Log In
BREAKING NEWS >
ಕರಾವಳಿಯಲ್ಲಿ ಭಾರೀ ಮಳೆ-ಹಲವೆಡೆಯಲ್ಲಿ ನೆರೆ...ಜೂನ್ 22ರ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶ್ರೀಅನುಗ್ರಹ ಲಕ್ಷ್ಮೀವೃತ ಕಾರ್ಯಕ್ರಮವು ಜರಗಲಿದೆ....

ಮಧುರೈನಲ್ಲಿ ಅಲ್ ಖೈದಾಗೆ ಸೇರಿದ 3 ಶಂಕಿತ ಉಗ್ರರ ಬಂಧನ

al-qaedaಮಧುರೈ: ಅಲ್ ಖೈದಾ ಉಗ್ರ ಸಂಘಟನೆಗೆ ಸೇರಿದ ಮೂವರು ಶಂಕಿತ ಉಗ್ರರನ್ನು ಎನ್ಐಎ ಮತ್ತು ತಮಿಳುನಾಡು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಎನ್ಐಎ ಕಾರ್ಯಾಚರಣೆ ವೇಳೆ ಐವರು ಉಗ್ರರ ಪೈಕಿ ಮೂವರನ್ನು ಉಗ್ರರನ್ನು ಬಂಧಿಸಲಾಗಿದ್ದು ಮತ್ತಿಬ್ಬರು ಉಗ್ರರ ಬಂಧನಕ್ಕೆ ಜಾಲ ಬೀಸಿದ್ದಾರೆ. ಬಂಧಿತ ಉಗ್ರರನ್ನು ಕರೀಂ, ಅಯೂಬ್, ಅಬ್ಬಾಸ್ ಅಲಿ ಎಂದು ಗುರುತಿಸಲಾಗಿದೆ. ತಲೆಮರೆಸಿಕೊಂಡಿರುವ ಇನ್ನಿಬ್ಬರು ಉಗ್ರರಾದ ದಾವೂದ್ ಸುಲೇಮಾನ್ ಹಾಗೂ ಹಕೀಂಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.

ಈ ಉಗ್ರರು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 22 ನೇತಾರರ ಹತ್ಯೆಗೆ ಸಂಚು ಹಾಗೂ ಆರು ದೂತವಾಸ ಕಚೇರಿಗಳ ಮೇಲೆ ದಾಳಿ ನಡೆಸುವ ಬೆದರಿಕೆ ಹಾಕಿದ್ದರು.

ಬಿಜೆಪಿ ಮುಖಂಡ ಎಲ್ ಕೆ ಅಡ್ವಾನಿ ಅವರ ರ್ಯಾಲಿ ವೇಳೆ ಎರಡು ಬಾರಿ ಪೈಪ್ ಬಾಂಬ್ ಸ್ಫೋಟವಾಗಿತ್ತು.

No Comments

Leave A Comment