Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಹಣ ದೋಚಿದ್ದ ಚಾಲಕನ ಪತ್ನಿ ಬಂಧನ: ₹79.8 ಲಕ್ಷ ಹಣ ಜಪ್ತಿ

banasavadiಬೆಂಗಳೂರು: ಎಟಿಎಂಗಳಿಗೆ ತುಂಬಲು ವಿವಿಧ ಬ್ಯಾಂಕ್‌ಗಳಿಂದ ಸಂಗ್ರಹಿಸಿದ್ದ ಹಣ ದೋಚಿ ಪರಾರಿಯಾಗಿದ್ದ ಡೋಮಿನಿಕ್‌ ರಾಯ್‌ ಪತ್ನಿಯನ್ನು ಬಾಣಸವಾಡಿ ಪೋಲಿಸರು ಸೋಮವಾರ ಬಂಧಿಸಿದ್ದಾರೆ.

ಬಾಣಸವಾಡಿಯ ಮನೆಯೊಂದರಲ್ಲಿ  79.8 ಲಕ್ಷ ಹಣದೊಡನೆ ಸಿಕ್ಕಿಬಿದ್ದಿರುವ ಆರೋಪಿಯ ಪತ್ನಿ ಎಲ್ವಿನ್‌ರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿ ಡಾಮಿನಿಕ್ ರಾಯ್‌ಗಾಗಿ ಬಲೆ ಬೀಸಿದ್ದಾರೆ.

ಸೆಕ್ಯುರ್ ಟ್ರಾನ್ಸಿಟ್ ಏಜೆನ್ಸಿಯ ಚಾಲಕನಾಗಿದ್ದ ಡಾಮಿನಿಕ್ ರಾಯ್ ಎರಡು ಬಾಕ್ಸ್‌ಗಳಲ್ಲಿದ್ದ 1.37 ಕೋಟಿ ಹಣದೊಂದಿಗೆ ನವೆಂಬರ್‌ 23ರಂದು ಕೆಂಪೇಗೌಡ ರಸ್ತೆಯಿಂದ ಪರಾರಿಯಾಗಿದ್ದ. ಅರಮನೆ ರಸ್ತೆಯ ಮೌಂಟ್ ಕಾರ್ಮೆಲ್ ಕಾಲೇಜು ಬಳಿ ವಾಹನ ಬಿಟ್ಟು ಪತ್ನಿ ಹಾಗೂ ಮಗನ ಜತೆ ಪರಾರಿಯಾಗಿದ್ದ

No Comments

Leave A Comment