Log In
BREAKING NEWS >
ಅಮರನಾಥ ಯಾತ್ರೆ ವೇಳೆ ಕದನ ವಿರಾಮ ಮುಂದುವರೆಸಲು ಸರ್ಕಾರ ನಿರ್ಧಾರ: ಭದ್ರತಾ ಸಂಸ್ಥೆಗಳ ವಿರೋಧ....

‘ಆಕ್ರೋಶ ದಿನ’ದ ವಿರುದ್ಧ ಆಕ್ರೋಶ: ಪ್ರಧಾನಿ ಬೆಂಬಲಕ್ಕೆ ನಿಂತ ವ್ಯಾಪಾರಿಗಳು

narendra-modiಬೆಳಗಾವಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ  ನೋಟು ರದ್ದು  ಕ್ರಮವನ್ನು ವಿರೋಧಿಸಿ ದೇಶದಾದ್ಯಂತ ವಿರೋಧ ಪಕ್ಷಗಳು ಘೋಷಿಸಿರುವ ‘ಆಕ್ರೋಶ ದಿನ’ ಆಚರಣೆಗೆ ವಿರುದ್ಧವಾಗಿ ಬೆಳಗಾವಿಯ ಕೆಲ ವ್ಯಾಪಾರಿಗಳು ವಿರೋಧ ವ್ಯಕ್ತ ಪಡಿಸಿದ್ದಾರೆ.

ವಿರೋಧ ಪಕ್ಷಗಳ ಆಕ್ರೋಶ ದಿನದ ಬಂದ್ ಆಚರಣೆಯಿಂದ ದೂರ ಉಳಿದ ವ್ಯಾಪಾರಿಗಳು ತಮ್ಮ ಅಂಗಡಿಗಳ ಮುಂದೆ ‘ಬಂದ್‌ಗೆ ನಮ್ಮ ಬೆಂಬಲವಿಲ್ಲ, ನಾವು ನರೇಂದ್ರ ಮೋದಿಯವರ ದಿಟ್ಟನಡೆಯನ್ನು ಬೆಂಬಲಿಸುತ್ತೇವೆ’ ಎಂಬ ಬೋರ್ಡ್‌ಗಳನ್ನು ತೂಗುಹಾಕಿ ವ್ಯಾಪಾರ ಆರಂಭಿಸಿದ್ದಾರೆ.

ಜೊತೆಗೆ ಈದಿನ ಇಲ್ಲಿನ ಮಾರುತಿ ಗಲ್ಲಿಯಲ್ಲಿನ ಸಿದ್ಧಿ ಯೂನಿಕ್ ಕಲೆಕ್ಷನ್ ಅಂಗಡಿ ಮಾಲೀಕ ಗ್ರಾಹಕರಿಗೆ ಶೇ.೨೫ರಷ್ಡು ರಿಯಾಯತಿಯನ್ನೂ ಘೋಷಿಸಿ ವಿರೋಧ ಪಕ್ಷಗಳ ಆಕ್ರೋಶ ದಿನವನ್ನು ವಿಶಿಷ್ಟ ರೀತಿಯಲ್ಲಿ ವಿರೋಧಿಸಿದ್ದಾರೆ.

ವಿಕಾಸ್ ಪೊರವಾಲ್ ಎಂಬುವವರು ಗ್ರಾಹಕರಿಗೆ ಜಿಲೇಬಿ ಹಂಚಿಕೆ ಮಾಡುವ ಮೂಲಕ ನರೇಂದ್ರಮೋದಿಯವರ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

No Comments

Leave A Comment