Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

ಅಮಿತ್ ಶಾ ಒಬ್ಬ ಕೊಲೆ ಆರೋಪಿ, ಮೋದಿ ಪ್ರಧಾನಿಯಾಗದಿದ್ದರೆ ಜೈಲಿನಲ್ಲಿರುತ್ತಿದ್ದರು: ಸಿದ್ದರಾಮಯ್ಯ

siddu-cm28ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅಮಿತ್ ಶಾ ಒಬ್ಬ ಕೊಲೆ ಆರೋಪಿ, ನರೇಂದ್ರ ಮೋದಿ ಅವರು ಪ್ರಧಾನಿಯಾಗದಿದ್ದರೆ ಅವರು ಜೈಲಿನಲ್ಲಿರುತ್ತಿದ್ದರು ಎಂದು ಸೋಮವಾರ ಆರೋಪಿಸಿದ್ದಾರೆ.

ಇಂದು ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬೆಂಗಳೂರು ಐಟಿ ಬಿಜ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎಂ, ಬಿಜೆಪಿಯವರಿಗೆ ನಮ್ಮ ಸರ್ಕಾರದ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ. ಅತ್ಯಂತ ಕಡು ಭ್ರಷ್ಟರು, ಜೈಲಿಗೆ ಹೋಗಿ ಬಂದವರು. ನೋಟು ಎಣಿಕೆ ಯಂತ್ರ ಮನೆಯಲ್ಲಿ ಇಟ್ಟುಕೊಂಡಿದ್ದವರನ್ನು ಪಕ್ಕದಲ್ಲೇ ಕುಳ್ಳಿರಿಸಿಕೊಂಡು ನಮ್ಮ ಸರ್ಕಾರವನ್ನು ಭ್ರಷ್ಟ ಸರ್ಕಾರವೆಂದು ಆರೋಪಿಸುತ್ತಾರಲ್ಲ ಅಮಿತ್ ಶಾಗೆ ಏನು ಹೇಳೋದು ಎಂದು ವಾಗ್ದಾಳಿ ನಡೆಸಿದರು.

ದೇಶಾದ್ಯಂತ ಪ್ರಧಾನಿ ಮೋದಿ ಜನಪ್ರಿಯತೆ ಕುಗ್ಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಮೋದಿ ಹೀನಾಯವಾಗಿ ಸೋಲುತ್ತಾರೆ. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ವಿರುದ್ಧವೂ ವಾಗ್ದಾಳಿ ನಡೆಸಿದ ಸಿಎಂ, 24 ಗಂಟೆಯಲ್ಲಿ ಮಹಾದಾಯಿ, ಕಾವೇರಿ ವಿವಾದ ಬಗೆ ಹರಿಸುತ್ತೇನೆ ಎನ್ನುವ ಯಡಿಯೂರಪ್ಪ ತಮ್ಮ ಸರ್ಕಾರ ಇದ್ದಾಗ ಏಕೆ ವಿವಾದ ಬಗೆ ಹರಿಸಲಿಲ್ಲ. ಮಹಾದಾಯಿ ಟ್ರಿಬ್ಯೂನಲ್ ರಚನೆ ಆಗಿದ್ದೇ ಅವರ ಕಾಲದಲ್ಲಿ ಅಲ್ಲವೇ ಎಂದು ಪ್ರಶ್ನಿಸಿದರು.

ರಾಜ್ಯದ ಹನ್ನೊಂದು ಗ್ರಾಮ ಪಂಚಾಯ್ತಿಗಳಿಗೆ ವೈಫೈ ಸೌಲಭ್ಯ ಒದಗಿಸಿರುವುದು ಸಂತೋಷ ತಂದಿದೆ. ರಾಜ್ಯದ ಟೂ ಟೈರ್ ಮತ್ತು ತ್ರೀ ಟೈರ್ ಸಿಟಿಗಳಲ್ಲೂ ಉದ್ಯಮಗಳ ಸ್ಥಾಪನೆಗೆ ಉತ್ತೇಜನ ನೀಡುವುದು ನಮ್ಮ ಸರ್ಕಾರದ ಆದ್ಯತೆ. ಗ್ರಾಮ ಮಟ್ಟದಲ್ಲಿ ಡಿಜಿಟಲ್ ಆನ್‌ಲೈನ್‌ ಸೌಲಭ್ಯ ಕಲ್ಪಿಸಿ ಕೃಷಿ ಮಾರುಕಟ್ಟೆಯನ್ನು ವಿಸ್ತರಿಸುವುದು ನಮ್ಮ ಸರ್ಕಾರದ ಉದ್ದೇಶ ಎಂದರು.

ನಾವೂ ಕೂಡ ಕಪ್ಪು ಹಣ ದಂಧೆಕೋರರನ್ನು ಸಮರ್ಥಿಸ್ತಾ ಇಲ್ಲ. ಕಪ್ಪು ಹಣ, ಖೋಟಾ ನೋಟು ಮಟ್ಟ ಹಾಕುವುದಕ್ಕೆ ನಮ್ಮ ಬೆಂಬಲವಿದೆ. ಆದರೆ ಸಿದ್ಧತೆ ಇಲ್ಲದೆ ನೋಟು ನಿಷೇಧ ಮಾಡಿದ ಕ್ರಮ ಸರಿಯಲ್ಲ ಅನ್ನೋದು ನಮ್ಮ ವಾದ ಎಂದು ಕಾಂಗ್ರೆಸ್ ನಿಲುವನ್ನು ಸಿಎಂ ಸಮರ್ಥಿಸಿಕೊಂಡರು.

No Comments

Leave A Comment