Log In
BREAKING NEWS >
2020 ಮು೦ದಿನ ಪರ್ಯಾಯ ಮಹೋತ್ಸವವನ್ನು ನೆರವೇರಿಸಲಿರುವ ಶ್ರೀಅದಮಾರು ಮಠದ ಪರ್ಯಾಯಕ್ಕೆ ಶುಕ್ರವಾರದ೦ದು ಬಾಳೆ ಮಹೂರ್ತ-ಬೆಳಿಗ್ಗೆ 7.30ಕ್ಕೆ

ಎಟಿಎಂ ಹಣದೊಂದಿಗೆ ಪರಾರಿಯಾಗಿದ್ದ ಡೊಮಿನಿಕ್‌ ಕೊನೆಗೂ ಸೆರೆ

6ಬೆಂಗಳೂರು: ಎಟಿಎಂಗೆ ತುಂಬಿಸಲು ಬ್ಯಾಂಕ್‌ಗಳಿಂದ ಸಂಗ್ರಹಿಸಿದ್ದ ಹಣವನ್ನು ಸಿನಿಮೀಯ ಶೈಲಿಯಲ್ಲಿ ದೋಚಿ ಪರಾರಿಯಾಗಿದ್ದ ಡೊಮಿನಿಕ್‌ ಸೆಲ್ವರಾಜ್‌ನನ್ನು ಕೊನೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳವಾರ ಬೆಳಗ್ಗೆ ಉಪ್ಪಾರ ಪೇಟೆ ಪೊಲೀಸರು ವಶಕ್ಕೆ ಪಡೆದಿರುವುದಾಗಿ ಪಶ್ಚಿಮ ವಲಯ ಡಿಜಿಪಿ ಅನುಚೇತ್‌ ಅವರು ತಿಳಿಸಿದ್ದಾರೆ.ಆತನಿಂದ ಯಾವುದೇ ಹಣ ವಶ ಪಡಿಸಿಕೊಂಡ ಬಗ್ಗೆ ವರದಿಯಾಗಿಲ್ಲ.

 ಡೊಮಿನಿಕ್‌ ಸೆಲ್ವರಾಜ್‌ ಪತ್ನಿ ಎಲ್ವಿನ್‌ (40) ತನ್ನ ವಕೀಲರ ಜತೆ ಬಾಣಸವಾಡಿ ಠಾಣೆಗೆ ಭಾನುವಾರ ರಾತ್ರಿ ಆಗಮಿಸಿ ಶರಣಾಗಿದ್ದಳು.

ಕಳೆದ ವಾರ ನಗರದ ಕೆ.ಜಿ. ರಸ್ತೆಯಿಂದ ಹಣ ದೋಚಿ ಪತ್ನಿ ಮತ್ತು ಮಗನ ಜೊತೆ ನಗರ ತೊರೆದು ನೆರೆ ರಾಜ್ಯಗಳಲ್ಲಿ ತಲೆಮರೆಸಿಕೊಂಡಿದ್ದ ಡೊಮಿನಿಕ್‌, ತಮ್ಮನ್ನು ಪೊಲೀಸರು ಬೆನ್ನುಹತ್ತಿರುವ ಸುಳಿವು ಪಡೆದು ಭೀತಿಯಿಂದ ನಗರಕ್ಕೆ ಮರಳಿದ್ದ, ಆಗ ಮಾರ್ಗ ಮಧ್ಯೆ ಪತ್ನಿಗೆ ಸಂಬಂಧಿಕರಲ್ಲಿ ಆಶ್ರಯ ಪಡೆಯುವಂತೆ ಸೂಚಿಸಿ ಪರಾರಿಯಾಗಿದ್ದ. ಆದರೆ, ಬಂಧನ ಭೀತಿಯಿಂದ ಎಲ್ವಿನ್‌, ಪೊಲೀಸರ ಮುಂದೆ ಹಣದ ಸಮೇತ ಶರಣಾಗಿದ್ದಳು.

ಹಣ ದೋಚಿದ ಮೇಲೆ ಏನ್ಮಾಡಿದ್ರು?
ನ. 23ರಂದು ಹಣ ದೋಚಿದ ಬಳಿಕ ಡೊಮಿನಿಕ್‌ ದಂಪತಿ, ಕೊಯಮತ್ತೂರಿಗೆ ಹೋಗಿ ಅಲ್ಲಿಂದ ಕೇರಳದ ಕ್ರೈಸ್ತರ ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿದ್ದರು. ಆ ವೇಳೆ ದುಬೈನಲ್ಲಿ ನೆಲೆಸಿರುವ ತನ್ನ ತಾಯಿ ಹಾಗೂ ಹೈದರಾಬಾದ್‌, ವಿಜಯವಾಡದಲ್ಲಿ ನೆಲೆಸಿರುವ ತನ್ನ ಇಬ್ಬರು ಚಿಕ್ಕಮ್ಮಂದಿರಿಗೆ ಎಲ್ವಿನ್‌ ಕರೆ ಮಾಡಿದ್ದಳು. ಈ ಕರೆಗಳ ಬೆನ್ನು ಹತ್ತಿದ್ದ ಪೊಲೀಸರು, ಹಾಗೆ ಅವರ ಸಂಬಂಧಿಕರ ದೂರವಾಣಿ ಕರೆಗಳ ಮೇಲೂ ನಿಗಾವಹಿಸಿದ್ದರು.

ಇನ್ನೂ 12.92 ಲಕ್ಷ ಸಿಗಬೇಕು 

ನ.23ರಂದು ಕೆ.ಜಿ.ರಸ್ತೆಯಿಂದ ದೋಚಲಾದ ಬ್ಯಾಂಕ್‌ನ 1.37 ಕೋಟಿ ರೂ ಹಣದಲ್ಲಿ ಎಲ್ವಿನ್‌ನಿಂದ 79.08 ಲಕ್ಷ ರೂ ಹಾಗೂ ಅಂದು ವಾಹನದಲ್ಲಿ 42 ಲಕ್ಷ ರೂ ಪತ್ತೆಯಾಗಿದೆ. ಇನ್ನುಳಿದ 12.92 ಲಕ್ಷ ರೂ ಡೊಮಿನಿಕ್‌ ಬಳಿ ಇದ್ದು ಅದರ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

No Comments

Leave A Comment