Log In
BREAKING NEWS >
ಅಗಸ್ಟ್ 16ರಿ೦ದ ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ....

ನೋಟು ನಿಷೇಧ: ಅರ್ಧ ತಲೆ ಬೋಳಿಸಿಕೊಂಡು ಮೋದಿ ವಿರುದ್ಧ ವಿನೂತನ ಪ್ರತಿಭಟನೆ

hair-newಕೊಲ್ಲಂ: ನೋಟು ನಿಷೇಧ ವಿರೋಧಿಸಿ 68 ವರ್ಷದ ವ್ಯಕ್ತಿಯೊಬ್ಬ ಅರ್ಧ ತಲೆ ಬೋಳಿಸಿಕೊಂಡು ವಿನೂತನ ಪ್ರತಿಭಟನೆ ನಡೆಸಿದ್ದಾರೆ.

ಕೇರಳದ ಕೊಲ್ಲಂನಲ್ಲಿ ರಸ್ತೆಬದಿ ವ್ಯಾಪಾರಿಯಾಗಿರುವ ಯಹಿಕಕ್ಕಾ ಎಂಬಾತ ತನ್ನ ಅರ್ಧ ತಲೆ ಬೋಳಿಸಿಕೊಂಡು ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಪ್ರತಿಭಟನೆ ನಡೆಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಿದ್ದಿಯಾಗಿದ್ದಾನೆ.ಪ್ರಧಾನಿ ನರೇಂದ್ರ ಮೋದಿ ಅಧಿಕಾರದಿಂದ ಕೆಳಗಿಳಿಯುವವರೆಗೂ ತಾನು ಹೀಗೆ ಅರ್ಥ ತಲೆಯಲ್ಲೇ ಇರುವುದಾಗಿ  ಆತ ಪ್ರತಿಜ್ಞೆ ಮಾಡಿದ್ದಾನಂತೆ.

ನೋಟು ನಿಷೇಧಿಂದಾಗಿ ಸಾಮಾನ್ಯ ಜನರಿಗೆ ತೊಂದರೆಯಾಗುತ್ತಿದ್ದು, ತನ್ನ ದೈನಂದಿನ ವ್ಯವಹಾರದಿಂದ ಸಂಪಾದಿಸಿದ 23 ಸಾವಿರ ರು ಹಣವನ್ನು ಬೆಂಕಿ ಹಚ್ಚಿ ಸುಟ್ಟಿರುವುದಾಗಿ ತಿಳಿಸಿದ್ದಾನೆ.

ಹಣ ವಿನಿಮಯ ಮಾಡಿಕೊಳ್ಳಲು ಬ್ಯಾಂಕ್ ನಲ್ಲಿ ಕ್ಯೂ ನಲ್ಲಿ ನಿಂತು ನಿಂತು ಬೇಸರಗೊಂಡು ಹಣ ಸುಟ್ಟು ಹಾಕಿದ್ದಾಗಿ ಆತ ತಿಳಿಸಿದ್ದಾನೆ.ಮೂರು ದಿನಗಳ ಕಾಲ ಬ್ಯಾಂಕ್ ನಲ್ಲಿ ಸರತಿ ಸಾಲಿನಲ್ಲಿ ನಿಂತರು ಹಣ ವಿನಿಮಯ ಮಾಡಿಕೊಳ್ಳಲಾಗಲಿಲ್ಲ. ಮೂರನೇ ದಿನ ಕ್ಯೂನಲ್ಲಿ ನಿಂತಿದ್ದಾಗ ಶುಗರ್ ಪ್ರಮಾಣ ಕಡಿಮೆಯಾಗಿ ಪ್ರಜ್ಞಾ ಹೀನನಾಗಿ ಬಿದ್ದೆ, ನಂತರ ಆಸ್ಪತ್ರೆಗೆ ದಾಖಲಿಸಲಾಯಿತು,  ಇದರಿಂದ ಬೇಸತ್ತು ಹಣವನ್ನು ಸುಟ್ಟು ಹಾಕಿದೆ, ನಾನು ಹೀಗೆ ಮಾಡುವಾಗ ಎಲ್ಲರೂ ಹುಬ್ಬೇರಿಸಿದರು, ಆದರೆ ನನ್ನ ಬಳಿ ಸೂಕ್ತ ಕಾರಣವಿತ್ತು ಎಂದು ಹೇಳಿದ್ದಾರೆ.

No Comments

Leave A Comment