Log In
BREAKING NEWS >
ಪಕ್ಷೇತರ ಅಭ್ಯರ್ಥಿಯಾಗಿ ಉಡುಪಿ ಶಿರೂರು ಶ್ರೀನಾಮಪತ್ರ ಸಲ್ಲಿಕೆ.....ಏಪ್ರಿಲ್ 22ರ೦ದು ಉಡುಪಿಯ ಕಲ್ಸ೦ಕದ ರಾಯಲ್ ಗಾರ್ಡನ್ ನಲ್ಲಿ ಬೃಹತ್ ಕಾ೦ಗ್ರೆಸ್ ಕಾರ್ಯಕರ್ತರ ಸಮಾವೇಶ-23ರ೦ದು ಪ್ರಮೋದ್ ಮಧ್ವರಾಜ್ ನಾಮಪತ್ರಸಲ್ಲಿಕೆ...

ಪಂಜಾಬ್‌ ಜೈಲ್‌ ಬ್ರೇಕ್‌ ಬಳಿಕ ಇಂದೋರ್‌ನಲ್ಲಿ ಹುಲಿಯಿಂದ ಝೂ ಬ್ರೇಕ್‌

indore-zoo-700ಇಂದೋರ್‌: ನಿನ್ನೆ ಭಾನುವಾರ ಅತ್ತ ಪಂಜಾಬ್‌ನಲ್ಲಿ  ಜೈಲ್‌ ಬ್ರೇಕ್‌ ನಡೆದಿತ್ತಾದರೆ ಇತ್ತ ಇಂದೋರ್‌ನಲ್ಲಿ  ಹೆಣ್ಣು ಹುಲಿಯಿಂದ ಝೂ ಬ್ರೇಕ್‌ ನಡೆದು ಮೃಗಾಲಯದೊಳಗಿದ್ದ ಸುಮಾರು 200 ಮಂದಿ ಜನರು ಪ್ರಾಣಭಯದಿಂದ ತತ್ತರಿಸಿದ ಘಟನೆ ಸಂಭವಿಸಿದೆ.

ಇಂದೋರ್‌ ಮುನಿಸಿಪಲ್‌ ಕಾರ್ಪೊರೇಶನ್‌ನ ಮೃಗಾಲದಲ್ಲಿ ನಿನ್ನೆ ಭಾನುವಾರ ಸಂಜೆ ಯಾರೋ ಕಿಡಿಗೇಡಿಗಳು ಆವರಣದೊಳಗಿದ್ದ ಹುಲಿಯ ಮೇಲೆ ಬಲೂನ್‌ ಎಸೆದು ಕೀಟಲೆ ಮಾಡಿದ್ದರು.

ಇದರಿಂದ ಕೆರಳಿ ಸಿಟ್ಟಿಗೆದ್ದ ಹುಲಿ ಅದ್ಹೇಗೋ ತನ್ನ ಆವರಣದಿಂದ ಹೊರ ಜಿಗಿದು ಬಂದು ಸುಮಾರು 90 ನಿಮಿಷಗಳ ಕಾಲ ಮೃಗಾಲಯದಲ್ಲಿ ಕಳ್ಳ ಹೆಜ್ಜೆಗಳನ್ನಿಡುತ್ತಾ ಸುತ್ತಾಟ ನಡೆಸಿತು.

ಹುಲಿ ಈ ರೀತಿ ಮೃಗಾಲಯದಲ್ಲಿ ಭಯಾನಕ ಗಾಂಭೀರ್ಯದಿಂದ ಮುಕ್ತವಾಗಿ ತಿರುಗಾಟಕ್ಕೆ ತೊಡಗಿಕೊಂಡದ್ದನ್ನು ಕಂಡ ಜನರು, ಹೆಂಗಸರು, ಮಕ್ಕಳು ಸಿಕ್ಕಸಿಕ್ಕಲ್ಲೆಲ್ಲ ಪ್ರಾಣ ಭಯದಿಂದ ಓಡತೊಡಗಿದರು. ಕೊನೆಗೂ ಹುಲಿಯನ್ನು ಅದರ ಆವರಣದೊಳಗೆ ಉಪಾಯದಿಂದ ತಲುಪಿಸುವಲ್ಲಿ  ಮೃಗಾಲಯದ ಅಧಿಕಾರಿಗಳು ಸಫ‌ಲರಾದರು ಎಂದು ಪ್ರಭಾರಾಧಿಕಾರಿ ಉತ್ತಮ್‌ ಯಾದವ್‌ ಹೇಳಿದರು.

ಆದರೆ 90 ನಿಮಿಷಗಳ ತನ್ನ ಮುಕ್ತ ತಿರುಗಾಟದ ವೇಳೆ ಹುಲಿ, ಮೃಗಾಲಯಕ್ಕೆ ಬಂದಿದ್ದ ಯಾವುದೇ ಸಂದರ್ಶಕರ ಮೇಲೆ ದಾಳಿ ಮಾಡಲಿಲ್ಲ. ಸುದ್ದಿ ತಿಳಿದು ಧಾವಿಸಿ ಬಂದ ಪೊಲೀಸರು ಭಯಭೀತರಾದ ಜನರನ್ನು ತಮ್ಮ ವಾಹನಗಳಲ್ಲಿ ಸುರಕ್ಷಿತವಾಗಿ ಹೊರ ಸಾಗಿಸಿದರು.

ಈ ಘಟನೆಯ ಬಗ್ಗೆ ಈಗ ತನಿಖೆ ನಡೆಯುತ್ತಿದೆ. ಮೃಗಾಲಯ ಸುರಕ್ಷೆಯನ್ನು ಹೆಚ್ಚಿಸಬೇಕೆಂಬ ಕೂಗು ಕೇಳಿ ಬಂದಿದೆ.

No Comments

Leave A Comment