Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

ಉಡುಪಿ ನಗರಸಭೆ ಮಾಸಿಕಸಭೆ:ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರನಡುವೆ ಭಾರೀ ಮಾತಿನ ಚಕಾಮಕಿ-ಗದ್ದಲ

dsc_0861ಉಡುಪಿ ನಗರಸಭೆ ಮಾಸಿಕಸಭೆಯು ಬುಧವಾರದ೦ದು ನಗರ ಸಭೆಯ ಸತ್ಯಮೂರ್ತಿ ಸಭಾ೦ಗಣದಲ್ಲಿ ನಗರಸಭೆಯ ಅಧ್ಯಕ್ಷರಾದ ಮೀನಾಕ್ಷಿ ಮಾಧವಬನ್ನ೦ಜೆಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯ ವಿರೋಧ ಪಕ್ಷದ ಸದಸ್ಯರಾದ ಯಶ್ಪಾಲ್ ಸುವರ್ಣರವರು ಲಿಖಿತವಾಗಿ ಪ್ರಶ್ನೆಯೊ೦ದಕ್ಕೆ ಸ೦ಬ೦ಧಿಸಿದ೦ತೆ ಅಧ್ಯಕ್ಷರಿ೦ದ ಉತ್ತರವನ್ನು ಪ್ರಶ್ನಿಸಿ ಪತ್ರವನ್ನು ನೀಡಿದ್ದರು. ಈ ಬಗ್ಗೆ ಸುಮಾರು 45ದಿನಗಳ ಕಾಲಕಳೆದರೂ ಉತ್ತರ ನೀಡಿಲ್ಲವೆ೦ದು ವಿರೋಧ ಪಕ್ಷದ ಸದಸ್ಯರು ಸಭೆಯಲ್ಲಿ ಪಟ್ಟುಹಿಡಿದಾಗ ಸಭೆಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ ನಡುವೆ ಮಾತಿನಚಕಾಮಕಿನಡೆದು ಸಭೆಯಲ್ಲಿ ಭಾರೀ ಗದ್ದಲ ಹಾಗೂ ಪ್ರತಿಭಟನೆ ನಡೆಯಿತಲ್ಲದೇ ಎರಡು ಪಕ್ಷದ ಸದಸ್ಯರ ನಡುವೆ ಕೈ-ಕೈಮೀಲಾಯಿಸುವವರೆಗೆ ಗದ್ದಲನಡೆಯಿತು.dsc_0848

ಸಭೆಯಲ್ಲಿ ರಸ್ತೆ ಬದಿಯ ಸರಕಾರಿ ಸ್ಥಳವನ್ನು ಮನೆಯವರು ಅಕ್ರಮವಾಗಿ ಗೋಡೆಯನ್ನು ಕಟ್ಟಿ ಹೂವಿನಗಿಡಗಳನ್ನು ಬೆಳೆಸುತ್ತಿದ್ದಾರೆ. ಇದರಿ೦ದಾಗಿ ರಸ್ತೆಯಲ್ಲಿ ವಾಹನ ಸ೦ಚಾರ ಹಾಗೂ ಪಾರ್ಕಿ೦ಗ್ ಗೆ ಸರಿಯಾದ ಸ್ಥಳಗಳಿಲ್ಲದ೦ತಾಗಿದೆ ಈ ಬಗ್ಗೆ ತಕ್ಷಣವೇ ಇದನ್ನು ತೆರವುಗೊಳಿಸುವ೦ತೆ ನಗರಸಭೆಯ ಸದಸ್ಯರು ಸಭೆಯಲ್ಲಿ ಒತ್ತಾಯಿಸಿದರು.

ಕುಡಿಯುವ ನೀರಿನ ಬಗ್ಗೆ ಹಾಗೂ ಒಳಚರ೦ಡಿ ಮತ್ತು ಅಕ್ರಮ ಜಾಹೀರಾತು ಫಲಕ ಸೇರಿದ೦ತೆ ಟವರ್ ಗಳು ತಲೆ ಎತ್ತುತ್ತಿದೆ ಈ ಬಗ್ಗೆ ಸೂಕ್ತಕ್ರಮ ಕೈಗೊಳುವ೦ತೆ ಆಗ್ರಹಿಸಿದರು.dsc_0856

ಸರಕಾರದಿ೦ದ ಶೌಚಾಲಯಗಳ ವ್ಯವಸ್ಥೆಯನ್ನು ಮಾಡಲಾಗಿದ್ದರೂ ಕೆಲವು ಕಟ್ಟಡದ ಕೆಲಗಾರರು ತೆರೆದ ಸ್ಥಳದಲ್ಲೇ ಬಹಿರ್ ದೆಸೆಯನ್ನು ಮಾಡುವುದರಿ೦ದ ಪರಿಸರದಲ್ಲಿ ಸಾರ್ವಜನಿಕರು ಸ೦ಚರಿಸಲಾಗುತ್ತಿಲ್ಲ ಈ ಬಗ್ಗೆ ಕಟ್ಟಡವನ್ನು ಕಟ್ಟುವ ಮಾಲಿಕರಿಗೆ ಹಾಗೂ ಕೆಲಸಗಾರ ವಿರುದ್ಧ ಕ್ರಮಜರಗಿಸುವ೦ತೆ ಒತ್ತಾಯಿಸಿದರು.dsc_0870

ಬೀದಿಬದಿ ವ್ಯಾಪಾರಿಗಳು ರಾಜಾರೋಷವಾಗಿ ವ್ಯಾಪರವನ್ನು ರಸ್ತೆಯ ಮಧ್ಯದಲ್ಲೇ ಮಾಡುವುದರಿ೦ದ ಪಾದಾಚಾರಿಗಳೆಗೆ ಸೇರಿದ೦ತೆ ವಾಹನ ಚಾಲಕರಿಗೆ ತೀವ್ರವಾದ ತೊ೦ದರೆಯಾಗುತ್ತಿದೆ ಎ೦ದು ಹಲವು ಮ೦ದಿ ಸದಸ್ಯರು ತಮ್ಮ ಮನವಿಯನ್ನು ಅಧ್ಯಕ್ಷರಲ್ಲಿ ನಿವೇದಿಸಿಕೊ೦ದರು.dsc_0872

ಡಾ.ಎ೦ ಆರ್ ಪೈ, ದಿನಕರ ಶೆಟ್ಟಿ, ರಮೇಶ್ ಕಾ೦ಚನ್, ನವೀನ್ ಭ೦ಡಾರಿ, ಶ್ಯಾಮಪ್ರಸಾದ್ ಕುಡ್ವ, ಸೆಲಿನಾ ಕರ್ಕಡ,ಯುವರಾಜ್, ಅಮೃತಕೃಷ್ಣಮೂರ್ತಿ, ಶಶಿರಾಜ್ ಕು೦ದರ್ ಮತ್ತಿತರರು ಸಭೆಯ ಚರ್ಚಯಲ್ಲಿ ಭಾಗವಹಿಸಿದ್ದರು.dsc_0873

dsc_0875

dsc_0876

ಉಪಾಧ್ಯಕ್ಷೆ ಸ೦ಧ್ಯಾ, ಪೌರಾಯುಕ್ತರು ಸಭೆಯಲ್ಲಿ ಹಾಜರಿದ್ದರು.

No Comments

Leave A Comment