರ್ಚೆಯಾಗುತ್ತಿರುವಂತೆಯೇ ಸುಪ್ರೀಂ  ಕೋರ್ಟ್ ನ ಆದೇಶ ಎಲ್ಲ ಪರ-ವಿರೋಧ ಚರ್ಚೆಗಳಿಗೆ ತೆರೆ ಎಳೆದಿದೆ.

1960ರ ದಶಕದಲ್ಲೂ ಭಾರತದ ಚಲನಚಿತ್ರ ಮಂದಿರಗಳಲ್ಲಿ ರಾಷ್ಟ್ರಗೀತೆಯನ್ನು ಕಡ್ಡಾಯಗೊಳಿಸಲಾಗಿತ್ತು. ಬಳಿಕ 1990ರಲ್ಲಿ ಇದು ಮತ್ತೆ ಆಚರಣೆಗೆ ಬಂದಿತ್ತು. 2003ರಲ್ಲಿಯೂ ಮಹಾರಾಷ್ಟ್ರ ಸರ್ಕಾರ ಚಲನಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯಗೊಳಿಸಿತ್ತು.

No Comments

Leave A Comment