Log In
BREAKING NEWS >
ಅಮರನಾಥ ಯಾತ್ರೆ ವೇಳೆ ಕದನ ವಿರಾಮ ಮುಂದುವರೆಸಲು ಸರ್ಕಾರ ನಿರ್ಧಾರ: ಭದ್ರತಾ ಸಂಸ್ಥೆಗಳ ವಿರೋಧ....

ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ;3 ಯೋಧರು ಹುತಾತ್ಮ,4 ಉಗ್ರರು ಫಿನಿಶ್

armyಶ್ರೀನಗರ : ಜಮ್ಮು ಮತ್ತು ಕಾಶ್ಮೀರದಲ್ಲಿ  ಉಗ್ರರು ಮತ್ತೆ ಸೇನಾ ನೆಲೆಯನ್ನು ಗುರಿಯಾಗಿರಿಸಿಕೊಂಡು ಮಂಗಳವಾರ ಬೆಳಗ್ಗಿನ ಜಾವ ದಾಳಿ ನಡೆಸಿದ್ದು, ಮೂವರು ಬಿಎಸ್‌ಎಫ್ ಯೋಧರು  ಹುತಾತ್ಮರಾಗಿರುವ ಬಗ್ಗೆ ವರದಿಯಾಗಿದೆ. ಇನ್ನೊಂದು ಘಟನೆಯಲ್ಲಿ ಗಡಿ ನುಸುಳುತ್ತಿದ್ದ  ನಾಲ್ಕು ಉಗ್ರರನ್ನು ಹತ್ಯೆಗೈಯಲಾಗಿದೆ.

ಬೆಳಗ್ಗಿನ ಜಾವ 5.30 ರ ವೇಳೆಗೆ ಜಮ್ಮುವಿನಿಂದ 20 ಕೀ,ಮೀ.ದೂರದಲ್ಲಿರುವ ನಗ್ರೋಟಾದ ಸೇನಾ ಕ್ಯಾಂಪ್‌ಮೇಲೆ ಶಸ್ತ್ರಧಾರಿ ಉಗ್ರರು ದಾಳಿ ನಡೆಸಿದ್ದು, ಗ್ರೆನೆಡ್‌ ಎಸೆದಿದ್ದಾರೆ. ದಾಳಿ ವೇಳೆ ಮೂವರು ಯೋಧರು ಗಂಭೀರವಾಗಿ ಗಾಯಗೊಂಡು ಹುತಾತ್ಮರಾಗಿದ್ದಾರೆ ಎಂದು ವರದಿಯಾಗಿದೆ.

ಸ್ಥಳದಲ್ಲಿ ಅಡಗಿರುವ ಉಗ್ರರೊಂದಿಗೆ ಭಾರಿ ಗುಂಡಿನ ಚಕಮಕಿ ಮುಂದುವರೆದಿದೆ.  ಮೂರರಿಂದ ನಾಲ್ಕು ಉಗ್ರರು ದಾಳಿ ನಡೆಸಿರುವುದಾಗಿ ಹೇಳಲಾಗಿದ್ದು ಅವರನ್ನು ಸುತ್ತುವರಿದಿರುವ ಸೇನಾ ಯೋಧರು ಭಾರಿ ಗುಂಡಿನ ಕಾಳಗ ನಡೆಸುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸಗ್ರೋಟಾದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಗಡಿ ನುಸುಳಿತ್ತಿದ್ದ ಉಗ್ರರ ಹತ್ಯೆ 

ಸಾಂಬಾ ಸೆಕ್ಟರ್‌ನ ಅಂತರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ ಗಡಿ ನುಸುಳುತ್ತಿದ್ದ ಉಗ್ರರ ಯತ್ನವನ್ನು ಬಿಎಸ್‌ಎಫ್ ಯೋಧರು ವಿಫ‌ಲಗೊಳಿಸಿದ್ದು, ಗುಂಡಿನ ದಾಳಿ ನಡೆಸಿ ಇಬ್ಬರು ಉಗ್ರರನ್ನು ಹತ್ಯೆಗೈದಿರುವ ಬಗ್ಗೆ ವರದಿಯಾಗಿದೆ.

No Comments

Leave A Comment