Log In
BREAKING NEWS >
ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನಕ್ಕೆ ಮೇ ೧೦ರ೦ದು ಶ್ರೀಗೋಕರ್ಣಮಠಾಧೀಶರು ತಮ್ಮ ಶಿಷ್ಯರೊ೦ದಿಗೆ ಆಗಮಿಸಲಿದ್ದು ೫ದಿನಗಳ ಕಾಲ ಮೊಕ್ಕ೦ ಹೂಡಲಿದ್ದಾರೆ....

ಉಡುಪಿ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ: 2 ಫಲಾನುಭವಿಗಳಿಗೆ ಚೆಕ್

gs2_1_ಉಡುಪಿ: ಉಡುಪಿ ಸಾರ್ವಜನಿಕ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಡಿಯಾಳಿಯ ಸುವರ್ಣ ಸಂಭ್ರಮದ ಅಂಗವಾಗಿ ತನ್ನ ಸಾಮಾಜಿಕ ಬದ್ಧತೆಯ ಅನುಗುಣವಾಗಿ ತಂದೆ ಮತ್ತು ತಾಯಿಯನ್ನು ಕಳೆದುಕೊಂಡ ಅವಕಾಶವಂಚಿತ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ನೀಡುವ ಆಸರೆ ಯೋಜನೆಯನ್ನು ಸಪ್ಟೆಂಬರ್ 8ರಂದು ಕರ್ನಾಟಕದ ಮಾನ್ಯ ರಾಜ್ಯಪಾಲರಾದ ವಜ್ಜೂಬಾಯಿ ವಾಲರವರು ಲೋಕಾರ್ಪಣೆ ಮಾಡಿದ್ದರು.

ಉಡುಪಿ ಸಾರ್ವಜನಿಕ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿಯು ತನ್ನ ಮಾತಿನಂತೆ ಇದೀಗ 25 ಅವಕಾಶವಂಚಿತ ಮಕ್ಕಳಿಗೆ ನೀಡಿತು.ಇದರ ಅಂಗವಾಗಿ ನವೆಂಬರ್ 25 ರಂದು ತನ್ನ ಯೋಜನೆಯ ಕೊನೆಯ 2 ಫಲಾನುಭವಿಗಳಿಗೆ ಚೆಕ್ ನ್ನು ಹಸ್ತಾಂತರಿಸಲಾಯಿತು. ಈ ಸಂಧರ್ಭದಲ್ಲಿ ಉಡುಪಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸುವರ್ಣ ಸಮಿತಿಯ ಅಧ್ಯಕ್ಷರಾದ ಕೆ ರಘಪತಿ ಭಟ್, ಕಾರ್ಯದರ್ಶಿಗಳಾದ ಕೆ.ರಾಘವೇಂದ್ರ ಕಿಣಿ, ಜೊತೆ ಕಾರ್ಯದರ್ಶಿಯಾದ ಗಿರೀಶ್ ಅಂಚನ್, ಕೋಶಾಧಿಕಾರಿಗಳಾದ ಎಂ ವಲ್ಲಭ್ ಭಟ್, ಸತೀಶ್ ಕುಲಾಲ್ ಹಾಗೂ ಸಮಿತಿಯ ಸದಸ್ಯರಾದ ಎಂ ಸೋಮಶೇಖರ್ ಭಟ್, ಸುವರ್ಧನ್ ನಾಯಕ್, ಸಂತೋಷ್ ಶೆಟ್ಟಿ, ರಮ್ಯಾ ಆರ್ ಕಿಣಿ, ಸುಶ್ಮಿತಾ ಉಪಸ್ಥಿತರಿದ್ದರು.

ಶೃತಿ ಶೇಟ್ ಸ್ವಾಗತಿಸಿ ಅಕ್ಷತಾ ವಂದಿಸಿದರು. ಬೆಂಗಳೂರಿನ ಉದ್ಯೋಗಿ ಉಡುಪಿ ಪೆರ್ಣಂಕಿಲ ಮೂಲದವರಾದ ಅಶೋಕ ಪ್ರಭು ಪಿ ಮತ್ತು ಅಶ್ವಿನಿ ಎ ಪ್ರಭು ದಂಪತಿಗಳು 12/01/2016 ರಂದು ಬೆಂಗಳೂರಿನ ಚೆನ್ನರಾಯಪಟ್ಟಣ ದಲ್ಲಿ ನ್ಯಾನೋ ಕಾರ್ ಅಪಘಾತದಲ್ಲಿ ದುರ್ಮರಣಕ್ಕಿಡಾದರು. ಇವರ ಮಕ್ಕಳಾದ ಆದರ್ಶ ಅಶೋಕ್ ಪ್ರಭು ಮತ್ತು ಅನನ್ಯ ಅಶೋಕ್ ಪ್ರಭು ಇವರನ್ನು ಉಡುಪಿ ಸಾರ್ವಜನಿಕ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿಯು ದತ್ತು ಪಡೆದುಕೊಂಡಿತು.

No Comments

Leave A Comment